ಸಾರಾಂಶ
ನಗರದ ಶ್ರೀ ಸಾಯಿ ಇವೆಂಟ್ಸ್ ಪ್ರೆಸೆಂಟ್ಸ್ ಹಾಗೂ ಜೆಸಿಐ ಶಿವಮೊಗ್ಗ ಭಾವನ ಸಹಯೋಗದೊಂದಿಗೆ ಶುಭ ಮಂಗಳ ಸಮುದಾಯ ಭವನದಲ್ಲಿ ನಡೆಯುತ್ತಿರುವ ’ಶಿವಮೊಗ್ಗ ಕಾರ್ನಿವಲ್ ’ ವಸ್ತು ಪ್ರದರ್ಶನವನ್ನು ಗುರುವಾರ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಶಿವಮೊಗ್ಗ: ನಗರದ ಶ್ರೀ ಸಾಯಿ ಇವೆಂಟ್ಸ್ ಪ್ರೆಸೆಂಟ್ಸ್ ಹಾಗೂ ಜೆಸಿಐ ಶಿವಮೊಗ್ಗ ಭಾವನ ಸಹಯೋಗದೊಂದಿಗೆ ಶುಭ ಮಂಗಳ ಸಮುದಾಯ ಭವನದಲ್ಲಿ ನಡೆಯುತ್ತಿರುವ ’ಶಿವಮೊಗ್ಗ ಕಾರ್ನಿವಲ್ ’ ವಸ್ತು ಪ್ರದರ್ಶನವನ್ನು ಗುರುವಾರ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಕಾರ್ನಿವಲ್ ಅಂತಹ ವಸ್ತು ಪ್ರದರ್ಶನಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿವೆ. ಜೆಸಿಐ ಶಿವಮೊಗ್ಗ ಭಾವನ ಸಂಸ್ಥೆಯು ವಿಶೇಷವಾಗಿ ಮಹಿಳೆಯರಿಗೆ ವಿನೂತನ ರೀತಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಈ ವಸ್ತು ಪ್ರದರ್ಶನವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷೆ ಜೆಸಿ ರೇಖಾ ರಂಗನಾಥ್ ವಹಿಸಿದ್ದರು.ಜೆಸಿಐ ವಲಯ ಅಧ್ಯಕ್ಷ ಗೌರೀಶ್ ಭಾರ್ಗವ, ಯುವ ಮುಖಂಡ ಎಚ್.ಪಿ.ಗಿರೀಶ್, ಸಮಾಜ ಸೇವಕಿ ಪುಷ್ಪಾ ಶೆಟ್ಟಿ, ವೈದ್ಯ ಡಾ.ರಾಹುಲ್, ಡಾ.ಸಂಧ್ಯಾ, ಡಾ.ವಿದ್ಯಾ, ಡಾ.ಸೌಮ್ಯ ರಾಣಿ, ವಕೀಲರಾದ ಅಲಿಯ, ಶರಾವತಿ ಮಹಿಳಾ ಸಂಘದ ಅಧ್ಯಕ್ಷ ಶಶಿಕಲಾ ಮತ್ತಿತರರಿದ್ದರು.