ಕಷ್ಟದ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಅನಾಥರನ್ನು ಗುರುತಿಸಿ ಅವರ ಮನೆಯ ಬಾಗಿಲಿಗೆ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಶ್ವದಲ್ಲಿಯೇ ಮಾದರಿ ಯೋಜನೆಯಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಅನಾಥರು, ವೃದ್ದರಿಗೆ ಪ್ರತಿ ತಿಂಗಳು ಹಣ ನೀಡುವ ಜೊತೆಗೆ ಜೀವನೋಪಾಯಕ್ಕೆ ಅಗತ್ಯ ವಸ್ತುಗಳನ್ನು ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯ ಶ್ಲಾಘನೀಯ ಎಂದು ಮಾಜಿ ಪ್ರಧಾನ್ ಸಾಕ್ಷೀಬೀಡು ರಾಮಕೃಷ್ಣೇಗೌಡ ತಿಳಿಸಿದರು.ತಾಲೂಕಿನ ಸಾಕ್ಷೀಬೀಡು ಗ್ರಾಮದಲ್ಲಿ ಅಗತ್ಯ ಇರುವ ವಿಶೇಷಚೇತನ ವ್ಯಕ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಂದಿರುವ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿ, ಜನರು ನ್ಯಾಯಬದ್ದವಾದ ತಮ್ಮ ಹಕ್ಕು, ಸರ್ಕಾರ ಯೋಜನೆಗಳನ್ನು ಪಡೆದುಕೊಳ್ಳಲು ಹತ್ತಾರು ಬಾರಿ ಸರ್ಕಾರಿ ಕಚೇರಿಯ ಬಾಗಿಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಷ್ಟದ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಅನಾಥರನ್ನು ಗುರುತಿಸಿ ಅವರ ಮನೆಯ ಬಾಗಿಲಿಗೆ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಶ್ವದಲ್ಲಿಯೇ ಮಾದರಿ ಯೋಜನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಲಯದ ಮೇಲ್ವಿಚಾರಕಿ ಶ್ರೀಲ್ಪಶ್ರೀ ಮಾತನಾಡಿ, ಪೂಜ್ಯ ವೀರೇಂದ್ರಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ನಿರಾಶ್ರಿತರಿಗೆ ನೆರವಾಗಬೇಕು ಅವರ ನೋವಿನೋಂದಿಗೆ ನಾವು ಇರಬೇಕು ಎನ್ನುವ ಸದುದ್ದೇಶದಿಂದ ಯೋಜನೆ ಮೂಲಕ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಮಾಸಾಶನ ಮತ್ತು ವಾಸ್ತಲ್ಯ ಕಿಟ್ ವಿತರಣೆ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಸದಸ್ಯ ಮಹೇಶ್, ನಿವೃತ ಶಿಕ್ಷಕ ನಿಂಗರಾಜು, ಮುಖಂಡರಾದ ಉದಯ್ ಶಂಕರ್, ಹನುಮಂತೇಗೌಡ, ಮೋಹನ್, ಹರೀಶ್, ಸಣ್ಣಪ್ಪ, ವಾತ್ಸಲ್ಯ ಸದಸ್ಯರಾದ ರಂಗಸ್ವಾಮಿ, ಸೇವಾಪ್ರತಿನಿಧಿ ನಂದಿನಿ ಸೇರಿದಂತೆ ಮತ್ತಿತರರು ಹಾಜರಿದದ್ದರು.ಡೇರಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರುತಕೀರ್ತಿ ಆಯ್ಕೆಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಮತ್ತಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರುತಕೀರ್ತಿ ಅವರನ್ನು ಗ್ರಾಮಸ್ಥರ ಪರವಾಗಿ ರಾಜ್ಯ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಅಭಿನಂದಿಸಿದರು.ಈ ವೇಳೆ ಮಾತನಾಡಿದ ಅವರು, ಡೇರಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಸಂಘ ಅಧಿಕಾರ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿದೆ. ಇದಕ್ಕೆ ಕಾರಣರಾದ ಮತದಾರರನ್ನು ಅಭಿನಂದಿಸುತ್ತೇನೆ ಎಂದರು.
ಪಕ್ಷದ ಹಿರಿಯ ಮುಖಂಡರಾದ ವಿಜಯ ರಾಮೇಗೌಡ, ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಸೇರಿದಂತೆ ಹಲವರು ಪಕ್ಷದ ಕಾರ್ಯಕರ್ತರ ಗೆಲುವಿಗೆ ಸಹಕರಿಸಿದ್ದಾರೆ. ಡೇರಿಗೆ ಸ್ವಂತ ಕಟ್ಟಡವಿಲ್ಲ. ಮನ್ಮುಲ್ ನಿರ್ದೇಶಕರು ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗುವಂತೆ ಮನವಿ ಮಾಡಿದರು.ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್. ದಿವಾಕರ್ ಸೇರಿದಂತೆ ಮುಖಂಡರು ಇದ್ದರು.