ಸಾರಾಂಶ
ಮೂಡ್ಲಕಟ್ಟೆಯ ಇಂಜಿನಿಯರಿಂಗ್ ಕಾಲೇಜು (ಎಂಐಟಿ) ನಲ್ಲಿ ಎಂಐಟಿಕೆ ಪ್ರೀಮಿಯರ್ ಲೀಗ್ - 2025 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಹಾಕ್ ಐಸ್ ತಂಡವು ಎಂಬಿಎ ಡೆಮನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಇಂಜಿನಿಯರಿಂಗ್ ಕಾಲೇಜು (ಎಂಐಟಿ) ನಲ್ಲಿ ಎಂಐಟಿಕೆ ಪ್ರೀಮಿಯರ್ ಲೀಗ್ - 2025 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ 8 ತಂಡಗಳು ಭಾಗವಹಿಸಿದ್ದು, ಅಂತಿಮ ಪಂದ್ಯ ದಲ್ಲಿ ಹಾಕ್ ಐಸ್ ತಂಡವು ಎಂಬಿಎ ಡೆಮನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ 6 ತಂಡಗಳು ಭಾಗವಹಿಸಿದ್ದ, ಅಂತಿಮ ಪಂದ್ಯದಲ್ಲಿ ಫೀನಿಕ್ಸ್ ತಂಡವು ಪ್ರಶಸ್ತಿ ಗೆದ್ದುಕೊಂಡರೇ ಹಾಕ್ ಐಸ್ ತಂಡ ರನ್ನರ್ಸ್ ಆಗಿ ಹೊರಹೊಮ್ಮಿದವು.ವಿಕಾಸ್ ಬಿ. ಪೂಜಾರಿ ಅವರನ್ನು ಮ್ಯಾನ್ ಆಫ್ ಡಿ ಮ್ಯಾಚ್, ರಜಿಕ್ ಅವರನ್ನು ಬೆಸ್ಟ್ ಬೌಲರ್, ಅಖಿಲ್ ಅವರನ್ನು ಬೆಸ್ಟ್ ಬ್ಯಾಟ್ಸ್‌ಮನ್ ಮತ್ತು ಸುಜಲ್ ಎಸ್. ಶೆಟ್ಟಿ ಅವರನ್ನು ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ನೀಜಿ ಗೌರವಿಸಲಾಯಿತು.ಈ ಪಂದ್ಯಾಟವನ್ನು ಕಾಲೇಜಿನ ವಿದ್ಯಾರ್ಥಿ ಸಂಘದ ಕ್ರೀಡಾ ಕಾರ್ಯದರ್ಶಿ ಅಶೋಕ್ ಪೂಜಾರಿ ಹಾಗೂ ಕಾಲೇಜಿನ ದೈಹಿಕ ನಿರ್ದೇಶ ಡಾ . ನವೀನ್ ಕುಮಾರ್ ಸಂಯೋಜಿಸಿದ್ದರು.ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗಡೆ, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ದೀಪಕ್ ಕುಮಾರ್, ವ್ಯವಸ್ಥಾಪಕ ವಿವೇಕಾನಂದ ಬಸ್ರೂರು, ಕಾಲೇಜಿನ ಉದ್ಯೋಗಾವಕಾಶ ಅಧಿಕಾರಿ ಪ್ರಸಾದ್ ಉಪಸ್ಥಿತರಿದ್ದರು.ಪಂದ್ಯಾಕೂಟದ ನಿರ್ಣಾಯಕರಾಗಿ ವಿಘ್ನೇಶ್ ಕೊಲ್ಕೆರೆ, ಯೋಗೀಶ್ ಗೋಳಿಯಂಗಡಿ ಮತ್ತು ವೀಕ್ಷಕ ವಿವರಣೆಯಲ್ಲಿ ಪ್ರವೀಣ್ ಮಾರ್ಗೋಳಿ ಕಾರ್ಯನಿರ್ವಹಿಸಿದರು. ಈ ಪಂದ್ಯಾಟಕ್ಕೆ ಉದ್ಯಮಿ ಪ್ರವೀಣ್, ಎಂಐಟಿಕೆ ಅಧ್ಯಾಪಕ ಗಗನ್ ಸಹಕರಿಸಿದರು.;Resize=(128,128))
;Resize=(128,128))
;Resize=(128,128))