ಸಾರಾಂಶ
ಕುಂದಾಪುರ ಎಲ್ಐಸಿ ರಸ್ತೆಯಲ್ಲಿನ ಹಂಚು ಕಾರ್ಮಿಕರ ಭವನದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯ ಕುಂದಾಪುರ ಘಟಕದ ಆಶ್ರಯದಲ್ಲಿ ಸೌಜನ್ಯ ಹತ್ಯೆಯ ನ್ಯಾಯಕ್ಕಾಗಿ ಜನಾಗ್ರಹ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರಸೌಜನ್ಯಳನ್ನು ಅತ್ಯಾಚಾರಗೈದು ಕೊಲೆ ಮಾಡಿದವರು ಯಾರೇ ಇದ್ದರೂ ಅವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆಯಾಗಬೇಕು. ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಹಯವದನ ಮೂಡುಸಗ್ರಿ ಹೇಳಿದರು.ನಗರದ ಎಲ್ಐಸಿ ರಸ್ತೆಯಲ್ಲಿನ ಹಂಚು ಕಾರ್ಮಿಕರ ಭವನದಲ್ಲಿ ಗುರುವಾರ ಸಂಜೆ ಸೌಹಾರ್ದ ಕರ್ನಾಟಕ ಸಂಘಟನೆಯ ಕುಂದಾಪುರ ಘಟಕದ ಆಶ್ರಯದಲ್ಲಿ ಸೌಜನ್ಯ ಹತ್ಯೆಯ ನ್ಯಾಯಕ್ಕಾಗಿ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
ಪತ್ರಕರ್ತ ಶಶಿಧರ ಹೆಮ್ಮಾಡಿ, ದ.ಕ. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾತನಾಡಿದರು.ಕಾರ್ಮಿಕ ಸಂಘಟನೆ ಹಿರಿಯ ಮುಖಂಡ ಮಹಾಬಲ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಪ್ರಮುಖರಾದ ಎಚ್.ನರಸಿಂಹ, ಚಂದ್ರಶೇಖರ ವಡೇರಹೋಬಳಿ, ಎ.ರಾಮಕೃಷ್ಣ ಹೇರ್ಳೆ, ಗಣೇಶ್ ಮೆಂಡನ್, ರವಿ ವಿ.ಎಂ., ರಾಜು ದೇವಾಡಿಗ, ಆಶಾ ಕರ್ವೆಲ್ಲೊ, ಬಲ್ಕಿಸ್, ರಾಜೇಶ್ ವಡೇರಹೋಬಳಿ, ರಮೇಶ್ ವಿ, ತಿಮ್ಮಪ್ಪ ಗುಲ್ವಾಡಿ, ಶಂಕರ ಕೆಂಚನೂರು, ಸದಾನಂದ ಬೈಂದೂರು, ರಾಜು ಬೆಟ್ಟನಮನೆ, ರಾಜಾ ಬಿಟಿಆರ್, ಅಶೋಕ್ ಹಟ್ಟಿಯಂಗಡಿ ಇದ್ದರು. ರಮೇಶ್ ಗುಲ್ವಾಡಿ ನಿರೂಪಿಸಿದರು.