ಸಾರಾಂಶ
ಸುಳ್ಯ ಡಾ.ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಸೇವಾರೂಪದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಿದ ಬೆಳ್ಳಿರಥದಲ್ಲಿ, ಪ್ರಥಮ ಬೆಳ್ಳಿ ರಥೋತ್ಸವ ಸೇವೆ ಸೋಮವಾರ ರಾತ್ರಿ ಜರುಗಿತು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಸುಳ್ಯ ಡಾ.ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಸೇವಾರೂಪದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡಿದ ಬೆಳ್ಳಿರಥದಲ್ಲಿ, ಪ್ರಥಮ ಬೆಳ್ಳಿ ರಥೋತ್ಸವ ಸೇವೆ ಸೋಮವಾರ ರಾತ್ರಿ ಜರುಗಿತು.ಬೆಳ್ಳಿರಥ ನೀಡಿದ ಡಾ.ರೇಣುಕಾಪ್ರಸಾದ್ ಮತ್ತು ಮನೆಯವರು ಪ್ರಥಮ ಬೆಳ್ಳಿ ರಥೋತ್ಸವ ಸೇವೆ ನೆರವೇರಿಸಿದರು. ರಾತ್ರಿ ದೇವರ ಮಹಾಪೂಜೆ ಬಳಿಕ ಒಳಾಂಗಣ ಉತ್ಸವ ಜರುಗಿತು. ಆರಂಭದಲ್ಲಿ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಜರುಗಿತು. ಬಳಿಕ ಬೆಳ್ಳಿರಥದಲ್ಲಿ ದೇವರ ರಥೋತ್ಸವ ಜರುಗಿತು. ಸಹಸ್ರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.ಡಾ.ರೇಣುಕಾ ಪ್ರಸಾದ್ ಕೆ.ವಿ., ಡಾ.ಜ್ಯೋತಿ ಆರ್. ಪ್ರಸಾದ್, ಮೌರ್ಯ ಆರ್. ಪ್ರಸಾದ್ ಕುರುಂಜಿ, ಡಾ.ಅಭಿಜ್ಞಾ ಗೋಕುಲ್, ಗೋಕುಲ್, ಸಂಸದ ಬ್ರಿಜೇಶ್ ಚೌಟ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಸದಸ್ಯರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಕಲ್ಲಾಜೆ, ಗ್ರಾಮ ಪಂಚಾಯಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮೋಹನ್‌ರಾಂ ಸುಳ್ಳಿ ಸೇರಿದಂತೆ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))