ಭಾರತೀಯ ಸಂಸ್ಕೃತಿಗೆ ಕುಮಾರ ಶಿವಯೋಗಿಗಳು ಕೊಡುಗೆ ಅಪಾರ: ಜನಾರ್ದನ ರೆಡ್ಡಿ

| Published : Sep 21 2025, 02:02 AM IST

ಭಾರತೀಯ ಸಂಸ್ಕೃತಿಗೆ ಕುಮಾರ ಶಿವಯೋಗಿಗಳು ಕೊಡುಗೆ ಅಪಾರ: ಜನಾರ್ದನ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ನಗರದ ಶ್ರೀ ಚೆನ್ನಬಸವಸ್ವಾಮಿ ಕಲ್ಯಾಣ ಮಂಟಪ ಆವರಣದಲ್ಲಿ ಜರುಗಿದ ಹಾನಗಲ್ ಕುಮಾರ ಸ್ವಾಮೀಜಿಗಳ 158ನೇ ಜಯಂತಿ ಮತ್ತು ಸದ್ಭಾವನಾ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ 100ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಗಂಗಾವತಿ: ಹಾನಗಲ್ ಕುಮಾರ ಶಿವಯೋಗಿಗಳು ಶರಣ ಸಂಸ್ಕೃತಿಯ ಮಹಾ ತಪಸ್ವಿಯಾಗಿದ್ದರು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಶ್ರೀ ಚೆನ್ನಬಸವಸ್ವಾಮಿ ಕಲ್ಯಾಣ ಮಂಟಪ ಆವರಣದಲ್ಲಿ ಜರುಗಿದ ಹಾನಗಲ್ ಕುಮಾರ ಸ್ವಾಮೀಜಿಗಳ 158ನೇ ಜಯಂತಿ ಮತ್ತು ಸದ್ಭಾವನಾ ಪಾದಯಾತ್ರೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತದ ಸಂಸ್ಕೃತಿಗೆ ಕುಮಾರ ಶಿವಯೋಗಿಗಳವರ ಕೊಡುಗೆ ಅಪಾರವಾಗಿದ್ದು, ಶರಣ ಸಂಸ್ಕೃತಿ ಬೆಳಗಿಸಿದ ಮಹಾತಪಸ್ವಿಯಾಗಿದ್ದಾರೆ ಎಂದರು.

ಗಂಗಾವತಿ ನಗರದ ಸರ್ವಾಂಗೀಣ ಅಭಿವೃದ್ದಿಗೆ ತಾವು ಶ್ರಮಿಸುತ್ತಿದ್ದು, ಬರುವ ದಿನಗಳಲ್ಲಿ ಗಂಗಾವತಿ ನಗರ ಚೋಟಾ ಬಾಂಬೆ ಎನಿಸಿಕೊಳ್ಳುತ್ತದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಟಟಕ್ಕೆ ಬಲಿಯಾಗುತ್ತಿದ್ದಾರೆ. ಈ ಸದ್ಭಾವನಾ ಪಾದಯಾತ್ರೆಯಿಂದ ಯುವಕರು ಬದಲಾವಣೆ ತಂದುಕೊಳ್ಳಬೇಕು ಎಂದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಕುಮಾರೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಕುರಹೀನ ಶೆಟ್ಟಿ ಸಮಾಜದವರಿಗೆ ಕುಂಭ ಮೆರವಣಿಗೆ ಅವಕಾಶ ನೀಡಿದ್ದೀರಿ, ಇದಕ್ಕೆ ತಮಗೆ ತೃಪ್ತಿ ತಂದಿದೆ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, 10 ದಿನಗಳ ಕಾಲ ನಗರ ಸೇರಿದಂತೆ ಗ್ರಾಮೀಣ ಮಟ್ಟದಲ್ಲಿ ಸದ್ಭಾವನ ಯಾತ್ರೆ ಯಶಸ್ವಿಗೊಳಿಸಿದ್ದೀರಿ. ಇದಕ್ಕೆ ಹಾನಗಲ್ ಕುಮಾರೇಶ್ವರ ಕೃಪೆ ಎಂದರು. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಜಿ. ವೀರಪ್ಪ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಗುತ್ತಿಗೆದಾರ ವೀರಯ್ಯಸ್ವಾಮಿ, ಗಿರೇಗೌಡ, ಅಶೋಕಸ್ವಾಮಿ, ವೈ. ಆನಂದರಾವ್‌ ಭಾಗವಹಿಸಿದ್ದರು.

ವಿಜಯಮಹಾಂತ ಸ್ವಾಮೀಜಿಗಳು, ಶಿವಕುಮಾರ ದೇವರು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಡಾ. ಚನ್ನಮಲ್ಲ ಮಹಾಸ್ವಾಮಿಗಳು ಕನಕಗಿರಿ, ಬಿಜಕಲ್ ಶಿವಲಿಂಗಮಹಾಸ್ವಾಮಿಗಳು, ಡಾ. ಕೊಟ್ಟೂರು ಸ್ವಾಮೀಜಿ, ನಿಡಶೇಸಿ ಶಿವಚಾರ್ಯ ಸ್ವಾಮೀಜಿಗಳು ಸೇರಿದಂತೆ 100ಕ್ಕೂ ಹೆಚ್ಚು ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.

ಮೆರವಣಿಗೆ: ಹಾನಗಲ್ ಕುಮಾರಸ್ವಾಮೀಜಿಗಳ 158ನೇ ಜಯಂತಿ ಮತ್ತು ಸದ್ಭಾವನಾ ಪಾದಯಾತ್ರೆಯ ಸಮಾರೋಪ ಅಂಗವಾಗಿ ನಗರದ ನೀಲಕಂಠೇಶ್ವೇರ ದೇವಸ್ಥಾನದಿಂದ ಸಿಬಿಎಸ್ ಕಲ್ಯಾಣ ಮಂಟಪದ ವರೆಗೆ ಕುಂಭ ಮೆರವಣಿಗೆ ಜರುಗಿತು.