ಕೂಡಿಗೆ: ಹೈನುಗಾರಿಕೆ, ಕುರಿಗಳ ಸಾಕಾಣಿಕೆ ತರಬೇತಿ

| Published : Feb 12 2024, 01:31 AM IST

ಸಾರಾಂಶ

ಕೂಡಿಗೆಯ ಜಿಲ್ಲಾ ಕೋಳಿ ಸಾಕಾಣಿಕೆ, ಮತ್ತು ತರಬೇತಿ ಕೇಂದ್ರದಲ್ಲಿ ಹೈನುಗಾರಿಕೆ, ಮತ್ತು ಕುರಿಗಳ ಸಾಕಾಣಿಕೆ ಬಗ್ಗೆ ಒಂದು ದಿನದ ತರಬೇತಿ ನಡೆಯಿತು. ಸೋಮವಾರಪೇಟೆ, ಮತ್ತು ಕುಶಾಲನಗರ ತಾಲೂಕಿನ ವ್ಯಾಪ್ತಿಯ ‌ರೈತರು ಪ್ರಯೋಜನ ಪಡೆದರು.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕಿನ ಕೂಡಿಗೆಯ ಜಿಲ್ಲಾ ಕೋಳಿ ಸಾಕಾಣಿಕೆ, ಮತ್ತು ತರಬೇತಿ ಕೇಂದ್ರದಲ್ಲಿ ಹೈನುಗಾರಿಕೆ, ಮತ್ತು ಕುರಿಗಳ ಸಾಕಾಣಿಕೆ ಬಗ್ಗೆ ಒಂದು ದಿನದ ತರಬೇತಿಯನ್ನು ಸೋಮವಾರಪೇಟೆ, ಮತ್ತು ಕುಶಾಲನಗರ ತಾಲೂಕಿನ ವ್ಯಾಪ್ತಿಯ ‌ರೈತರಿಗೆ ನೀಡಲಾಯಿತು.

ಕೊಡಗು ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಪಶುಪಾಲನಾ ಮತ್ತು ಪಶು ವೈದ್ಯ ಸೇವೆಗಳ ಇಲಾಖೆ ಸಂಯುಕ್ತ ಆಶಯದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರಪೇಟೆ ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ, ನಾಗರಾಜ್ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಹೈನುಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ತರಬೇತಿ, ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮದ ಅಡಿಯಲ್ಲಿ ತಾಲೂಕು ವ್ಯಾಪ್ತಿಯ ರೈತರಿಗೆ ವಿವಿಧ ಹೊಸ ಹೈಬ್ರೀಡ್ ತಳಿಗಳ ಬಗ್ಗೆ, ಮತ್ತು ನೂತನವಾಗಿ ಕುರಿ ಸಾಕಾಣಿಕೆ ಮಾಡುವ ಯೋಜನೆಯ ವಿಷಯಗಳ ಬಗ್ಗೆ ಮಾಹಿತಿ ಒದಗಿಸಿದರು.

ಕಾರ್ಯಾಗಾರದಲ್ಲಿ ರೈತರು ಭಾಗವಹಿಸಿ ಇಲಾಖೆಯ ಕಾರ್ಯಯೋಜನೆಗಳು ಮತ್ತು ರೋಗ ತಡೆಗಟ್ಟಲು ಅನುಸರಿಸಿಬಹುದಾದ ವಿಚಾರಗಳನ್ನು ತಿಳಿದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್ ವಹಿಸಿ ಮಾತನಾಡಿದರು.

ತರಬೇತಿಯ ಪ್ರಮಾಣ ಪತ್ರದ ಮುಖೇನ ಸದಸ್ಯರು ಸ್ಥಳೀಯ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯಗಳನ್ನು ಪಡೆಯಲು ಇತ್ತಿಚಿನ ದಿನಗಳಲ್ಲಿ ಪ್ರಮುಖವಾಗಿವೆ, ಅದರ ಮೂಲಕ ಸಾಲ ಸೌಲಭ್ಯಗಳನ್ನು ಪಡೆದು ಉತ್ತಮ ದರ್ಜೆಯ ಕುರಿಗಳನ್ನು, ಮತ್ತು ಹಸುಗಳನ್ನು ಖರೀದಿಸಿ, ಸಾಕಾಣಿಕೆ ಮಾಡಿ, ಆರ್ಥಿಕವಾಗಿ ಸಬಲೀಕರಣ ಹೊಂದಲು ತರಬೇತಿಯು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್, ಕಾರ್ಯದರ್ಶಿ ಬರಮಣ್ಣ ಬೆಟಗೇರಿ, ನಿರ್ದೇಶಕರಾದ ಶಾಂತ ಬೆಟಗೇರಿ, ಕೆ.ಎನ್ ನಟರಾಜ್, ಮಹೇಶ್, ಪಶುವೈದ್ಯ ಅಧಿಕಾರಿಗಳಾದ ಡಾ. ಎಸ್. ಶೈಲಜ, ಡಾ. ಪಿ. ಸಿ. ಶ್ರೀ ದೇವು, ಸೇರಿದಂತೆ ತಾಲೂಕಿನ ರೈತರು ಪಾಲ್ಗೊಂಡಿದ್ದರು.