ಸಾರಾಂಶ
ಸಹಸ್ರಾರು ಭಕ್ತಾದಿಗಳು ಶ್ರೀ ದೇವರ ಉತ್ಸವದಲ್ಲಿ ಪಾಲ್ಕೊಂಡರು. ಮುಂದಿನ ಕಾರ್ತಿಕ ಮಾಸದಲ್ಲಿ ಬರುವ ಲಕ್ಷ ದೀಪೋತ್ಸವದ ಬಳಿಕ ರಥಬೀದಿಯಲ್ಲಿ ರಥೋತ್ಸವ ಆರಂಭಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶನಿವಾರ ಸುಬ್ರಹ್ಮಣ್ಯ ದೇವರು ಹೊರಾಂಗಣ ಪ್ರವೇಶಿಸುವ ಮೂಲಕ ವರ್ಷಾವಧಿ ಉತ್ಸವಗಳು ಆರಂಭವಾದವು. ದೀಪಾವಳಿ ಪ್ರಯುಕ್ತ ಶನಿವಾರ ರಾತ್ರಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು. ಮುಂದೆ ಕುಕ್ಕೆ ದೇವಳದಲ್ಲಿ ಶ್ರೀ ದೇವರ ಪಾಲಕಿ ಉತ್ಸವ, ಬಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತದೆ. ಲಕ್ಷದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿದೆ.ಕುಕ್ಕೆ ದೇವಸ್ಥಾನದಲ್ಲಿ ಜೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವವು ನಡೆದು, ದೀಪಾವಳಿ ಅಮವಾಸ್ಯೆಯಂದು ಉತ್ಸವ ಆರಂಭವಾಗುತ್ತದೆ. ರಾತ್ರಿಯ ಮಹಾಪೂಜೆಯ ಬಳಿಕ ದೇವರ ಉತ್ಸವಾದಿಗಳು ನೆರವೇರಿತು. ಸಹಸ್ರಾರು ಭಕ್ತಾದಿಗಳು ಶ್ರೀ ದೇವರ ಉತ್ಸವದಲ್ಲಿ ಪಾಲ್ಕೊಂಡರು. ಮುಂದಿನ ಕಾರ್ತಿಕ ಮಾಸದಲ್ಲಿ ಬರುವ ಲಕ್ಷ ದೀಪೋತ್ಸವದ ಬಳಿಕ ರಥಬೀದಿಯಲ್ಲಿ ರಥೋತ್ಸವ ಆರಂಭಗೊಳ್ಳಲಿದೆ. ದೇವಳದಲ್ಲಿ ಬಲೀಂದ್ರ ಮರ: ಸುಬ್ರಹ್ಮಣ್ಯ ದೇವಳದಲ್ಲಿ ದೀಪಾವಳಿ ಅಮವಾಸ್ಯೆಯ ಶುಭದಿನ ಶುಕ್ರವಾರ ಬಲೀಂದ್ರ (ದೀಪಾಲೆ) ಮರವನ್ನು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಏರಿಸಲಾಯಿತು. ರಾತ್ರಿ ಅವಲಕ್ಕಿ ಪಲ್ಲಪೂಜೆ ನಡೆದ ಬಳಿಕ ಬಲೀಂದ್ರ ಕಂಬಕ್ಕೆ ಪೂಜೆ ನಡೆಯಿತು.