ಛಾಯಾಗ್ರಾಹಕ ಉಮಾಶಂಕರ್‌ಗೆ ಕೆಪಿಎ ಛಾಯಾಭೂಷಣ ಪ್ರಶಸ್ತಿ

| Published : Aug 15 2025, 01:00 AM IST

ಛಾಯಾಗ್ರಾಹಕ ಉಮಾಶಂಕರ್‌ಗೆ ಕೆಪಿಎ ಛಾಯಾಭೂಷಣ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ 186 ನೇ ವರ್ಷದ ವಿಶ್ವ ಛಾಯಾಗ್ರಹಣ ದಿನಾಚರಣೆ - 2025 ಸಂದರ್ಭದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯ ಮಟ್ಟದ ಕೆಪಿಎ ಛಾಯಾಭೂಷಣ ಪ್ರಶಸ್ತಿಯನ್ನು ಘೋಷಿಸಿದೆ

ದೊಡ್ಡಬಳ್ಳಾಪುರ: ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ 186 ನೇ ವರ್ಷದ ವಿಶ್ವ ಛಾಯಾಗ್ರಹಣ ದಿನಾಚರಣೆ - 2025 ಸಂದರ್ಭದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯ ಮಟ್ಟದ ಕೆಪಿಎ ಛಾಯಾಭೂಷಣ ಪ್ರಶಸ್ತಿಯನ್ನು ಘೋಷಿಸಿದೆ.

ದೊಡ್ಡಬಳ್ಳಾಪುರದ ಸೃಜನಶೀಲ ಛಾಯಾಗ್ರಾಹಕರಾದ ಬಿ.ಎನ್.ಉಮಾಶಂಕರ್‌ ಈ ಬಾರಿಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಅವರು ದೊಡ್ಡಬಳ್ಳಾಪುರ ಛಾಯಾಗ್ರಾಹಕರ ಸಂಘದ ಅಜೀವ ಸದಸ್ಯರಾಗಿದ್ದು ಎರಡೂ ಬಾರಿ ಕಾರ್ಯದರ್ಶಿ ಯಾಗಿ ಒಂದು ಬಾರಿ ಉಪಾಧ್ಯಕ್ಷರಾಗಿ ಹಾಗೂ 15 ವರ್ಷಗಳಿಂದ ಕೆಪಿಎ ನಿರ್ದೇಶಕರಾಗಿ, ತಾಲೂಕು ಮಟ್ಟದಿಂದ ರಾಜ್ಯಮಟ್ಟದ ಸಂಘಟನೆಯಲ್ಲಿ ಸಂಘದ ಏಳಿಗೆಗಾಗಿ ಶ್ರಮವಹಿಸಿ ದುಡಿದಿದ್ದಾರೆ.

ರಾಜ್ಯಾದ್ಯಂತ ಕೆಪಿಎ ರಾಜ್ಯ ಸಂಘದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಘದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ, ಹಾಗೆಯೇ ಛಾಯಾಗ್ರಹಣ ಕ್ಷೇತ್ರದಲ್ಲಿ ರಾಜ್ಯ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಬಹುಮಾನಗಳನ್ನು ಪಡೆಯುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರ ಛಾಯಾಗ್ರಹಣ ಸಾಧನೆಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ದೊರೆತಿವೆ. ಕಳೆದ 4 ವರ್ಷದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿ 250 ಕ್ಕೂ ಹೆಚ್ಚಿನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬಹುಮಾನಗಳನ್ನು ಪಡೆದಿರುವ ಇವರ ಸಾಧನೆ ಹಾಗೂ ಸಂಘಟನಾ ಸೇವೆ ಅನನ್ಯವಾಗಿದೆ ಎಂದು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ್ ತಿಳಿಸಿದ್ದಾರೆ.14ಕೆಡಿಬಿಪಿ3- ಛಾಯಾಗ್ರಾಹಕ ಬಿ.ಎನ್.ಉಮಾಶಂಕರ್.