ಕುಕ್ಕೆ: ನಂದಿ ರಥಯಾತ್ರೆ ಸುಬ್ರಹ್ಮಣ್ಯ ಪುರಪ್ರವೇಶ

| Published : Mar 15 2025, 01:03 AM IST

ಸಾರಾಂಶ

ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹೊರಟಿರುವ ನಂದಿ ರಥಯಾತ್ರೆ ಶುಕ್ರವಾರ ಸುಬ್ರಹ್ಮಣ್ಯ ಪುರಪ್ರವೇಶ ಮಾಡಿದ್ದು, ಈ ವೇಳೆ ಸುಬ್ರಹ್ಮಣ್ಯ ಶ್ರೀಗಳು ರಥಯಾತ್ರೆಯನ್ನು ಸ್ವಾಗತಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಇಂದು ಲಾಭದಾಯಕ ದೃಷ್ಟಿಯಿಂದ ಬೆಳೆಗಳಿಗೆ ರಾಸಾಯನಿಕ ಹಾಕುವುದರಿಂದ ವಿಷಯುಕ್ತ ಆಹಾರ ಸೇವನೆ ನಮ್ಮ ಜೀವನದ ಒಂದು ಭಾಗವಾಗಿದೆ. ವಿಷಮುಕ್ತ ಆಹಾರ ಪಡೆಯಬೇಕಾದರೆ ನಾವು ಗೋವುಗಳನ್ನು ಸಾಕಿ ಸಾವಯವ ಗೊಬ್ಬರದಿಂದ ಬೆಳೆಗಳನ್ನು ಬೆಳೆಯಬೇಕು. ಗೋ ಸಂಪತ್ತು ನಮ್ಮ ನಿಜವಾದ ಸಂಪತ್ತು ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹೊರಟಿರುವ ನಂದಿ ರಥಯಾತ್ರೆ ಶುಕ್ರವಾರ ಸುಬ್ರಹ್ಮಣ್ಯ ಪುರಪ್ರವೇಶ ಮಾಡಿದ್ದು, ಈ ವೇಳೆ ಶ್ರೀಗಳು ನಂದಿ ರಥಯಾತ್ರೆಯನ್ನು ಸ್ವಾಗತಿಸಿ ಆಶೀರ್ವಚನ ನೀಡಿದರು. ಹಸು ನಮಗೆ ಇಡೀ ಜೀವನದಲ್ಲಿ ಆಹಾರ ನೀಡುತ್ತದೆ. ಗೋವಿನ ಸಂರಕ್ಷಣೆ ನಮ್ಮಿಂದಲೇ ಆಗಬೇಕಾಗಿದೆ. ಗೋವಿನ ಮೇಲಿನ ತುಚ್ಛ ಭಾವನೆ, ಗೋವನ್ನು ಮಾಂಸಕ್ಕಾಗಿ ಮಾರಾಟ ಮಾಡುವುದನ್ನು ನಾವು ಬಲವಾಗಿ ಖಂಡಿಸಬೇಕಾಗಿದೆ ಎಂದರು.

ರಥಯಾತ್ರೆಯನ್ನು ಸುಬ್ರಹ್ಮಣ್ಯದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ಮುಂಭಾಗ ಸ್ವಾಗತಿಸಲಾಯಿತು. ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಗೋವಿಗೆ ಹಾರ ಹಾಕಿ, ಫಲಹಾರ ನೀಡಿ ಹರಸಿದರು. ಬಳಿಕ ಮೆರವಣಿಗೆಯಲ್ಲಿ ನಂದಿ ರಥ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಗೆ ಸಾಗಿ ಬಂದು ಅಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಭಕ್ತಿ ಭೂಷನ್ ದಾಸ್, ಗೋಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತ ಪ್ರಶಿಕ್ಷಣ ಪ್ರಮುಖ್ ದತ್ತಾತ್ರೇಯ ಭಟ್, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯ ರಥಯಾತ್ರೆ ಸಂಚಾಲಕ ಕಿಶೋರ್ ಶಿರಾಡಿ, ಗೌರವಾಧ್ಯಕ್ಷ ಯಜ್ಞೇಶ್ ಆಚಾರ್, ಜಯಪ್ರಕಾಶ್ ಕೂಜುಗೋಡು, ದಿನೇಶ್ ಸಂಪ್ಯಾಡಿ, ಅಶೋಕ್ ಕುಮಾರ್, ಪ್ರಮೋದ್ ಕಡಬ, ಗಿರಿಧರ ಸ್ಕಂದ, ಶ್ರೀಕುಮಾರ್ ಬಿಲದ್ವಾರ, ಯಶೋಧ ಕೃಷ್ಣ ನೂಚಿಲ, ಜಯಪ್ರಕಾಶ್ ಮೊಗ್ರ, ಗಿರೀಶ್ ಆಚಾರ್ಯ, ನಾರಾಯಣ ಭಟ್, ರಾಜೇಶ್ ಎನ್, ಎಸ್, ಪಂಚಾಯಿತಿ ಅಧ್ಯಕ್ಷೆ ಸುಜಾತ ಕಲ್ಲಾಜೆ, ಚಂದ್ರ ಶೇಖರ ನಾಯರ್, ಭಾರತಿ ದಿನೇಶ್, ಶುಭಶಿಣಿ ಶಿವರಾಂ,ಲತಾಸರ್ವೆಶ್ವರ, ವನಜಾ ವಿ.ಭಟ್, ರಾಮಚಂದ್ರ ದೇವರಗದ್ದೆ ಮತ್ತಿತರರು ಹಾಜರಿದ್ದರು.ಚಿತ್ರ:೧೪ಎಸ್‌ಯುಬಿ-ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಗೋವಿಗೆ ಹಾರ ಹಾಕಿ, ಫಲಹಾರ ನೀಡಿ ಹರಸಿದರುಚಿತ್ರ: ೧೪ಎಸ್‌ಯುಬಿ-ರಥಯಾತ್ರೆಯನ್ನು ಸ್ವಾಗತಿಸಿ ಆಶೀರ್ವಚನ ನೀಡಿದರು