ಕುಂದಾಪುರಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಟಾಪ್ 10 ಸ್ಥಾನದಲ್ಲಿ ಒಟ್ಟು 35 ರ್‍ಯಾಂಕ್ ಗಳನ್ನು ಪಡೆದು ಶೇ. 100 ಫಲಿತಾಂಶ ದಾಖಲಿಸಿದೆ.
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಟಾಪ್ 10 ಸ್ಥಾನದಲ್ಲಿ ಒಟ್ಟು 35 ರ್‍ಯಾಂಕ್ ಗಳನ್ನು ಪಡೆದು ಶೇ. 100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನಾ ಪೈ, ಇಂಚರಾ ಸಿ. ಪೂಜಾರಿ (596 ) 4ನೇ ರ್‍ಯಾಂಕ್, ಅಕ್ಷಯ್ ಅಶ್ವಿನ್ ಪೈ (595) 5ನೇ ರ್‍ಯಾಂಕ್, ಪ್ರವೀಣಾ ಪೈ, ದೀಕ್ಷಾ ವಿ. ಕಾಮತ್, ಶ್ರೀನಿಧಿ (593) 7ನೇ ರ್‍ಯಾಂಕ್, ಕೌಸ್ತುಬಾ, ವಸಂತ್ ಭಟ್, ವರ್ಷ ಕೆ., ಪ್ರತಿಕ್ಷಿತಾ, ರೇಖಾ ಎಲ್., ಕ್ಷಿಪಾಲಿ ( 592) 8ನೇ ರ್‍ಯಾಂಕ್, ವಿಭವ್ ಮೇಲಾಡಿ, ವಿಜೇತಾ ಆರ್. ಭಟ್ (591) 9ನೇ ರ್‍ಯಾಂಕ್, ಧನ್ಯಾ ಜೆ. ಪಟಗಾರ್, ಮೋನಿಶಾ ಪಿ.ವಿ., ರಚನಾ (590) 10ನೇ ರ್‍ಯಾಂಕ್ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಬಿ. ಶ್ರೀಲಕ್ಷ್ಮಿ ವಿ. ಅಡಿಗ, ಸಾನಿಕಾ (596) 5ನೇ ರ್‍ಯಾಂಕ್, ರಾಜೇಂದ್ರ ಭಟ್, ಶ್ರಾವ್ಯ (595) 6ನೇ ರ್‍ಯಾಂಕ್, ಧನ್ಯ ಭಟ್, ಹರ್ಷಿತಾ ಪೂಜಾರಿ, ಕೆ.ಪಿ. ಶಾನ್ವಿ, ಸಮೀಕ್ಷಾ ( 594) 7ನೇ ರ್‍ಯಾಂಕ್, ತನುಶ್ರೀ ರವಿ ಪೂಜಾರಿ, ಮೇನಕಾ, ಮೊಹಮ್ಮದ್ ಹುಝೈಫಾ (593) 8ನೇ ರ್‍ಯಾಂಕ್, ನಿಕಿತಾ, ದಿಶಾ ಎಸ್., ರಾಘವೇಶ್ ಭಟ್ (592) 9ನೇ ರ್‍ಯಾಂಕ್, ಕೀರ್ತನಾ, ಪ್ರಜ್ಞಾ, ಪ್ರತೀಕ್ಷಾ, ಸಮೀಕ್ಷಾ ಪೂಜಾರಿ (591) 10ನೇ ರ್‍ಯಾಂಕ್ ಪಡೆದುಕೊಳ್ಳುಚ ಮೂಲಕ ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ ಹಾಜರಾದ 538 ವಿದ್ಯಾರ್ಥಿಗಳಲ್ಲಿ 457 ವಿದ್ಯಾರ್ಥಿಗಳು ವಿಶಿಷ್ಟ ಹಾಗೂ 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಕೃತ 94, ಗಣಿತ ಶಾಸ್ತ್ರ 49, ಕಂಪ್ಯೂಟರ್ ಸೈನ್ಸ್ 42, ವ್ಯವಹಾರ ಅಧ್ಯಯನ 40, ಲೆಕ್ಕಶಾಸ್ತ್ರ 26, ಭೌತಶಾಸ್ತ್ರ 20, ಅರ್ಥಶಾಸ್ತ್ರ 13, ಕನ್ನಡ 11, ಇಂಗ್ಲೀಷ್ 4, ರಸಾಯನ ಶಾಸ್ತ್ರ 2, ಜೀವಶಾಸ್ತ್ರ 2, ಹಿಂದಿ 1 ವಿದ್ಯಾರ್ಥಿಗಳು 100 ಅಂಕಗಳ ಸಾಧನೆ ಮಾಡಿದ್ದಾರೆ.