ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತಿಕ್ಕಾಟ ವಿಕೋಪಗೆ ಹೋಗಿದ್ದು, ಆಯೋಗದ ಅನುಮೋದನೆಗೆ ರವಾನಿಸಲಾಗಿದ್ದ ವಿವಿಧ ಇಲಾಖೆಗಳಿಗೆ ಸುಮಾರು ಒಂದು ಸಾವಿರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯ ಕಡತವನ್ನು ಅಧ್ಯಕ್ಷರು ಹಿಂತಿರುಗಿಸಿದ್ದಾರೆ.ಕುತೂಹಲಕಾರಿ ಸಂಗತಿಯೆಂದರೆ, ಅಧ್ಯಕ್ಷರು ಹಿಂದಿರುಗಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯ ವಿವರವನ್ನು ಕಾರ್ಯದರ್ಶಿಯವರು ಮಂಗಳವಾರ ಬಹಿರಂಗಗೊಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರ 192 ಹುದ್ದೆಗಳ ಹೆಚ್ಚುವರಿ ಪಟ್ಟಿ, ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನೀರು ಸರಬರಾಜು ಆಪರೇಟರ್ 252 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರ 121 ಹುದ್ದೆಗಳ ಹೆಚ್ಚುವರಿ ಪಟ್ಟಿ, ಸಹಾಯಕ ಸಾಂಖ್ಯಿಕ ಅಧಿಕಾರಿ 58 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಸೇರಿ ಸುಮಾರು 1 ಸಾವಿರ ಹುದ್ದೆಗಳ ಆಯ್ಕೆ ಪಟ್ಟಿ ಬಿಡುಗಡೆಗಾಗಿ ಆಯೋಗದ ಅನುಮೋದನೆ ಕೋರಿ ಕಾರ್ಯದರ್ಶಿಯವರು ಅಧ್ಯಕ್ಷರಿಗೆ ಕಡತ ಸಲ್ಲಿಸಿದ್ದರು.ಆದರೆ, ಈ ಎಲ್ಲಾ ಕಡತಗಳನ್ನು ಅಧ್ಯಕ್ಷರು ಹಿಂತಿರುಗಿಸಿದ್ದರು. ಹೀಗೆ ಅಧ್ಯಕ್ಷರು ಹಿಂತಿರುಗಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿ ಯಾವುದು ಎಂಬ ಬಗ್ಗೆ ಮಾಹಿತಿಯನ್ನು ಕಾರ್ಯದರ್ಶಿ ಸಾರ್ವಜನಿಕ ಅವಗಾಹನೆಗೆ ಕೆಪಿಎಸ್ಸಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಜತೆಗೆ, ಸಾಂಖ್ಯಿಕ ನಿರ್ದೇಶನಾಲಯದ 10 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಅನುಮೋದನೆ ಕಡತ ಸಲ್ಲಿಸದಂತೆ ಅಧ್ಯಕ್ಷರು ಸೂಚಿಸಿರುವ ಬಗ್ಗೆಯು ಮಂಗಳವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.ತನ್ಮೂಲಕ ಕೆಪಿಎಸ್‌ಸಿಗೆ ಕಾನೂನು ಸಲಹೆಗಾರರ ನೇಮಕಾತಿ ವಿಚಾರವಾಗಿ ಆಯೋಗದ ಸದಸ್ಯರು, ಅಧ್ಯಕ್ಷರು ಮತ್ತು ಕಾರ್ಯದರ್ಶಿ ನಡುವೆ ಉಂಟಾಗಿರುವ ಸಂಘರ್ಷ ವಿಕೋಪ ಮುಟ್ಟಿದಂತಾಗಿದೆ.
ಕೆಪಿಎಸ್ಸಿ ಅಧ್ಯಕ್ಷರು ಹಾಗೂ ಸದಸ್ಯರು ತಾವು ನೇಮಕ ಮಾಡಿರುವ ಕಾನೂನು ಸಲಹೆಗಾರರ ನೇಮಕಾತಿ ವಿಚಾರ ಇತ್ಯರ್ಥವಾಗುವವರೆಗೆ ಯಾವುದೇ ಕಡತಗಳನ್ನು ಸಲ್ಲಿಸದಂತೆ ಕಾರ್ಯದರ್ಶಿಗೆ ಸೂಚಿಸಿದ್ದರು. ಆದರೆ, ಆಯೋಗಕ್ಕೆ ಸೆಡ್ಡು ಹೊಡೆದು ತಮ್ಮ ಕೆಲಸವನ್ನು ಮುಂದುವರೆಸಿರುವ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರು, ಮಂಗಳವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್ 288 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯ ಅನುಮೋದನೆಗಾಗಿ ಆಯೋಗಕ್ಕೆ ಕಡತವನ್ನು ಸಲ್ಲಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))