ಸಾರಾಂಶ
ಪ್ರಯಾಣಿಕ ಸ್ನೇಹಿ ಸೇವೆಗಾಗಿ ಕೆಎಸ್ಸಾರ್ಟಿಸಿಗೆ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಎಕ್ಸಲೆನ್ಸ್ ಅವಾರ್ಡ್‌ನ ಒಂಬತ್ತು ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಯಾಣಿಕ ಸ್ನೇಹಿ ಸೇವೆಗಾಗಿ ಕೆಎಸ್ಸಾರ್ಟಿಸಿಗೆ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ಎಕ್ಸಲೆನ್ಸ್ ಅವಾರ್ಡ್‌ನ ಒಂಬತ್ತು ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.ಡಿಜಿಟಲ್ ಮೀಡಿಯಾ ಇನ್ನೋವೇಷನ್ ಮತ್ತು ಹೌಸ್ ಜರ್ನಲ್ ಪ್ರಿಂಟ್ (ಪ್ರಾದೇಶಿಕ), ಹೆಲ್ತ್‌ಕೇರ್ ಕಮ್ಯುನಿಕೇಷನ್ ಫಿಲ್ಮ್, ವಿಶಿಷ್ಟ ಮಾನವ ಸಂಪನ್ಮೂಲ ಕಾರ್ಯಕ್ರಮ, ಗ್ರಾಹಕ ಸೇವಾ ಶ್ರೇಷ್ಠತೆ, ಬ್ರ್ಯಾಂಡಿಂಗ್, ವೆಬ್‌ಸೈಟ್, ಮೈಕ್ರೋಸೈಟ್, ಕಾರ್ಪೋರೇಟ್ ಫಿಲ್ಮ್ಸ್, ಮಾರ್ಕೆಟಿಂಗ್ ಕ್ಯಾಂಪೇನ್ ಮತ್ತು ಆಂತರಿಕ ಕಮ್ಯುನಿಕೇಷನ್ ಕ್ಯಾಂಪೇನ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ಗೋವಾದಲ್ಲಿ ಶನಿವಾರ ಆಯೋಜಿಸಿದ್ದ 15ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೋವಾ ವಿಧಾನಸಭೆ ಅಧ್ಯಕ್ಷ ಡಾ.ಗಣೇಶ್ ಗಾಂವ್ಕರ್ ಅವರು ಕೆಎಸ್ಸಾರ್ಟಿಸಿ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮತ್ತು ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ನಟ ಮಿಲಿನ್ ತೆಂಡೂಲ್ಕರ್, ನಟಿ ಎಸ್ಟರ್ ವ್ಯಾಲೆರಿ ನೊರೊನ್ಹಾ, ಪಿಆರ್‌ಸಿಐ ಅಧ್ಯಕ್ಷ ಎಂ.ಬಿ. ಜಯರಾಮ್ ಇದ್ದರು.