ಕುಂದಾಪುರ: ಐಎಂಜೆ ಸಂಸ್ಥೆಯಲ್ಲಿ ಏವಿಯೇಷನ್‌ ಉದ್ಯೋಗಾವಕಾಶ ಕಾರ್ಯಾಗಾರ

| Published : May 02 2025, 12:11 AM IST

ಕುಂದಾಪುರ: ಐಎಂಜೆ ಸಂಸ್ಥೆಯಲ್ಲಿ ಏವಿಯೇಷನ್‌ ಉದ್ಯೋಗಾವಕಾಶ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು ಇತ್ತೀಚೆಗೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ‘ಗೇಟ್ ವೇ ಟು ಎವಿಯೇಷನ್ ಕೆರಿಯರ್ಸ್’ ಎನ್ನುವ ವಿಷಯದ ಕುರಿತು ಕಾರ್ಯಾಗಾರ ಹಮ್ಮಿಕೊಂಡಿತ್ತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು ಇತ್ತೀಚೆಗೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ‘ಗೇಟ್ ವೇ ಟು ಎವಿಯೇಷನ್ ಕೆರಿಯರ್ಸ್’ ಎನ್ನುವ ವಿಷಯದ ಕುರಿತು ಕಾರ್ಯಾಗಾರ ಹಮ್ಮಿಕೊಂಡಿತ್ತು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತ್ರಸ್ಟ್ ಅಕಾಡೆಮಿ ಸಂಸ್ಥಾಪಕ ಕಾರ್ತಿಕ್ ಆಳ್ವ ಅವರು ಎವಿಯೇಷನ್ ವಲಯದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎವಿಯೇಷನ್ ಉದ್ದಿಮೆ, ಲಭ್ಯವಿರುವ ಉದ್ಯೋಗ ಅವಕಾಶಗಳು, ಅದಕ್ಕೆ ಬೇಕಾದ ಸಕಲ ತಯಾರಿ ಹೀಗೆ ಹಲವು ವಿಷಯವನ್ನು ತಿಳಿಸಿದರು. ಪದವಿ ಜೊತೆಯಲ್ಲಿ ಉದ್ಯೋಗಕ್ಕೆ ನೇರವಾಗುವ ವೈವಿದ್ಯ ಕೋರ್ಸ್ ಗಳನ್ನು ನೀಡುತ್ತಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಕಾರ್ಯಾಗಾರದ ನಂತರ ಆಸಕ್ತಿ ಹೊಂದಿದ ವಿದ್ಯಾರ್ಥಿಗಳನ್ನು ಗುರುತಿಸಿ ನೇರ ಸಂದರ್ಶನವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ನ ಮುಖ್ಯಸ್ಥ ಜಯಶೀಲ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಂಗ್ಲಿಷ್ ಉಪನ್ಯಾಸಕಿ ಹಾಗೂ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ನ ಸಹ ಸಂಯೋಜಕಿ ರಾಜೇಶ್ವರಿ ಶೆಟ್ಟಿ ನಿರೂಪಿಸಿದರು.