ಕಾರ್ಕಳದಿಂದ ಉಡುಪಿಗೆ ಸಾಗುವ ವೇಳೆ ಕಿತ್ತುಹೋದ ಕೆಎಸ್ಸಾರ್ಟಿಸಿ ಬಸ್‌ ಫುಟ್‌ಬೋರ್ಡ್: ವೀಡಿಯೋ ವೈರಲ್‌

| Published : Sep 03 2024, 01:46 AM IST / Updated: Sep 03 2024, 05:30 AM IST

ksrtc
ಕಾರ್ಕಳದಿಂದ ಉಡುಪಿಗೆ ಸಾಗುವ ವೇಳೆ ಕಿತ್ತುಹೋದ ಕೆಎಸ್ಸಾರ್ಟಿಸಿ ಬಸ್‌ ಫುಟ್‌ಬೋರ್ಡ್: ವೀಡಿಯೋ ವೈರಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳದಿಂದ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದರ ಫುಟ್‌ಬೋರ್ಡ್ ಹಿರಿಯಡ್ಕದಲ್ಲಿ ಕಿತ್ತು ಬಿದ್ದ ಘಟನೆ ನಡೆದಿದೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಸ್‌ನ ದುಸ್ಥಿತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

 ಕಾರ್ಕಳ : ಕಾರ್ಕಳ- ಉಡುಪಿ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ನರ್ಮ್‌ ಬಸ್ಸೊಂದರ ಫುಟ್‌ಬೋರ್ಡ್ ಕಿತ್ತು ಹೋಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ರತ್ಯಕ್ಷದರ್ಶಿಯೊಬ್ಬರ ಮಾಹಿತಿಯಂತೆ ಕಾರ್ಕಳದಿಂದ ಉಡುಪಿಗೆ ಸಾಗುವ ವೇಳೆ ಹಿರಿಯಡ್ಕ ಸಮೀಪ ಬೋಲ್ಟ್ ಕಿತ್ತು ಹೋಗಿ ಫುಟ್ ಬೋರ್ಡ್ ನೇತಾಡುತಿತ್ತು ಎಂದು ತಿಳಿಸಿದ್ದಾರೆ. ಅದೇ ದಿನ ಬೇರೆ ಟ್ರಿಪ್ ವೇಳೆ ಈ ಬಸ್‌ನ ಫುಟ್‌ಬೋರ್ಡ್ ಸರಿಪಡಿಸಿ ಕಳುಹಿಸಲಾಗಿತ್ತು. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಕೆಲವರು ಬಸ್‌ನ ದುಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಗೊಳಿಸಿದ್ದಾರೆ.

ಸ್ಟ್ರಿಂಗ್ ರಿವೀಲ್ಸ್‌ ಎಂಬ ಎಕ್ಸ್ ಖಾತೆಯಲ್ಲಿ, ‘ಇದು ಕಾರ್ಕಳ-ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ನ ಸ್ಥಿತಿ. ಉಚಿತ ಬಸ್ ಪಾಸ್‌ಗಳ ಪರಿಣಾಮ. ಸರ್ಕಾರ ಬಡತನವನ್ನು ಸಮಾನವಾಗಿ ಹಂಚಬಹುದು. ಶ್ರಮದಿಂದ ಸಂಪತ್ತು ಗಳಿಸಬೇಕು. 

ಸ್ವಚ್ಛ, ಸ್ಪರ್ಧಾತ್ಮಕ, ಉತ್ತಮ ನಿರ್ವಹಣೆಯ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಉಡುಪಿ, ಮಂಗಳೂರು ಪ್ರದೇಶದಲ್ಲಿ ಖಾಸಗಿ ಉದ್ಯಮ ಜೊತೆಗೆ ಸರ್ಕಾರದ ಮಧ್ಯಸ್ಥಿಕೆ ವಹಿಸಿದ್ದರ ಫಲಿತಾಂಶ ಇದು ಎಂದು ಬರೆದಿದ್ದಾರೆ.ಉಡುಪಿ- ಕಾರ್ಕಳ ಮಾರ್ಗವಾಗಿ 6ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳಿದ್ದು, ಒಟ್ಟು ನಿತ್ಯ 25 ಟ್ರಿಪ್ ಓಡುತ್ತಿದೆ. 6 ಬಸ್‌ಗಳ ಪೈಕಿ 4 ಬಸ್‌ಗಳು 7 ವರ್ಷಗಳ ಹಿಂದಿನ ಬಸ್‌ಗಳಾಗಿವೆ. ಉಡುಪಿ ಕಾರ್ಕಳವಾಗಿ ಪ್ರಮೋದ್ ಮಧ್ವಾರಾಜ್ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನರ್ಮ್ ಬಸ್‌ಗಳು ಸಂಚರಿಸಲು ಆರಂಭಿಸಿದ್ದವು.