ಹೊಯ್ಸಳೇಶ್ವರ ದೇವಾಲಯಕ್ಕೆ ಕೆಎಸ್ಸಾರ್ಟಿಸಿ ಎಂಡಿ ನಂದಿನಿ ಭೇಟಿ

| Published : Nov 29 2024, 01:01 AM IST

ಹೊಯ್ಸಳೇಶ್ವರ ದೇವಾಲಯಕ್ಕೆ ಕೆಎಸ್ಸಾರ್ಟಿಸಿ ಎಂಡಿ ನಂದಿನಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ವಿಖ್ಯಾತ ಹೊಯ್ಸಳೇಶ್ವರ ದೇವಾಲಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ನಂದಿನಿ ಆಗಮಿಸಿ ದೇವಾಲಯದ ಬಗ್ಗೆ ಕೂಲಂಕಷವಾಗಿ ಮಾರ್ಗದರ್ಶನ ತೆಗೆದುಕೊಂಡು ದೇವಾಲಯದ ಚಿತ್ರ ಹಾಗು ಕೆತ್ತನೆ ಬಗ್ಗೆ ಭಾರಿ ಸಂತೋಷ ವ್ಯಕ್ತಪಡಿಸಿದರು. ಹಳೇಬೀಡಿನಲ್ಲಿ ಸರ್ಕ್ಯೂಟ್ ಬುಕ್ಕಿಂಗ್ ಕೇಂದ್ರವನ್ನು ತೆರೆದರೆ ಅನುಕೂಲವಾಗುತ್ತದೆ ಎಂಬ ಮನವಿ ಕೇಳಿ ಬಂತು.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಲ್ಲಿನ ವಿಶ್ವ ವಿಖ್ಯಾತ ಹೊಯ್ಸಳೇಶ್ವರ ದೇವಾಲಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ನಂದಿನಿ ಆಗಮಿಸಿ ದೇವಾಲಯದ ಬಗ್ಗೆ ಕೂಲಂಕಷವಾಗಿ ಮಾರ್ಗದರ್ಶನ ತೆಗೆದುಕೊಂಡು ದೇವಾಲಯದ ಚಿತ್ರ ಹಾಗು ಕೆತ್ತನೆ ಬಗ್ಗೆ ಭಾರಿ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶಿ ರಾಜ್ಯ ಸಂಘದ ಉಪಾಧ್ಯಕ್ಷ ಎಚ್.ಎಂ.ಅಮರೇಶ್ ಮಾತನಾಡುತ್ತ, ಹಳೇಬೀಡಿಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರಿಗೆ ಕೆಲವು ಮಾಹಿತಿ ಸಿಗದೆ ತೊಂದರೆಯಾಗಿದೆ. ಹಳೇಬೀಡಿನಲ್ಲಿ ಸರ್ಕ್ಯೂಟ್ ಬುಕ್ಕಿಂಗ್ ಕೇಂದ್ರವನ್ನು ತೆರೆದರೆ ಅನುಕೂಲವಾಗುತ್ತದೆ. ಇಲ್ಲಿನ ಸುತ್ತಮುತ್ತ ಹಳೇಬೀಡು, ಬೇಲೂರು, ಜಾವಗಲ್ಲು, ಬೆಳವಾಡಿ, ಹುಲಿಕೆರೆ, ನರಸೀಪುರ, ಹುಲಿಕಲ್ ಬೆಟ್ಟದ ಶ್ರೀ ವೀರಭದ್ರೇಶ್ವರ ಇನ್ನು ಹಲವಾರು ಸ್ಥಳಗಳನ್ನು ನೋಡಬಹುದು. ಹಾಗಾಗಿ ಇದೇ ಸ್ಥಳದಲ್ಲಿ ಸರ್ಕ್ಯೂಟ್ ಬುಕಿಂಗ್ ಸೆಂಟರ್ ಮಾಡುವಂತೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶಕರಾದ ಧರ್ಮೇಂದ್ರ, ಪ್ರೇಮಕುಮಾರ್, ಸಿದ್ದೇಶ್, ಪಾಲಾಕ್ಷ ಇದ್ದರು. ಇದರ ಬಗ್ಗೆ ಸೂಕ್ತವಾಗಿ ಪರಿಶೀಲನೆ ಮಾಡಿ ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ತಿಳಿಸಿದರು.