30ರಿಂದ ನ. ೩ರ ವರೆಗೆ ಕುಮಟಾ ವೈಭವ: ಮಂಜುನಾಥ ನಾಯ್ಕ

| Published : Oct 11 2025, 12:03 AM IST

30ರಿಂದ ನ. ೩ರ ವರೆಗೆ ಕುಮಟಾ ವೈಭವ: ಮಂಜುನಾಥ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿವರ್ಷವೂ ಸ್ಥಳೀಯ ಹಾಗೂ ರಾಜ್ಯಮಟ್ಟದ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ, ಮನೋರಂಜಕ ಕಾರ್ಯಕ್ರಮಗಳ ರಸದೂಟ ಬಡಿಸುತ್ತಾ ಬಂದಿರುವ ಬೆಂಗಳೂರಿನ ತಾಂಡವ ಕಲಾನಿಕೇತನದ ಮುಂದಾಳತ್ವದ ಕುಮಟಾ ವೈಭವ ಕಾರ್ಯಕ್ರಮವನ್ನು ಈ ಸಲ ಪಟ್ಟಣದ ಮಣಕಿ ಮಹಾತ್ಮಾಗಾಂಧಿ ಮೈದಾನದಲ್ಲಿ ಅ.೩೦ ರಿಂದ ನ. ೩ರ ವರೆಗೆ ೫ ದಿನಗಳ ಕಾಲ ದಿ.ಲಿಂಗಪ್ಪ ಮಾಸ್ತರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಮಣಕಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಕನ್ನಡಪ್ರಭ ವಾರ್ತೆ ಕುಮಟಾ

ಪ್ರತಿವರ್ಷವೂ ಸ್ಥಳೀಯ ಹಾಗೂ ರಾಜ್ಯಮಟ್ಟದ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ, ಮನೋರಂಜಕ ಕಾರ್ಯಕ್ರಮಗಳ ರಸದೂಟ ಬಡಿಸುತ್ತಾ ಬಂದಿರುವ ಬೆಂಗಳೂರಿನ ತಾಂಡವ ಕಲಾನಿಕೇತನದ ಮುಂದಾಳತ್ವದ ಕುಮಟಾ ವೈಭವ ಕಾರ್ಯಕ್ರಮವನ್ನು ಈ ಸಲ ಪಟ್ಟಣದ ಮಣಕಿ ಮಹಾತ್ಮಾಗಾಂಧಿ ಮೈದಾನದಲ್ಲಿ ಅ.೩೦ ರಿಂದ ನ. ೩ರ ವರೆಗೆ ೫ ದಿನಗಳ ಕಾಲ ದಿ.ಲಿಂಗಪ್ಪ ಮಾಸ್ತರ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಂಡವ ಕಲಾನಿಕೇತನದ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು.

ಎಲ್ಲ ೫ ದಿನಗಳಲ್ಲಿ ರಾಜ್ಯದ ವಿವಿಧೆಡೆ ಹಾಗೂ ಬೆಂಗಳೂರಿನ ಖ್ಯಾತ ಕಲಾವಿದರ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ನಮ್ಮದೇ ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ಸಾರುವ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಸಂಯೋಜಿಸಲಾಗಿದೆ. ಅ.೩೦ರಂದು ಖ್ಯಾತ ಗಾಯಕ ಗುರುಕಿರಣ್ ತಂಡದಿಂದ ಸಂಗೀತ ಕಾರ್ಯಕ್ರಮ, ಅ.೩೧ರಂದು ಆ್ಯಂಕರ್ ಅನುಶ್ರೀ ಅವರಿಂದ ಕಾರ್ಯಕ್ರಮ. ನ.೧ರ ಕನ್ನಡ ರಾಜ್ಯೋತ್ಸವದಂದು ದೂರದರ್ಶನದ ಸಾರ್ಥವಳ್ಳಿ ನಾರಾಯಣಸ್ವಾಮಿ ಸಾರಥ್ಯದ ಬಸವ ಚಾನಲ್‌ನಿಂದ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಲು ಗಾನ ನಾಟ್ಯ ರಸಧಾರೆ ಕಾರ್ಯಕ್ರಮ, ನ. ೨ರಂದು ಹಾಸ್ಯ ಸಂಜೆ, ನ.೩ರಂದು ಯುವಕರಿಗಾಗಿ ಡಿಜೆ ಬ್ರೋಸ್ಟರ್, ಇಂಗ್ಲೆಂಡ್‌ನಿಂದ ಎಲ್‌ಇಡಿ ಡ್ಯಾನ್ಸರ್, ವಿರಾಜ್ ಕನ್ನಡಿಗ ರ‍್ಯಾಪರ್ಸ್ ತಂಡದವರು ಪ್ರದರ್ಶನ ನೀಡಲಿದ್ದು, ಕಾರ್ಯಕ್ರಮದ ಎಲ್ಲಾ ದಿನಗಳಲ್ಲಿ ಸ್ಥಳೀಯ ನೂರಾರು ಕಲಾವಿದರು ಭಾಗವಹಿಸಲಿದ್ದಾರೆ. ಈ ವರ್ಷದಿಂದ ತಾಂಡವ ಕಲಾನಿಕೇತನ ತಾಲೂಕಾ ಸಮಿತಿ ರಚನೆ ಮಾಡಿ ಅದರ ಮೂಲಕ ಕಾರ್ಯಕ್ರಮ ಪ್ರಸ್ತುತಪಡಿಸಲಾಗುತ್ತಿದೆ ಎಂದರು.

