ಕುಕ್ಕೆ ಸುಬ್ರಹ್ಮಣ್ಯ: ನಾಣ್ಯದಲ್ಲಿ ಬಿಎಸ್‌ವೈ ತುಲಾಭಾರ ಸೇವೆ

| Published : Jun 25 2024, 12:34 AM IST

ಸಾರಾಂಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದರು. ಮೊದಲು ಕ್ಷೇತ್ರದಲ್ಲಿ ಸಂಕಲ್ಪ ಮಾಡಿ ನಾಣ್ಯದಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ಸಂಕಲ್ಪದಂತೆ ೧೩೦ಕೆ.ಜಿ ನಾಣ್ಯದಲ್ಲಿ ದೇವರಿಗೆ ತುಲಾಭಾರ ಸೇವೆ ಮಾಡಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದರು. ಮೊದಲು ಕ್ಷೇತ್ರದಲ್ಲಿ ಸಂಕಲ್ಪ ಮಾಡಿ ನಾಣ್ಯದಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ಸಂಕಲ್ಪದಂತೆ ೧೩೦ಕೆ.ಜಿ ನಾಣ್ಯದಲ್ಲಿ ದೇವರಿಗೆ ತುಲಾಭಾರ ಸೇವೆ ಮಾಡಿದರು. ಬಳಿಕ ದೇವರಿಗೆ ಮಹಾಭಿಷೇಕ ಸೇವೆ ಸಲ್ಲಿಸಿ ಮಧ್ಯಾಹ್ನದ ಮಹಾಪೂಜೆ ನೆರವೇರಿಸಿದರು.

ಪೂಜೆಯ ನಂತರ ಪ್ರದಾನ ಅರ್ಚಕ ರಮೇಶ್ ಆಸ್ರಣ್ಣ ಯಡಿಯೂರಪ್ಪ ಅವರಿಗೆ ಶಾಲು ಹೊದೆಸಿ ದೇವರ ಪ್ರಸಾದ ನೀಡಿ ಹರಸಿದರು. ನರಸಿಂಹ ಸ್ವಾಮಿ ದರುಶನ ಮತ್ತು ಕ್ಷೇತ್ರ ದೈವ ಹೊಸಳಿಗಮ್ಮ ಗುಡಿಯ ಪೂಜೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ಮುಂಜಾನೆ ಕ್ಷೇತ್ರಕ್ಕೆ ಆಗಮಿಸಿದ ಬಿ.ಎಸ್ ಯಡಿಯೂರಪ್ಪ ಅವರನ್ನು ದೇವಳದ ವತಿಯಿಂದ ಸೇರಿದಂತೆ ಬಿಜೆಪಿ ಶಾಸಕರು, ಮುಖಂಡರು ಹೂಗುಚ್ಛ ನೀಡಿ ಸ್ವಾಗತಿಸಿದರು.

ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಎಸ್. ಅಂಗಾರ, ದೇವಳದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಗೋವಿಂದ್ ನಾಯಕ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್, ಬಿಜೆಪಿ ಜಿಲ್ಲಾಧ್ಯಕ್ಷರು ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ರಾಕೇಶ್ ರೈ ಕೆಡೆಂಜಿ, ಬಿಜೆಪಿ ಜಿಲ್ಲಾ ಕೊಶಾಧಿಕಾರಿ ಸಂಜಯ್ ಪ್ರಭು, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಎ.ವಿ. ತೀರ್ಥರಾಮ್, ಮುಳಿಯ ಕೇಶವ ಭಟ್, ಶಿವಪ್ರಸಾದ ನಡುತೋಟ, ಶ್ರೀಕುಮಾರ್ ಬಿಲದ್ವಾರ, ಸುಬೋದ್ ಶೆಟ್ಟಿ ಮೇನಲ, ಗ್ರಾ.ಪಂ. ಅಧ್ಯಕ್ಷೆ ಸುಜಾತ ಕಲ್ಲಾಜೆ, ಗ್ರಾ.ಪಂ ಸದಸ್ಯರಾದ ಭಾರತಿ ದಿನೇಶ್, ಗಿರೀಶ್ ಪೈಲಾಜೆ, ದಿಲೀಪ್ ಉಪ್ಪಳಿಕೆ, ವೆಂಕಟೇಶ್ ಎಚ್.ಎಲ್., ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ.ಭಟ್, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಮಾಜಿ ಸದಸ್ಯ ಮನೋಜ್ ಎಸ್, ಶಕ್ತಿ ಕೇಂದ್ರ ಪ್ರಮುಖ್ ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಅಚ್ಚುತ್ತ ಗೌಡ ಮತ್ತಿತರರಿದ್ದರು.