ಕೃಷ್ಣ ಜನ್ಮಾಷ್ಟಮಿ: ಮೊಸರು ಮಡಿಕೆ ಒಡೆಯುವ ಉತ್ಸವ

| Published : Sep 02 2025, 01:00 AM IST

ಸಾರಾಂಶ

ರಥದ ಬೀದಿಯಲ್ಲಿ ಶ್ರೀ ಕೃಷ್ಣ ನಾಮ ಜಪದ ಮೂಲಕ ಶ್ರೀ ಚಾಮರಾಜೇಶ್ವರ ದೇವಾಲಯದ ಸುತ್ತ ಹಾಗೂ ರಥದ ಬೀದಿಯಲ್ಲಿ ಶ್ರೀ ಕೃಷ್ಣ ನಾಮಸ್ಮರಣೆ ವಿಶೇಷವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ನಡೆದ 15ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.ನಗರದ ರಥದ ಬೀದಿಯಲ್ಲಿ ಶ್ರೀ ಕೃಷ್ಣ ನಾಮ ಜಪದ ಮೂಲಕ ಶ್ರೀ ಚಾಮರಾಜೇಶ್ವರ ದೇವಾಲಯದ ಸುತ್ತ ಹಾಗೂ ರಥದ ಬೀದಿಯಲ್ಲಿ ಶ್ರೀ ಕೃಷ್ಣ ನಾಮಸ್ಮರಣೆ ವಿಶೇಷವಾಗಿ ನಡೆಯಿತು. ಮೊಸರು ಮಡಿಕೆ ಓಡೆಯುವ ಉತ್ಸವ ಉದ್ಘಾಟನೆಯನ್ನು ಮಂಡ್ಯ ಜಿಲ್ಲೆಯ ಅಬಕಾರಿ ಜಿಲ್ಲಾ ಅಧಿಕಾರಿ ನಾಗಶಯನ ಅವರು ನೆರವೇರಿಸಿ ಶ್ರೀ ಕೃಷ್ಣ ಪ್ರಜ್ಞೆಯನ್ನು ಚಾಮರಾಜನಗರದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ನಿರಂತರವಾಗಿ 15 ವರ್ಷಗಳಿಂದ ಗಡಿ ಜಿಲ್ಲೆಯಲ್ಲಿ ಅತ್ಯಂತ ವೈಭವ, ಸಂಭ್ರಮದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು.ಶ್ರೀ ಕೃಷ್ಣ ಸಾರ್ವಕಾಲಿಕ ಸಂದೇಶವನ್ನು ಜಗತ್ತಿಗೆ ನೀಡಿದವರು. ಭಗವದ್ಗೀತೆ ನಮ್ಮೆಲ್ಲರ ಪವಿತ್ರ ಗ್ರಂಥ. ಭಗವದ್ಗೀತೆಯು ಮಾನವ ಕಲ್ಯಾಣದ ರಹಸ್ಯಗಳನ್ನು ಹಾಗೂ ಮೌಲ್ಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿಂತನ ಶಕ್ತಿಯ ಮೂಲಕ ರೂಪಿಸಿರುವ ಶ್ರೀ ಕೃಷ್ಣ ಮತ್ತು ಅವನ ಬಾಲ ಲೀಲೆಗಳು ಪ್ರತಿ ಮನೆಯಲ್ಲಿಯೂ ಸಂಭ್ರಮಕ್ಕೆ ಕಾರಣವಾಗುತ್ತದೆ. ಶ್ರೀ ಕೃಷ್ಣ ಮತ್ತು ರಾಧೆ ಪವಿತ್ರತೆಯ ಸಂಕೇತವಾಗಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಟ್ಟಣ ಠಾಣೆಯ ವೃತ್ತ ನಿರೀಕ್ಷಕ ಶ್ರೀಕಾಂತ್‌ ಅವರು ಯುವಕರನ್ನು ಒಂದುಗೂಡಿಸುವ ಹಾಗೂ ಆಧ್ಯಾತ್ಮಿಕ ಶಕ್ತಿಯ ಕಡೆಗೆ ಕರೆದೊಯ್ಯುವ ಮೊಸರು ಮಡಿಕೆ ಒಡೆಯುವ ಉತ್ಸವವು ಬಹಳ ವಿಶೇಷವಾದದ್ದು ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಶ್ರೀ ಕೃಷ್ಣ ಪ್ರತಿಷ್ಠಾನ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಮೊಸರು ಮಡಿಕೆ ಒಡೆಯುವ ಉತ್ಸವ ಆಯೋಜನೆ ಮಾಡಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀರಾಮ ಮತ್ತು ಕೃಷ್ಣರು ಸದಾ ಕಾಲ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದಾರೆ. ಶ್ರೀರಾಮ ಮತ್ತು ಕೃಷ್ಣರ ಆದರ್ಶಗಳು ಸದಾ ಕಾಲ ಜೀವಂತಿಕೆಯಿಂದ ಕೂಡಿದೆ. ಕೃಷ್ಣ ಆನಂದ ಸಾಗರದ ಸಂಕೇತ. ಕೃಷ್ಣ ಅತ್ಯಂತ ಶ್ರೇಷ್ಠ ಮನೋವಿಜ್ಞಾನಿ, ಮನಶಾಸ್ತ್ರಜ್ಞ . ಆತನ ಚಿಂತನೆಗಳು ಸಾವಿರಾರು ವರ್ಷಗಳಿಂದಲೂ ನಿರಂತರವಾಗಿ ಜಗತ್ತಿಗೆ ಆದರ್ಶಪ್ರಾಯವಾಗಿದೆ ಎಂದರು. ಶ್ರೀ ಕೃಷ್ಣ ಜನ್ಮಾಷ್ಠಮಿ ಮೂಲಕ ದೇಶಿಯ ಕ್ರೀಡೆಗಳನ್ನು ಉತ್ತೇಜಿಸಲು ಕಬ್ಬಡಿ ಪಂದ್ಯಾವಳಿ, ಶ್ರೀ ಕೃಷ್ಣ ಹೂ ಕಟ್ಟುವ ಸ್ಪರ್ಧೆ, ಶ್ರೀ ಕೃಷ್ಣ ಕವನ ಸ್ಪರ್ಧೆ, ಶ್ರೀ ಕೃಷ್ಣ ಕೆಸರುಗದ್ದೆ ಓಟ ಹಾಗೂ ಮೊಸರು ಮಡಿಕೆ ಓಡೆಯುವ ಸ್ಪರ್ಧೆಗಳು ಹಾಗೂ ಶ್ರೀ ಕೃಷ್ಣ ಮತ್ತು ರಾಧಾ ವೇಷಾಧಾರಿಗಳ ಸಂಭ್ರಮಕ್ಕೆ ಮತ್ತು ಗಡಿಗೆಯನ್ನು ಗುರಿಯಿಟ್ಟು ಸಾಧಿಸುವ ಛಲಕ್ಕೆ ಒಂದು ಅವಕಾಶವಾಗಿದೆ. ಯುವಶಕ್ತಿಯನ್ನು ಜಾಗೃತಗೊಳಿಸಿ ಸನ್ಮಾರ್ಗದ ಕಾರ್ಯಕ್ರಮಗಳನ್ನು ರೂಪಿಸಿದಾಗ ಸಮಾಜಕ್ಕೆ ಉತ್ತಮವಾದ ಸಂದೇಶ ಉಂಟಾಗುತ್ತದೆ ಎಂದರು. ಶ್ರೀ ಕೃಷ್ಣ ಪ್ರತಿಷ್ಠಾನದ ಕಾರ್ಯದರ್ಶಿ ಜನಪದ ಗಾಯಕ ಸುರೇಶ್ ನಾಗ್ ಹರದನಹಳ್ಳಿ ಅವರಿಂದ ವಿಶೇಷ ಶ್ರೀ ಕೃಷ್ಣ ಗೀತ ಗಾಯನ ನಡೆಯಿತು. ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ವಹಿಸಿ ಮಾತನಾಡಿ. ಶ್ರೀ ಕೃಷ್ಣನ ಉತ್ಸವ ಪ್ರತಿ ಮನೆಯಲ್ಲಿಯೂ ಕೂಡ ಹೊಸ ಉತ್ಸಾಹವನ್ನು ತುಂಬುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರಾಧೆಯ ವೇಷವನ್ನು ಧರಿಸುವ ಮೂಲಕ ಶ್ರೀ ಕೃಷ್ಣನ ಪೂಜೆಯನ್ನು ನೆರವೇರಿಸುವ ಮೂಲಕ ಸಂತೋಷವನ್ನು ಪಡೆಯುತ್ತಿದ್ದಾರೆ ಎಂದರು.ಶ್ರೀ ಕೃಷ್ಣ ಪ್ರತಿಷ್ಠಾನದ ಪ್ರದೀಪ್ ಕುಮಾರ್ ದೀಕ್ಷಿತ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಮುಖಂಡರಾದ ಚಂದ್ರಶೇಖರ್, ಬಾಲಸುಬ್ರಹ್ಮಣ್ಯಂ, ಶಿವು, ಶ್ರೀನಿಧಿ, ಶರಣ್ಯ ಋಗ್ವೇದಿ, ಉಪಸ್ಥಿತರಿದ್ದರು. ಹೂ ಕಟ್ಟುವ ಪ್ರಕ್ರಿಯೆ ಉತ್ತೇಜಿಸಲು ಯುವಕರಿಗೆ ಮತ್ತು ಯುವತಿಯರಿಗೆ ಹೂ ಕಟ್ಟುವ ಸ್ಪರ್ಧೆಯನ್ನು ಆಯೋಜಿಸಿ ಉತ್ತೇಜನ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಹೂ ಕಟ್ಟುವ ಮೂಲಕ ನೋಡಿಗರಲ್ಲೂ ಕುತೂಹಲ ಕೆರಳಿಸಿದರು.ಶ್ರೀ ಕೃಷ್ಣ ಗೀತಾ ಗಾಯನ ಹಾಗೂ ಸಂಕೀರ್ತನೆ ನಡೆಯಿತು.-------೧ಸಿಎಚ್‌ಎನ್೧ಚಾಮರಾಜನಗರದ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ನಡೆದ ೧೫ನೇ ವೇದ ಶ್ರೀ ಕೃಷ್ಣ ಜನ್ಮಾಷ್ಠಾಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ರಾಧಾ ಪಾತ್ರಧಾರಿ ಬಾಲಕಿ ಮೊಸರು ಮಡಿಕೆ ಒಡೆಯುತ್ತಿರುವುದು.--------೧ಸಿಎಚ್‌ಎನ್೨ಚಾಮರಾಜನಗರದ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ನಡೆದ ೧೫ನೇ ವೇದ ಶ್ರೀ ಕೃಷ್ಣ ಜನ್ಮಾಷ್ಠಾಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಸಮಾರಂಭವನ್ನು ಮಂಡ್ಯ ಜಿಲ್ಲೆಯ ಅಬಕಾರಿ ಜಿಲ್ಲಾ ಅಧಿಕಾರಿ ನಾಗಶಯನ ಉದ್ಘಾಟಿಸಿದರು.-----