ಜೆಮ್ ಶುಗರ್ಸ್‌ ನಿರ್ದೇಶಕ ಬಸವರಾಜ ಖೋತಗೆ ಸನ್ಮಾನ

| Published : Jul 22 2024, 01:21 AM IST

ಸಾರಾಂಶ

ಜಿಲ್ಲೆಯಲ್ಲಿನ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲೊಂದಾದ ಜೆಮ್ ಶುಗರ್ಸ್ ಲಿ ಕುಂದರಗಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾದ ಬಸವರಾಜ.ಬ.ಖೋತ ಅವರನ್ನು ಕಲಾದಗಿಯ ಬಾಜಪ ಯುವ ಮುಖಂಡರು, ಖೋತ ಅಭಿಮಾನಿ ಬಳಗ ಯುವಕ ಮಿತ್ರರು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಜಿಲ್ಲೆಯಲ್ಲಿನ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗಳಲ್ಲೊಂದಾದ ಜೆಮ್ ಶುಗರ್ಸ್‌ ಲಿ ಕುಂದರಗಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾದ ಬಸವರಾಜ.ಬ.ಖೋತ ಅವರನ್ನು ಕಲಾದಗಿಯ ಬಾಜಪ ಯುವ ಮುಖಂಡರು, ಖೋತ ಅಭಿಮಾನಿ ಬಳಗ ಯುವಕ ಮಿತ್ರರು ಸನ್ಮಾನಿಸಿದರು.

ಶ್ರೀರಾಮಲಿಂಗೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಅನಗವಾಡಿಯಲ್ಲಿನ ಬಿ.ಎನ್.ಖೋತ ಇಂಟರ್‌ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜು ಅಧ್ಯಕ್ಷ, ಜಿಲ್ಲಾ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಬಸವರಾಜ ಖೋತರವರು ಜೆಎಮ್ ಶುಗರ್ಸ್‌ ಸಕ್ಕರೆ ಕಾರ್ಖಾನೆಗೆ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಕಲಾದಗಿ ಭಾಗದ ಯುವ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.ಈ ವೇಳೆ ಖಜ್ಜಿಡೋಣಿ ಗ್ರಾಪಂ ಮಾಜಿ ಅಧ್ಯಕ್ಷ, ಸದಸ್ಯ ಪ್ರವೀಣ ಅರಕೇರಿ, ಹನಮಂತ ಮರೆಮ್ಮನವರ್, ಲಕ್ಷ್ಮಣ ಶಿರಬೂರು, ಆನಂದ ಅರಕೇರಿ, ಬಸವರಾಜ ಬಳಲೋದ್, ಕಾಂತು ಬೇವೂರು ಇನ್ನಿತರರು ಇದ್ದರು.