ಇಂದು, ನಾಳೆ ಕೆಪಿಎಸ್ಸಿ ಪರೀಕ್ಷೆ: ಸಂವೀಕ್ಷಕರಿಗೆ ಬಾಡಿ ಕ್ಯಾಮೆರಾ ಅಳವಡಿಕೆ

| Published : Nov 04 2023, 12:30 AM IST

ಇಂದು, ನಾಳೆ ಕೆಪಿಎಸ್ಸಿ ಪರೀಕ್ಷೆ: ಸಂವೀಕ್ಷಕರಿಗೆ ಬಾಡಿ ಕ್ಯಾಮೆರಾ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಇಎ ಅಕ್ರಮದ ನಂತರ ತುಂಬಾ ಕಟ್ಟುನಿಟ್ಟು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಾಡಿ ಕ್ಯಾಮೆರಾ ಕ್ರಮ ಕೈಗೊಂಡಿದ್ದು ಇದೇ ಮೊದಲು
ಕೆಇಎ ಅಕ್ರಮದ ನಂತರ ತುಂಬಾ ಕಟ್ಟುನಿಟ್ಟು । ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಾಡಿ ಕ್ಯಾಮೆರಾ ಕ್ರಮ ಕೈಗೊಂಡಿದ್ದು ಇದೇ ಮೊದಲು - ಪ್ರತಿ ಕೊಠಡಿಯಲ್ಲೂ ಸೀಸಿ ಟೀವಿ ಜಾಲ, ಅಭ್ಯರ್ಥಿಗಳ, ಸಂವೀಕ್ಷರ ಮೇಲೆ ನಿಗಾ - ಪರೀಕ್ಷಾ ಪ್ರಕ್ರಿಯೆ ಸಂಪೂರ್ಣ ವಿಡಿಯೋ ಚಿತ್ರೀಕರಣಕ್ಕೆ ಮುಂದಾದ ಕೆಪಿಎಸ್‌ಸಿ ಕನ್ನಡಪ್ರಭ ವಾರ್ತೆ ಕಲಬುರಗಿ ರಾಜ್ಯದ ನಿಗಮ, ಮಂಡಳಿಗಳಲ್ಲಿನ ಖಾಲಿ ಹುದ್ದೆಗಳಿಗಾಗಿ ಕೆಇಎ ನಡೆಸಿದ್ದ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನ.4ರ ಶನಿವಾರ ಮತ್ತು 5ರ ಭಾನುವಾರ ತಾನು ನಡೆಸುತ್ತಿರುವ ಲಿಖಿತ ಪರೀಕ್ಷೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೇ ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಲ್ಲಿನ ಸಂವೀಕ್ಷಕರಿಗೆ (ಇನ್ವಿಜಿಲೇಟರ್ಸ್‌- ಅಬ್ಸರ್ವರ್‌) ಬಾಡಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಹೀಗೆ ಬಾಡಿ ಕ್ಯಾಮೆರಾ ಅಳವಡಿಸುವುದರಿಂದ ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಗಳಲ್ಲಿ ಅಭ್ಯರ್ಥಿಗಳ ಮತ್ತು ಅಲ್ಲಿನ ರ್ತವ್ಯದ ಮೇಲಿರುವ ಸಂವೀಕ್ಷಕರುಗಳ ಚಲನವಲನದ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಅನುಕೂಲವಾಗಲಿದೆ. ಇವುಗಳ ಜೊತೆಗೇ ಪರೀಕ್ಷಾ ಕೇಂದ್ರದ ಪರೀಕ್ಷಾ ಪ್ರಕ್ರಿಯೆಯನ್ನೆಲ್ಲ ಸಂಪರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಅಭ್ಯರ್ಥಿಗಳ ನೈಜತೆ ಪರಿಶೀಲಿಸಲು ಬಯೋಮೆಟ್ರಿಕ್‌ ಬಳಸಿ ಮುಖದ ಗುರುತು ಪತ್ತೆ ಹಚ್ಚಲು ಕೆಪಿಎಸ್‌ಸಿ ಮುಂದಾಗಿದೆ. ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 242 ಲೆಕ್ಕ ಸಹಾಯಕರು, 67 ಕಿರಿಯ ಲೆಕ್ಕ ಸಹಾಯಕರು, ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ನಿರೀಕ್ಷಕರು 47 (ಮೂಲವೃಂದ) ಮತ್ತು 534 (ಹೈ- ಕ ವೃಂದ) ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದೆ. ರಾಜ್ಯದ 23 ಜಿಲ್ಲಾ ಕೇಂದ್ರಗಳ 207 ಪರೀಕ್ಷಾ ಕೇಂದ್ರಗಳಿದ್ದು ಇಲ್ಲೆಲ್ಲಾ 78 ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆಗಳನ್ನು ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಬಾಕ್ಸ್‌... ಇಂದು- ನಾಳಿನ ಕೆಪಿಎಸ್‌ಸಿ ಪರೀಕ್ಷೆ ತುಂಬ ಕಟ್ಟುನಿಟ್ಟು ಕಳೆದವಾರವಷ್ಟೇ ಕೆಇಎ ಸ್ಪರ್ಧಾತ್ಮಕ ಪರೀೂಕ್ಷೆಗಳಲ್ಲಿ ಬ್ಲೂಟೂತ್‌ ಬಳಸಿ ಪರೀಕ್ಷಾ ಹಗರಣ ನಡೆದಂತಹ ಕಲಬುರಗಿ, ಯಾದಗಿರಿ ಜಿಲ್ಲೆಗಳೂ ಕೆಪಿಎಸ್‌ಸಿ ನಡೆಸುತ್ತಿರುವ 2 ದಿನಗಳ ಪರೀಯ ಕೇಂದ್ರಗಳನ್ನು ಹೊಂದಿರೋದರಿಂದ ಯಾವುದೇ ರೀತಿಯಲ್ಲಿ ಅಕ್ರಣಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆಗಳನ್ನು ನಡೆಸಲು ಆಯೋಗ ಕಟ್ಟುನಿಟ್ಟಿನ ಹಲವು ಕ್ರಮಗಳನ್ನು ಘೋಷಿಸಿದೆ. 1) ಮಗಳಸೂತ್ರ, ಕಾಲುಂಗರ ಹೊರತುಪಡಿಸಿ ಯಾವುದೇ ಆಭರಣ, ತುಂಬು ತೋಳಿನ ಶರ್ಟ್‌ ಧರಸಿ ಪರೀಕ್ಷೆಗೆ ಹಾಜರಾಗೋದು ನಿಷೇಧಿಸಲಾಗಿದೆ 2) ಲೋಹದ ವಾಟರ್‌ ಬಾಟಲ್‌, ಅಪಾರದರ್ಶಕ ವಾಟರ್‌ ಬಾಟಲ್‌ ಕೂಡಾ ಜೊತೆಗಿಟ್ಟುಕೊಂಡು ಕೇಂದ್ರಗಳಿಗೆ ಹೋಗುವಂತಿಲ್ಲ 3) ಕಿವಿ, ಬಾಯಿ ಮುಚ್ಚುವಂತಹ ಯಾವುದೇ ರೀತಿಯ ಫಿಲ್ಟರ್‌ ಇರುವ ಮುಖ ಮಾಸ್ಕ್‌ ಧರಿಸುವಂತಿಲ್ಲ 4) ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮುನ್ನ ಹ್ಯಾಂಡ್‌ ಹೆಲ್ಡ್‌ ಮೆಟಲ್‌ ಡಿಟೆಕ್ಟರ್‌ನಿಂದ ತಪಾಸಣೆ 5) ಯಾವುದೇ ಇಲೆಕ್ಟಾನಿಕ್‌ ವಸ್ತುಗಳಿಂದ ಪರೀಕ್ಷಾ ಕೇಂದ್ರಗಳಿಂದ ಸಂವಹನ ನಡೆಸಲು ಅವಕಾಶವಿಲ್ಲದಂತೆ ಜಾಮರ್‌ ಅಳವಡಿಕೆ 6) ಪರೀಕ್ಷಾ ಕೇಂದ್ರಗಳಲ್ಲಿರುವ ಕೊಠಡಿಗಳಿಗೆಲ್ಲ ಸಿಸಿ ಟೀವಿ ಕ್ಯಾಮೆರಾ ಅಳ‍ಡಿಕೆ 7) ಪರೀಕ್ಷಾ ಕೊಠಡಿಗಳ ಅಭ್ಯರ್ಥಿಗಳ ಚಲನ ವಲನ ನೇರ ಪ್ರಸಾರ, ವೀಕ್ಷಣೆಗೆ ಆಯೋಗದ ಕೇಂದ್ರ ಕಚೇರಿಯಲ್ಲಿ ಕಮ್ಯಾಂಡ್‌ ಕೋಣೆ ಸ್ಥಾಪನೆ 8) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ನೈಜತೆ ಪರಿಶೀಲನೆಗಾಗಿ ಬಯೋಮೆಟ್ರಿಕ್‌ ಫೇಸ್‌ ರಿಕಗ್ನಿಷನ್‌ ಯಂತ್ರ ಬಳಕ 9) ಪರೀಕ್ಷೆ ನಡೆಯುತ್ತಿರುವ ಎಲ್ಲಾ 207 ಉಪ ಕೇಂದ್ರಗಳಲ್ಲಿನ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಕಡ್ಡಾಯ 10) ಎಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ವೀಕ್ಷಣಾಧಿಕಾರಿ, ಗ್ರುಪ್‌ ಎ ಮತ್ತು ಬಿ ಶ್ರೇಣಿಯ ವೀಕ್ಷಕರ ನೇಮಕ