ಕುಂದಾಪುರ: ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

| Published : Oct 31 2025, 03:00 AM IST

ಕುಂದಾಪುರ: ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರದ ತಾಲೂಕು ಪಂಚಾಯತ್‌ನಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಸಮಸ್ಯೆಗಳ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರಹೇರಿಕುದ್ರು ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ನೀಡುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಸಭೆಗಳಲ್ಲಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಭೆಯಲ್ಲಿ ಸಮಸ್ಯೆ ಹೇಳಿದರೆ ಅಧಿಕಾರಿಗಳು ಅದನ್ನು ಇತ್ಯರ್ಥಗೊಳಿಸುವ ಗೋಜಿಗೆ ಹೋಗುವುದಿಲ್ಲ. ಇದು ಹೀಗೆಯೇ ಮುಂದುವರಿದರೆ ನಾನು ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸದಸ್ಯ ಅಭಿಜಿತ್ ಪೂಜಾರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುಂದಾಪುರದ ತಾಲೂಕು ಪಂಚಾಯತ್‌ನಲ್ಲಿ ಗುರುವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಗೃಹಲಕ್ಷ್ಮೀ ಸಹಕಾರಿ ಸಂಘಕ್ಕೆ ಆಯ್ಕೆ:

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೂನ್‌ನಲ್ಲಿ ಸ್ವಲ್ಪ ಅನುದಾನ ಬಾಕಿಯಿದ್ದು, ಜುಲೈನಲ್ಲಿ ಶೇ.೫೦ರಷ್ಟು ಫಲಾನುಭವಿಗಳಿಗೆ ಅನುದಾನ ಪಾವತಿಯಾಗಿಲ್ಲ. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಸಹಕಾರಿ ಸಂಘ ರಚನೆಗೆ ಜಿಲ್ಲೆಯಿಂದ ೬೫ ಮಂದಿ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕುಂದಾಪುರದಿಂದ ೧೦ ಮತ್ತು ಬೈಂದೂರಿನಿಂದ ೯ ಮಂದಿ ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅಧ್ಯಕ್ಷತೆ ವಹಿಸಿ, ಕುಂದಾಪುರ ತಾಲೂಕಿಗೆ ವಿವಿಧ ಗ್ಯಾರಂಟಿ ಯೋಜನೆಗಳಲ್ಲಿ ಸೆಪ್ಟೆಂಬರ್‌ನಲ್ಲಿ ಒಟ್ಟು ೧೧,೧೦,೨೦,೧೧೨ ರು. ಬಂದಿದ್ದು, ಗೃಹಲಕ್ಷ್ಮೀ ಯೋಜನೆಯಲ್ಲಿ ೮೬,೭೦,೦೦೦ ರು., ಯುವನಿಧಿಯಲ್ಲಿ ೫೩,೦೭,೦೦೦ ರು., ಗೃಹಜ್ಯೋತಿಯಲ್ಲಿ ೪,೩೨,೦೫,೨೭೩ ರು., ಶಕ್ತಿ ಯೋಜನೆಯಲ್ಲಿ ೨,೭೯,೬೨,೮೩೯ ರು., ಅನ್ನಭಾಗ್ಯದಲ್ಲಿ ೨,೫೮,೭೫,೦೦೦ ರು. ಬಂದಿದೆ. ಈವರೆಗೆ ಒಟ್ಟು ೪೨೦,೪೪,೦೨,೦೭೨ ರು. ಬಂದಿದೆ ಎಂದರು.ಸದಸ್ಯರಾದ ನಾರಾಯಣ ಆಚಾರ್ ಕೋಣಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲೋ, ಗಣೇಶ ಕುಂಭಾಶಿ, ಚಂದ್ರ ಕಾಂಚನ್ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಇಒ ಮಹೇಶ್ ಉಪಸ್ಥಿತರಿದ್ದರು.