ಸಾರಾಂಶ
ರಾಜ್ಯದ ಶ್ರೀಮಂತ ದೇವಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ೨೦೨೪-೨೫ನೇ ಸಾಲಿನ ವಾರ್ಷಿಕ ಆದಾಯ ರು.೧೫೫,೯೫,೧೯,೫೬೭.೦೮ ಗೆ ಏರಿಕೆಯಾಗಿದ್ದು, ಕಳೆದ ವರ್ಷ ಕ್ಷೇತ್ರದ ಆದಾಯ ರು.೧೪೬.೦೧ ಕೋಟಿ ಆಗಿತ್ತು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ರಾಜ್ಯದ ಶ್ರೀಮಂತ ದೇವಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ೨೦೨೪-೨೫ನೇ ಸಾಲಿನ ವಾರ್ಷಿಕ ಆದಾಯ ರು.೧೫೫,೯೫,೧೯,೫೬೭.೦೮ ಗೆ ಏರಿಕೆಯಾಗಿದ್ದು, ಕಳೆದ ವರ್ಷ ಕ್ಷೇತ್ರದ ಆದಾಯ ರು.೧೪೬.೦೧ ಕೋಟಿ ಆಗಿತ್ತು.ಆದಾಯ:
ಭೂಮಿ ಸಂಬಂಧ ಗುತ್ತಿಗೆಗಳಿಂದ ಬರುವ ವರಮಾನ ರು.೮೦,೬೨,೩೨೦.೦೦, ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನ ರು.೧೩,೨೪,೨೯೯.೬೦, ಕಟ್ಟಡಗಳು/ಅಂಗಡಿಗಳ ಬಾಡಿಗೆಯಿಂದ ರು.೧,೧೦,೨೬,೩೦೦.೦೦, ರೂಢಿಗತ ಜಮೆಗಳು ಕಾಣಿಕೆ ರು.೫,೪೨,೨೦,೯೩೬.೭೨, ಕಾಣಿಕೆ (ಇ ಹುಂಡಿ) ರು.೪೪,೧೮,೪೯೮.೫೬, ಹುಂಡಿ ಸಂಗ್ರಹಣೆ ರು.೨೭,೩೪,೩೮,೭೭೫.೦೦, ಸೇವಾ ಕಾಣಿಕೆ ರು.೫೯,೧೯,೭೪,೭೬೦.೪೩, ಅನುದಾನ ೨,೫೧,೭೦೧.೦೦, ಹೂಡಿಕೆಗಳಿಂದ ಬಂದ ವರಮಾನಗಳಲ್ಲಿ ಹೂಡಿಕೆಯಿಂದ ಬಂದ ಬಡ್ಡಿ ರು.೪೨,೪೭,೪೪,೪೬೩.೦೦, ಉಳಿತಾಯ ಖಾತೆ ಹಾಗೂ ಇತರೆ ಬಡ್ಡಿ ರೂ.೭೦,೪೨,೭೩೪.೦೦, ಸಂಕೀರ್ಣ ಜಮೆಗಳು - ಇತರ ಬಾಬ್ತುಗಳು ರು.೩,೦೭,೯೦,೨೦೪.೫೨, ಛತ್ರ ಸಂರಕ್ಷಣಾ ವಂತಿಗೆ ರು.೬,೪೨,೩೧,೭೫೦.೦೦, ಅನ್ನಸಂತರ್ಪಣೆ ನಿಽ (ಮೀಸಲು ನಿಧಿ) ರು.೮,೦೬,೭೬,೧೩೬.೦೦, ಅಭಿವೃದ್ಧಿ ನಿಧಿ ರು.೮,೬೭,೪೩೮.೨೫, ಶಾಶ್ವತ ಸೇವಾ ಮೂಲಧನ ರು.೬೪,೪೯,೨೫೦.೦೦ ಸೇರಿದಂತೆ ಒಟ್ಟು ಜಮೆ (ಒಟ್ಟು ಆದಾಯ) ರು.೧೫೫,೯೫,೧೯,೫೬೭.