ಸಾರಾಂಶ
ಇಂದಿನ ಕಾವ್ಯ ಜಗತ್ತು ಗೊತ್ತು ಗುರಿಯಿಲ್ಲದ ಮಾರ್ಗದೆಡೆಗೆ ಸಾಗುತ್ತಿರುವುದು ವಿಷಾದನೀಯ. ಇದಕ್ಕೆಲ್ಲ ಕುವೆಂಪು, ಬೇಂದ್ರೆ ಅವರಂತಹ ಕಾವ್ಯಗಳ ಅಧ್ಯಯನ ಶೀಲತೆಯೇ ಪರಿಹಾರ
ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಕಾವ್ಯ ಪರಂಪರೆಯಲ್ಲಿ ಕುವೆಂಪು, ಬೇಂದ್ರೆ ಹಾಗೂ ಪುತಿನ ರತ್ನತ್ರಯರೆಂದು ಹೆಸರುವಾಸಿಯಾಗಿದ್ದು, ಕುವೆಂಪು ಭಾವಾವೇಶದ ಕವಿಯಾದರೆ, ಪು.ತಿ.ನ. ಹಾಗೂ ಬೇಂದ್ರೆ ಶಾಂತರಸದ ಕವಿಗಳು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ತಿಳಿಸಿದರು.ಮೈಸೂರಿನ ಶಾರದಾದೇವಿನಗರದ ಕೃಷ್ಣಮೂರ್ತಿ ಲೇಔಟ್ ನಲ್ಲಿರುವ ಕೃಷ್ಣಮೂರ್ತಿ ಸಭಾಂಗಣದಲ್ಲಿ ಡಾ.ಕೆ. ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನ ಹಾಗೂ ಶ್ರೀ ವಾಸುದೇವ ಮಹಾರಾಜ ಫೌಂಡೇಶನ್ ಸಂಯುಕ್ತವಾಗಿ ಶುಕ್ರವಾರ ಏರ್ಪಡಿಸಿದ್ದ ವರಕವಿ ಡಾ.ದ.ರಾ. ಬೇಂದ್ರೆ ಅವರ 128ನೇ ಜಯಂತಿಯಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ನೊಂದು ಬೆಂದು ಅದನ್ನೇ ತನ್ನ ಕಾವ್ಯದ ವಸ್ತುವನ್ನಾಗಿ ಸಮಾಜಕ್ಕೆ ನೀಡಿದ ಬೇಂದ್ರೆಯವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಸಾಧ್ಯ. ಬೆಂದರೆ ಮಾತ್ರ ಬೇಂದ್ರೆಯವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.ಹಿರಿಯ ಸಂಸ್ಕೃತ ವಿದುಷಿ ಡಾ.ಕೆ. ಲೀಲಾ ಪ್ರಕಾಶ್ ಮಾತನಾಡಿ, ದ.ರಾ. ಬೇಂದ್ರೆ ಅವರ ಹಲವಾರು ಕವನಗಳು ಸಿನಿಮಾ ಗೀತೆಗಳಾಗಿ ಅತ್ಯಂತ ಜನಪ್ರಿಯಗೊಂಡು ಜನಮನದಲ್ಲಿ ಹಾಸು ಹೊಕ್ಕಾಗಿದೆ ಎಂದರು.
ಸಂಸ್ಕೃತ ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ಇಂದಿನ ಕಾವ್ಯ ಜಗತ್ತು ಗೊತ್ತು ಗುರಿಯಿಲ್ಲದ ಮಾರ್ಗದೆಡೆಗೆ ಸಾಗುತ್ತಿರುವುದು ವಿಷಾದನೀಯ. ಇದಕ್ಕೆಲ್ಲ ಕುವೆಂಪು, ಬೇಂದ್ರೆ ಅವರಂತಹ ಕಾವ್ಯಗಳ ಅಧ್ಯಯನ ಶೀಲತೆಯೇ ಪರಿಹಾರ ಎಂದು ತಿಳಿಸಿದರು.ಸಾಹಿತಿ ಕುಲಕರ್ಣಿ, ಸಮಾಜ ಸೇವಕ ಕೆ. ರಘುರಾಮ್, ಪ್ರಕಾಶಕ ಕೇಶವ ಪ್ರಕಾಶ್, ನಿವೃತ್ತ ಅಧ್ಯಾಪಕಿ ಕೆ.ಆರ್. ಪ್ರೇಮಲೀಲಾ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ನೀ. ಗಿರಿಗೌಡ, ಬ್ರಹ್ಮಿಭೂತ ವಾಸುದೇವ್ ಮಹಾರಾಜ್ ಪ್ರತಿಷ್ಠಾನದ ಅಧ್ಯಕ್ಷ ಎಂ.ವಿ. ನಾಗೇಂದ್ರಬಾಬು, ಸಂಚಾಲಕ ಅನಂತ ಇದ್ದರು. ನಿಂದ ಆಯೋಜನೆ