ಕುಂದಾಪುರ: ಐಎಂಜೆ ಹೆಲ್ತ್‌, ಸೈನ್ಸ್‌ ಬ್ಲಾಕ್‌ ಉದ್ಘಾಟನೆ

| Published : Oct 17 2025, 01:03 AM IST

ಸಾರಾಂಶ

ಮೂಡ್ಲಕಟ್ಟೆಯ ಐಎಂಜೆ ಸಂಸ್ಥೆಯ ನೂತನ ಐಎಂಜೆ ಹೆಲ್ತ್ ಮತ್ತು ಸೈನ್ಸ್ ಬ್ಲಾಕ್‌ನ್ನು ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಪ್ರೊ. ಡಾ. ಯು.ಟಿ. ಇಫ್ತಿಕಾರ್ ಫರೀದ್ ಉದ್ಘಾಟಿಸಿದರು.

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ಸಂಸ್ಥೆಯ ನೂತನ ಐಎಂಜೆ ಹೆಲ್ತ್ ಮತ್ತು ಸೈನ್ಸ್ ಬ್ಲಾಕ್‌ನ್ನು ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಪ್ರೊ. ಡಾ. ಯು.ಟಿ. ಇಫ್ತಿಕಾರ್ ಫರೀದ್ ಉದ್ಘಾಟಿಸಿದರು.

ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಆರೋಗ್ಯ ವೃತ್ತಿಯಲ್ಲಿ ವೃತ್ತಿಪರತೆ, ಮಾನವೀಯತೆ ಮತ್ತು ಬದ್ಧತೆಯ ಮಹತ್ವ ಒತ್ತಿ ಹೇಳಿದರು. ಐಎಂಜೆ ಸಂಸ್ಥೆಗಳ ಶಿಕ್ಷಣದ ಗುಣಮಟ್ಟ ಹಾಗೂ ಆರೋಗ್ಯ ವೃತ್ತಿಪರರನ್ನು ರೂಪಿಸುವತ್ತ ಕೈಗೊಂಡ ಪ್ರಯತ್ನಗಳನ್ನುಶ್ಲಾಘಿಸಿದರು.

ಸಮಾರಂಭದ ಗೌರವ ಅತಿಥಿಗಳಾಗಿ ಸುನ್ನಾರಿ ಎಕ್ಸ್‌ಲೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ, ಮಣಿಪಾಲ ಜ್ಞಾನಸುಧಾ ಪಿಯು ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮೌಲ್ಯ, ಶಿಸ್ತಿನ ಅಗತ್ಯತೆ ಮತ್ತು ಸಮರ್ಪಣೆಯ ಮಹತ್ವದ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಮೂಡ್ಲಕಟ್ಟೆ ಕಾಲೇಜು ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಿಸ್ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್.ಎನ್ ಭಟ್, ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ಜೀನ್ ಡಾ. ಪದ್ಮಚರಣ ಸ್ವೇನ್ ಇದ್ದರು.