ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಪ್ರತೀವರ್ಷದಂತೆ ಸಾರ್ವಜನಿಕರಿಗೆ ಉಚಿತ ಚಕ್ಕುಲಿ ವಿತರಣೆ ಆಯೋಜಿಸಿತು.

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಪ್ರತೀವರ್ಷದಂತೆ ಸಾರ್ವಜನಿಕರಿಗೆ ಉಚಿತ ಚಕ್ಕುಲಿ ವಿತರಣೆ ಆಯೋಜಿಸಿತು.

ನಾಗರಿಕ ಸಮಿತಿಯ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಪಾದರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ನಾಗರಿಕ ಸಮಿತಿ ಹಲವಾರು ವರ್ಷಗಳಿಂದ ಚಕ್ಕುಲಿಯನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಅಕ್ಷಮಿ ಹಬ್ಬವನ್ನು ಸ್ಮರಣೀಯವನ್ನಾಗಿಸುತ್ತಿದೆ ಎಂದರು.

ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ನಿತ್ಯಾನಂದ ಒಳಕಾಡುವ ಅವರ ಸಮಾಜ ಸೇವೆಗಳು ಜನಮಾನಸದಲ್ಲಿ ಉಳಿಯುತ್ತದೆ. ಅವರ ಪ್ರತಿಯೊಂದು ಕೆಲಸವೂ ಸಹ ವಿಭಿನ್ನ ಆಗಿರುತ್ತದೆ. ಅವರ ಈ ಕಾರ್ಯ ಮುಂದೆಯೂ ನಡೆಯಲಿ ಎಂದು ಹಾರೈಸಿದರು.

ನಾಗರಿಕ ಸಮಿತಿಯ ಅದ್ಯಕ್ಷ ನಾಗೇಶ್ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಭಾಸ್ಕರ್ ಶೇರಿಗಾರ್, ಗೀತಾ ನಾಗೇಶ್ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ವಿಕಾಶ್ ಶೆಟ್ಟಿ, ಗಂಗಾಧರ್, ವಾಸುದೇವ, ಶಂಕರ್ ನಾಯಕ್, ಸುಮಾ ಆಚಾರ್, ದೇವಕಿ ಬಾರ್ಕೂರು ಮುಂತಾದವರು ಉಪಸ್ಥಿತರಿದ್ದರು.

ಬಳಿಕ ಶಂಕರ್ ನಾಯಕ್ ಅವರ ತಂಡದಿಂದ ಸ್ಥಳದಲ್ಲೇ ಚಕ್ಕುಲಿಗಳನ್ನು ತಯಾರಿಸಿ, ಸುಮಾರು 10 ಸಾವಿರ ಚಕ್ಕುಲಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.