ಕಾರ್ಯದರ್ಶಿ ಪ್ರೊ. ಮಂಜುನಾಥ ಭಂಡಾರಿ ಮಾತನಾಡಿ, ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಸುಗ್ಗಿ ಕುಣಿತ, ಯಕ್ಷ ರೂಪಕ, ಯಕ್ಷ ನೃತ್ಯ, ಕಂಸಾಳೆ, ಬೇಡರ ವೇಷ, ಹುಲಿ ವೇಷ, ದೇಶಭಕ್ತಿ ನೃತ್ಯ, ಕನ್ನಡ ನಾಡು ನುಡಿ ಕುರಿತಾದ ನೃತ್ಯ, ಕೋಲಾಟ, ಹಿ-ಪಾಪ್, ಸಾಲ್ಸಾ, ಕಾಂಟೆಂಪರರಿ ಮುಂತಾದ ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿಚ್ಚಿಸುವವರು ತಮ್ಮ ಹೆಸರನ್ನು ಅ. ೧೬ಕ್ಕೆ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು ಎಂದರು.

ಸಮಿತಿ ಉಪಾಧ್ಯಕ್ಷ ಮಂಜುನಾಥ ಎಚ್.ನಾಯ್ಕ ಬಾಡ, ಸಂಘಟನಾ ಕಾರ್ಯದರ್ಶಿ ಲಂಬೋದರ ನಾಯ್ಕ ಅಘನಾಶಿನಿ, ಮೋಹನ ಆಚಾರಿ ಹಳದೀಪುರ, ಸಚಿನ ನಾಯ್ಕ ಬಾಡ, ಹರೀಶ ನಾಯ್ಕ ಕಲಭಾಗ, ಮಹೇಶ ಕರ್ಕೀಕರ, ನಾಗರಾಜ ಕನ್ನಡಿಗ, ಜಗದೀಶ ನಾಯ್ಕ, ಗಣಪತಿ ಗುನಗ, ವಿಕಾಸ ನಾಯ್ಕ ಕತಗಾಲ, ಕೃಷ್ಣಾ ಪಟಗಾರ ದೇವಗುಂಡಿ, ರವಿ ಶೇಟ್, ಮಂಜುನಾಥ ನಾಯ್ಕ ಹೆಗಡೆ, ರವಿ ಜೆ. ಗಾವಡಿ, ಮಂಜುನಾಥ ಭಟ್ಟ, ಮಂಜುನಾಥ ನಾಯ್ಕ, ಗಿರೀಶ ಪಟಗಾರ ಹೆಗಡೆ, ಕೃಷ್ಣಾನಂದ ಭಟ್ಟ ಉಪ್ಲೆ, ಮಂಜುನಾಥ ನಾಯ್ಕ ಕೋನಳ್ಳಿ, ಯಶವಂತ ನಾಯ್ಕ ಅಳ್ವೆಕೋಡಿ, ನರಸಿಂಹ ಭಟ್ಟ ಕಡತೋಕಾ ಇತರರಿದ್ದರು.