ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಹಾಗೂ ನನ್ನ ತಂದೆ ದಿ. ಡಾ. ದೊಡ್ಡಯ್ಯ ಸ್ಮರಣಾರ್ಥ ತಾಲೂಕಿನ ವಿವಿಧೆಡೆ ಗ್ರಾಮೀಣ ಪ್ರದೇಶ ವಾಸಿಗಳಲ್ಲಿರುವ ಪ್ರತಿಭೆ ಗುರುತಿಸಲು ಇದೊಂದು ಉತ್ತಮ ವೇದಿಕೆಯಾಗಲಿದ್ದು, ಕುಣಿಗಲ್ ನಲ್ಲಿ ಈ ಕಾರ್ಯಕ್ರಮವನ್ನು ೧೫ ದಿನಗಳ ಕಾಲ ನಡೆಸಲಾಗುತ್ತಿದೆ. ತಾಲೂಕಿನ ವಿವಿಧ ಭಾಗಗಳ ಯುವಜನರು ಭಾಗವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಕುಣಿಗಲ್
ಕುಣಿಗಲ್ ಉತ್ಸವದ ಹಿನ್ನೆಲೆ ಜ.9ರಿಂದ ಪಟ್ಟಣದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ದೇವರ ಮೆರವಣಿಗೆ, ಕಲ್ಯಾಣೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಜಿ.ಕೆ ಬಿ.ಎಮ್.ಎಸ್ ಮೈದಾನದಲ್ಲಿ ಬೃಹದಾಕಾರದ ವೇದಿಕೆ ಹಾಕಲಾಗಿದೆ ಎಂದು ಶಾಸಕ ಡಾ. ರಂಗನಾಥ್ ತಿಳಿಸಿದ್ದಾರೆ.ಪಟ್ಟಣದ ಮಾಜಿ ಸಂಸದರ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಹಾಗೂ ನನ್ನ ತಂದೆ ದಿ. ಡಾ. ದೊಡ್ಡಯ್ಯ ಸ್ಮರಣಾರ್ಥ ತಾಲೂಕಿನ ವಿವಿಧೆಡೆ ಗ್ರಾಮೀಣ ಪ್ರದೇಶ ವಾಸಿಗಳಲ್ಲಿರುವ ಪ್ರತಿಭೆ ಗುರುತಿಸಲು ಇದೊಂದು ಉತ್ತಮ ವೇದಿಕೆಯಾಗಲಿದ್ದು, ಕುಣಿಗಲ್ ನಲ್ಲಿ ಈ ಕಾರ್ಯಕ್ರಮವನ್ನು ೧೫ ದಿನಗಳ ಕಾಲ ನಡೆಸಲಾಗುತ್ತಿದೆ. ತಾಲೂಕಿನ ವಿವಿಧ ಭಾಗಗಳ ಯುವಜನರು ಭಾಗವಹಿಸಲಿದ್ದಾರೆ ಎಂದರು.
ಜನವರಿ ೯ರ ಶುಕ್ರವಾರ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧:೦೦ ವರೆಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ತಾಲೂಕಿನ ೨೦೦ ದೇವತೆಗಳ ಮೂರ್ತಿ ಉತ್ಸವ ನಡೆಯಲಿದೆ. ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ವಾಯ್ಸ್ ಆಫ್ ಕುಣಿಗಲ್, ಭಾರತೀಯ ಸಾಂಪ್ರದಾಯಿಕ ಉಡುಗೆ, ಆದರ್ಶ ದಂಪತಿ, ಕೇಶ ವಿನ್ಯಾಸ ಸ್ಪರ್ಧೆ, ವೇಷಭೂಷಣ ಸ್ಪರ್ಧೆ , ರಂಗಗೀತೆ, ೧೭ ವರ್ಷ ಮೇಲ್ಪಟ್ಟ ಬಾಲಕ ಬಾಲಕಿಯರ ಕಬಡ್ಡಿ, ಖೋಖೋ,ಥ್ರೋಬಾಲ್, ವಾಲಿಬಾಲ್ ಕೂಟ ಹಮ್ಮಿಕೊಳ್ಳಲಾಗಿದೆ ಎಂದರು.ಜನವರಿ ೧೦ರ ಶನಿವಾರ ಸಂಜೆ 4 ರಿಂದ ಕಲ್ಯಾಣೋತ್ಸವ ನಡೆಯಲಿದ್ದು, ೭೦ ಸಾವಿರ ಕುಟುಂಬಗಳಿಗೆ ತಿರುಪತಿ ಲಡ್ಡು ವಿತರಣೆ ಮಾಡಲಾಗುವುದು. ಭಕ್ತರು ದೇವರ ದರ್ಶನ ಪಡೆಯಬೇಕೆಂದು ಮನವಿ ಮಾಡಿದರು. ನಂತರ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜನವರಿ 11ರಂದು ಬೆಳಗ್ಗೆ 7ರಿಂದ ಪಟ್ಟಣದ ಆರ್ ಎಂ ಸಿ ಯಿಂದ ಜಿಕೆ ಬಿಎಮ್ಎಸ್ ಶಾಲಾ ಮೈದಾನದವರೆಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಬೆಳಗ್ಗೆ 11 ಗಂಟೆಯಿಂದ ರಂಗಗೀತೆ, ದೇಹದಾರ್ಢ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜನವರಿ ೧೧ರ ಸಂಜೆ ನವೀನ್ ಸಜ್ಜು ಮತ್ತು ಚಂದನ್ ಶೆಟ್ಟಿಯವರ ಸಂಗೀತ ಸಂಜೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್, ಚಲನಚಿತ್ರ ನಟ ಸುದೀಪ್, ಸಾಧುಕೋಕಿಲ, ಮಾಲಾಶ್ರೀ, ಅನು ಪ್ರಭಾಕರ್, ಡಾಲಿ ಧನಂಜಯ , ಝಾಯಿದ್ ಖಾನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.