ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ಇನ್‌ಸ್ಟಿಟ್ಯೂಶನ್ಸ್‌ನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ನವೋನ್ಮೇಶ- 2025’ನ್ನು ಆಯೋಜಿಸಲಾಗಿತ್ತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ನಟ ದೀಪಕ್ ರೈ ಪಾಣಾಜೆ ಜಂಟಿಯಾಗಿ ಉದ್ಘಾಟಿಸಿದರು.ನಂತರ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ವಿದ್ಯಾರ್ಥಿಗಳು ವಿದ್ಯೆ ಜೊತೆ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಾ ಸಂಸ್ಥೆಯ ಸ್ಥಾಪಕರಾದ ದಿ. ಐ.ಎಂ. ಜಯರಾಮ್ ಶೆಟ್ಟಿ ಹಾಗೂ ಕಾಲೇಜಿನ ಈ ಬೆಳವಣಿಗೆಗೆ ಕಾರಣೀಕರ್ತರಾದ ಸಿದ್ಧಾರ್ಥ್ ಜೆ. ಶೆಟ್ಟಿ ಅವರನ್ನು ಶ್ಲಾಘಿಸಿದರು.
ದೀಪಕ್ ರೈ ಪಾಣಾಜೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಸ್.ಎನ್. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಎಂಜೆಐಎಸ್‌ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಪಾಟೀಲ್, ನವೋನ್ಮೇಶ್ ೨೦೨೫ ಸ್ಪರ್ಧೆಯ ರೂಪುರೇಷೆಗಳನ್ನು ವಿವರಿಸಿದರು.ಎಂಐಟಿಕೆ ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗ್ಡೆ ಸ್ವಾಗತಿಸಿದರು. ಎಂ.ಸಿ.ಎನ್. ಪ್ರಾಂಶುಪಾಲೆ ಪ್ರೊ.ಜೆನಿಫರ್ ಫ್ರೀಡಾ ಮೆನೇಜಸ್ ವಂದಿಸಿದರು. ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಕಾರ್ತಿಕೇಯನ್, ಐಎಂಜೆ ಸಮೂಹ ಸಂಸ್ಥೆಯ ಪರಿಚಯ ನೀಡಿದರು. ಪ್ರೊ. ಸೂಕ್ಷ್ಮ ಅಡಿಗ ಹಾಗೂ ಪ್ರೊ. ಅರ್ಚನ ಉಪಧ್ಯಾಯ ಅತಿಥಿ ಪರಿಚಯ ಮಾಡಿದರು. ಎಂಬಿಎ ವಿದ್ಯಾರ್ಥಿನಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು.ವಿವಿಧ ಪಿಯು ಕಾಲೇಜಿನ 1200ಕ್ಕೂ ಅಧಿಕ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅಲೈಡ್ ಹೆಲ್ತ್ ಸೈನ್ಸ್ ಡೀನ್ ಡಾ.ಪದ್ಮಚರಣ್ ಹಾಗೂ ಅಲೈಡ್ ಸೈನ್ಸ್ ಪ್ರಾಂಶುಪಾಲೆ ಪ್ರೊ.ಹೇಮಲತಾ. ಎಲ್ಲ ಕಾಲೇಜಿನ ವಿದ್ಯಾರ್ಥಿ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))