ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಳೆದ ಸಾಲಿನಲ್ಲಿ (೨೦೨೪-೨೫) ಅರಸೀಕೆರೆ ತಾಲೂಕಿನಲ್ಲಿ ೭೯ ಫಲಾನುಭವಿಗಳು ಕೃಷಿ ಭಾಗ್ಯ ಯೋಜನೆ ಸೌಲಭ್ಯವನ್ನು ಪಡೆದಿದ್ದು, ಯೋಜನೆಯನ್ನು ಮುಂದುವರೆಸಲಾಗಿದೆ.ಎಂದು ಸಹಾಯಕ ಕೃಷಿ ನಿರ್ದೇಶಕ ಎ.ಪಿ. ಶಿವಕುಮಾರ್ ತಿಳಿಸಿದ್ದಾರೆ.೨೦೨೫-೨೬ನೇ ಸಾಲಿನಲ್ಲಿ ಅರಸೀಕೆರೆ ತಾಲೂಕಿನಲ್ಲಿ ಕೃಷಿ ಇಲಾಖೆಯಿಂದಕೃಷಿ ಭಾಗ್ಯಯೋಜನೆಯನ್ನು ಮುಂದುವರಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಮಳೆಯಾಶ್ರಿತ ಕೃಷಿ ನೀತಿ-೨೦೧೪ರನ್ವಯ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನ ಮಾಡಲು ಕಾರ್ಯಕ್ರಮವನ್ನು ನೀಡಲಾಗಿರುತ್ತದೆ. ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಿಸುವುದು, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆಯಿಂದ ಉತ್ಪಾದಕತೆಯನ್ನು ಹೆಚ್ಚಿಸುವುದು.ಹಾಗೂ ಕೃಷಿ ಹೊಂಡದಿಂದ ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ದ ಪರಿಸ್ಥಿತಿಯಲ್ಲಿರಕ್ಷಣಾತ್ಮಕ ನೀರಾವರಿಯನ್ನುಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿರುತ್ತದೆ.
ಹೇಳಿಕೆಯಲ್ಲಿ ತಿಳಿಸಿರುವ ಅವರು ಕೃಷಿ ಭಾಗ್ಯಯೋಜನೆಯು ಪ್ಯಾಕೇಜ್ ಮಾದರಿಯಲ್ಲಿದ್ದು, ಇತರೆ ಯೋಜನೆಗಳ ಒಗ್ಗೂಡಿಸುವಿಕೆಯಡಿ ಅನುಷ್ಟಾನ ಮಾಡಲಾಗುತ್ತಿದೆ. ಸದರಿಯೋಜನೆಯುಕ್ಷೇತ್ರ ಬದು, ಕೃಷಿ ಹೊಂಡ, ಪಾಲೀಥೀನ್ ಹೊದಿಕೆ, ಡೀಸೆಲ್/ಪೆಟ್ರೋಲ್ ಪಂಪ್‌ಸೆಟ್, ಲಘು ನೀರಾವರಿಘಟಕ ಹಾಗೂ ಹೊಂಡದ ಸುತ್ತಲೂತಂತಿ ಬೇಲಿ ಅಳವಡಿಸುವುದನ್ನು ಒಳಗೊಂಡಿರುತ್ತದೆ.ಆಸಕ್ತ ರೈತರುಗಳು ಸದರಿಯೋಜನೆಯಡಿ ಸೌಲಬ್ಯವನ್ನು ಪಡೆಯಲು ಕಡ್ಡಾಯವಾಗಿಎಲ್ಲಾ ಘಟಕಗಳ ಅನುಷ್ಟಾನವನ್ನು ಮಾಡಿಕೊಳ್ಳಬೇಕಿರುತ್ತದೆ.ಸಾಮಾನ್ಯ ವರ್ಗದರೈತರಿಗೆ ಶೇ.೮೦ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದರೈತರಿಗೆ ಶೇ.೯೦ರ ಸಹಾಯಧನವನ್ನು ನೀಡಲಾಗುವುದು.ಕೃಷಿ ಇಲಾಖೆಯ ಹೋಬಳಿ ಮಟ್ಟದಎಲ್ಲಾರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಗಳು ಲಬ್ಯವಿದ್ದು, ಕನಿಷ್ಟ ೧ ಎಕರೆ ಕೃಷಿ ಜಮೀನನ್ನು ಹೊಂದಿರುವರೈತರುಯೋಜನೆಯಡಿ ಸೌಲಬ್ಯವನ್ನು ಪಡೆಯಬಹುದಾಗಿರುತ್ತದೆ. ಹಿಂದಿನಯಾವುದೇ ಸಾಲುಗಳಲ್ಲಿ ಕೃಷಿ ಭಾಗ್ಯಯೋಜನೆಅಥವಾ ಇನ್ನಾವುದೇ ಇಲಾಖೆ/ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವರೈತರು ಸದರಿಯೋಜನೆಗೆಅರ್ಹತೆಯನ್ನು ಹೊಂದಿರುವುದಿಲ್ಲ.ಸದರಿ ಯೋಜನೆಯಡಿ ಕೃಷಿ ಹೊಂಡವನ್ನು ನಿರ್ಮಿಸಿಕೊಳ್ಳುವ ಎಲ್ಲಾ ರೈತರುಗಳು ಆಕಸ್ಮಿಕ ಅವಘಡಗಳನ್ನು ತಪ್ಪಿಸಲು, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿಯನ್ನು ಅಳವಡಿಸಿಕೊಳ್ಳುವುದು ಹಾಗೂ ಸುರಕ್ಷತಾ ಕ್ರಮವಾಗಿ ಕೃಷಿ ಹೊಂಡಗಳಲ್ಲಿ ಹಗ್ಗಗಳನ್ನು ಇಳಿಬಿಟ್ಟು, ಟ್ಯೂಬ್‌ಗಳನ್ನು ತೇಲಿಬಿಡುವುದನ್ನು ಅಳವಡಿಸಿಕೊಳ್ಳಬೇಕು.ಪ್ರಸಕ್ತ ಸಾಲಿನಲ್ಲಿತಾಲ್ಲೂಕಿಗೆ ಭೌತಿಕವಾಗಿ ೩೫ ಸಂಖ್ಯೆಯಗುರಿಯನ್ನು ನೀಡಲಾಗಿದ್ದು, ಶೇ.೨೦ರಷ್ಟು ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಪಡೆಯಲು ಅವಕಾಶವಿರುತ್ತದೆ. ಅರ್ಹತೆ ಹೊಂದಿರುವ ಫಲಾನುಭವಿಗಳ ಅರ್ಜಿಗಳನ್ನು ಜೇಷ್ಟತೆಯನುಸಾರವಾಗಿ ಪರಿಗಣಿಸಲಾಗುವುದು. ಅರ್ಜಿಗಳನ್ನು ಸಲ್ಲಿಸಿದ ರೈತರು ಇಲಾಖೆಯಿಂದ ಸ್ವೀಕೃತಿಯನ್ನು ಪಡೆಯಲು ಕೋರಿದೆ.ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂರ್ಪಕಿಸಬಹುದಾಗಿದೆ.ಎಂದು ತಿಳಿಸಿದ್ದಾರೆ.