ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ನಿಟ್ಟೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕುಮಾರ ಮತ್ತು ಉಪಾಧ್ಯಕ್ಷರಾಗಿ ವೆಂಕಟೇಶ್ ಆಯ್ಕೆಯಾದರು.ಸಂಘದ 10 ನಿರ್ದೇಶಕ ಬಲದ ಆಡಳಿತ ಮಂಡಳಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಕುಮಾರ ಮತ್ತು ಎನ್.ಸಿ ಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಎನ್.ಸಿ ಸ್ವಾಮಿ ಒಂದು ಮತ ಪಡೆದರೆ, ಕುಮಾರ ಆರು ಮತ ಪಡೆದು ವಿಜಯದ ನಗೆ ಬೀರಿದರು.
ಉಪಾದ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಅಧಿಕಾರಿ ಸಂತೋಷ್ ಕುಮಾರ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.ನಂತರ ಅಧ್ಯಕ್ಷ ಕುಮಾರ ಮಾತನಾಡಿ, ಸಂಘದ ಸದಸ್ಯರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲಾ ನಿರ್ದೇಶಕರು ಒಗ್ಗೂಡಿ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ವೀರಭದ್ರಸ್ವಾಮಿ, ಕೃಷ್ಣ, ಪುಟ್ಟಸ್ವಾಮಿಗೌಡ, ಕುಮಾರ, ನಂದಾ, ವೆಂಕಟೇಶ್, ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ ಹರ್ಷಿತ್, ಮನ್ಮುಲ್ ವಿಸ್ತರಣಾ ಅಧಿಕಾರಿ ಎಸ್.ಎನ್ ರೇಖಾ, ಮುಖಂಡರಾದ ಶಂಕರ, ಸಿಬ್ಬಂದಿ ಪೂಜಾ, ದರ್ಶನ್ ಸೇರಿದಂತೆ ಹಲವರು ಭಾಗವಹಿಸಿದ್ದರು.ಸರ್ಕಾರಿ ಶಾಲೆಯಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ
ಹಲಗೂರು: ನಂಜಾಪುರದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಗ್ರಾಪಂನಿಂದ ಡಿಜಿಟಲ್ ಗ್ರಂಥಾಲಯವನ್ನು ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷೆ ಅಲಮೇಲಮ್ಮ ಉದ್ಘಾಟಿಸಿದರು.ಉಪಾಧ್ಯಕ್ಷ ದಾಸಭೋಯಿ ಮಾತನಾಡಿ, ಗೊಲ್ಲರಹಳ್ಳಿ ಮತ್ತು ನಂಜಾಪುರದಲ್ಲಿ ಗ್ರಂಥಾಲಯ ಪ್ರಾರಂಭ ಮಾಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಗ್ರಂಥಾಲಯದಲ್ಲಿ ಕವಿಗಳು ಮಹನೀಯರು ಬರೆದಿರುವ ಪುಸ್ತಕಗಳು ಇದೆ. ಅವುಗಳನ್ನು ಓದಿದರೆ ಜ್ಞಾನಾರ್ಜನೆಗೂ ಸಹ ಸಹಕಾರಿಯಾಗಲಿದೆ ಎಂದರು.
ಗ್ರಾಪಂ ಸದಸ್ಯ ರಾಜೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯ ಪ್ರಾರಂಭ ಮಾಡಿರುವುದು ಶ್ಲಾಘನೀಯ. ಇದನ್ನು ಇಲ್ಲಿನ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ನಿಮಗೆ ಬಿಡುವಿನ ವೇಳೆ ಇರುವಾಗ ಸಮಯವನ್ನು ವ್ಯರ್ಥ ಮಾಡದೆ ಗ್ರಂಥಾಲಯಕ್ಕೆ ಬಂದು ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಈ ವೇಳೆ ಗ್ರಾಪಂ ಹೇಮಾವತಿ ಸಿದ್ದಯ್ಯ ಮಹಾದೇವಮ್ಮ ಕುಳ್ಳ ಮಾಧು, ಪಿಡಿಒ ಮಲ್ಲಿಕಾರ್ಜುನ, ಕಾರ್ಯದರ್ಶಿ ಕಾಲರಾಜು, ಬಿಲ್ ಕಲೆಕ್ಟರ್ ಪ್ರಕಾಶ್, ಸಿ ಆರ್ ಪಿ ಯ ಶಿಕ್ಷಕ ಪುಟ್ಟರಾಜು, ಶಿಕ್ಷಕ ಬಸವರಾಜು, ಮುಖಂಡರಾದ ಕುನ್ನಯ್ಯ, ಕಾಂತರಾಜು, ಸಿದ್ದರಾಜು, ಮಂಜು , ಸೇರದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))