೦೮ ಸಂಗ್ರಹಗೊಂಡಿದೆ.ಖರ್ಚು:ಸಿಬ್ಬಂದಿ ವರ್ಗ ರು.೨೨,೬೫,೧೨,೩೫೨.೦೬, ನಿತ್ಯಕಟ್ಲೆ ರು.೪೫,೧೨,೫೭೬.೦೦, ಹೆಚ್ಚುಕಟ್ಲೆ ರು.೭೯,೯೩,೬೩೦.೦೦, ರಥೋತ್ಸವ ರು.೨,೭೯,೧೩,೭೧೭.೦೦, ಇತರ ವಿಶೇಷ ಸಂದರ್ಭಗಳು ರು.೯,೯೫,೮೬೮.೦೦, ಹರಿಕೆ ಸೇವೆಗಳ ಖರ್ಚು ರು.೨೨,೩೦,೨೮,೨೯೮.೦೦, ಭೂಮಿಗಳು ರೂ.೨,೧೩,೨೬೩.೦೦, ಕಟ್ಟಡಗಳು ರು.೧,೫೯,೨೯,೪೪೩.೦೦, ತೆರಿಗೆಗಳು ರು.೪೬,೫೮೨.೦೦, ಸಾಧನ ಸರಂಜಾಮು ರು.೧,೪೩,೯೨,೧೯೬.೦೦, ಜನಾರೋಗ್ಯ ರು.೩,೨೦,೦೩,೮೧೨.೦೦, ಶಿಕ್ಷಣ, ಧಾರ್ಮಿಕ ಮತ್ತು ಧರ್ಮಾದಾಯಗಳು ರು.೧೬,೫೬,೬೫,೭೭೩.೦೦, ವಂತಿಗೆಗಳು - ಸಾಮಾನ್ಯ ಸಂಗ್ರಹಣಾ ನಿಧಿ ರು.೪,೯೩,೯೯,೯೫೩.೦೦, ಲೆಕ್ಕ ಪರಿಶೋಧನಾ ನಿಧಿ ರು.೧,೦೦,೦೦,೦೦೦.೦೦, ವ್ಯಾಜ್ಯದ ವೆಚ್ಚ ರು.೭,೨೪,೯೧೦.೦೦, ದೇವಸ್ಥಾನದ ನೌಕರರಿಗೆ ಸೇವಾಂತ್ಯ ಸೌಲಭ್ಯಗಳು ರು.೭೫,೫೩,೫೭೫.೦೦, ವಿಶೇಷ - ಹೊಸ ಕಟ್ಟಡಗಳ ನಿರ್ಮಾಣ ರು.೬,೬೮,೦೯೪.೦೦, ಕಾಮಗಾರಿಗಳ (ಕಟ್ಟಡ ಹೊರತು) ರು.೧,೦೭,೧೯,೧೫೫.೦೦ ಸೇರಿದಂತೆ ಒಟ್ಟು ಖರ್ಚು ರು.೭೯,೮೨,೭೩,೧೯೭.೦೬ ಆಗಿದೆ.೨೦೨೩-೨೪ರಲ್ಲಿ ರು.೧೪೬.೦೧ ಕೋಟಿ, ೨೦೨೨-೨೩ರಲ್ಲಿ ರು.೧೨೩ ಕೋಟಿ, ೨೦೨೧-೨೨ರಲ್ಲಿ ರು.೭೨.೭೩ ಕೋಟಿ, ೨೦೨೦-೨೧ರಲ್ಲಿ ರು.೬೮.೯೪ ಕೋಟಿ, ೨೦೧೯-೨೦ರಲ್ಲಿ ರು.೯೮.೯೨ ಕೋಟಿ, ೨೦೧೮-೧೯ರಲ್ಲಿ ೯೨.೦೯ ಕೋಟಿ, ೨೦೧೭-೧೮ರಲ್ಲಿ ೯೫.೯೨ ಕೋಟಿ, ೨೦೧೬-೧೭ರಲ್ಲಿ ರು.೮೯.೬೫ ಕೋಟಿ, ೨೦೧೫-೧೬ರಲ್ಲಿ ರು.೮೮.೮೩ ಕೋಟಿ, ೨೦೧೪-೧೫ರಲ್ಲಿ ರು.೭೭.೬೦ ಕೋಟಿ, ೨೦೧೩-೧೪ರಲ್ಲಿ ರು.೬೮ ಕೋಟಿ, ೨೦೧೨-೧೩ರಲ್ಲಿ ರು.೬೬.೭೬ ಕೋಟಿ, ೨೦೧೧-೧೨ರಲ್ಲಿ ರು.೫೬.೨೪ ಕೋಟಿ ಆದಾಯವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಗಳಿಸಿದೆ.