ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ವತಿಯಿಂದ ನಡೆಯುವ ಹಿರಿಯ ಸಾಹಿತಿಗಳ ಮನೆ ಮನೆ ಭೇಟಿ ಹಾಗೂ ಸನ್ಮಾನ ಕಾರ್ಯಕ್ರಮದಡಿ ಕಾಸರಗೋಡು ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ಹಾಗೂ ಸಂಶೋಧನ ಕೇಂದ್ರದ ನಿವೃತ್ತ ಅಧ್ಯಕ್ಷ ಹಾಗೂ ಪ್ರಾಧ್ಯಾಪಕ ಪ್ರೊ.ಪಿ.ಶ್ರೀಕೃಷ್ಣ ಭಟ್‌ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಶ್ರೀಕೃಷ್ಣ ಭಟ್‌, ಹಿರಿಯರನ್ನು ಗುರುತಿಸಿ ಗೌರವಿಸುವುದು ಸತ್ಸಂಪ್ರದಾಯ. ಮಂಗಳೂರು ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮ ಕೈಗೊಳ್ಳುತ್ತಿರುವುದು ಪ್ರಶಂಸನೀಯ. ಇದರಿಂದ ಸಾಹಿತ್ಯ ಪರಿಷತ್ತು ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಸಾಹಿತ್ಯಾಭಿಮಾನಿಗಳಾದ ತಾವೆಲ್ಲರೂ ನಮ್ಮ ಮನೆಯವರೆಗೂ ಬಂದಿರುವುದು ನಿಜವಾಗಿಯೂ ಸಂಭ್ರಮದ ವಿಚಾರ ಎಂದರು.

ಪ್ರೊ.ಶ್ರೀ ಕೃಷ್ಣ ಭಟ್‌ರ ಶಿಷ್ಯೆ ಹಾಗೂ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ.ಮೀನಾಕ್ಷಿ ರಾಮಚಂದ್ರ ಸನ್ಮಾನಿತರ ವ್ಯಕ್ತಿತ್ವ ಪರಿಚಯ ಮಾಡಿದರು.

ಕಸಾಪ ಮಂಗಳೂರು ತಾಲೂಕು ಅಧ್ಯಕ್ಷ ಡಾ.ಮಂಜುನಾಥ ರೇವಣಕರ, ಕಸಾಪ ಜಿಲ್ಲಾ ಸದಸ್ಯರಾದ ಸನತ್ ಕುಮಾರ್ ಜೈನ್, ಪ್ರೊ.ಶ್ರೀಕೃಷ್ಣ ಭಟ್‌ರ ಪತ್ನಿ ಹೇಮಾವತಿ ಭಟ್‌ ಮತ್ತಿತರರು ಇದ್ದರು.

ದ.ಕ. ಸಾಹಿತ್ಯ ಪರಿಷತ್‌ ಮಂಗಳೂರು ತಾಲೂಕು ಪ್ರಧಾನ ಕಾರ್ಯದರ್ಶಿ ಡಾ.ಮುರಳಿ ಮೋಹನ ಚೂಂತಾರು ಪ್ರಸ್ತಾವನೆಗೈದರು.

ಕಸಾಪ ಮಂಗಳೂರು ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ ಜೀ ವಂದಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್ ನಿರೂಪಿಸಿದರು.------