ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ಕುಣಿಗಲ್ ಸ್ಟಡ್ ಫಾರಂ ಜಾಗದಲ್ಲಿ ಕಾಂಗ್ರೆಸ್ ಸರ್ಕಾರ ಇಂಟರ್ ಗ್ರೇಟೆಡ್ ಟೌನ್‌ಶಿಪ್ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಲವಾರು ಸಂಘಟನೆಗಳು ಕಾರ್ಯಕರ್ತರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.ಆದಿ ಗಂಗರ ಕಾಲದಿಂದ ಕುದುರೆ ಸಾಕಾಣಿಕೆ ಮಾಡುತ್ತಿದ್ದ ಸ್ಟಡ್ ಫಾರಂ ಜಾಗದಲ್ಲಿ ನಂತರದ ದಿನಗಳಲ್ಲಿ ಮೈಸೂರು ರಾಜರು ಟಿಪ್ಪು ಸುಲ್ತಾನ್ ಹಾಗೂ ಬ್ರಿಟಿಷರು ತಮಗೆ ಬೇಕಾದ ಸೈನಿಕ ಕುದುರೆಗಳನ್ನು ಮತ್ತು ರಕ್ಷಣಾ ಸಿಬ್ಬಂದಿಯ ಕುದುರೆಗಳನ್ನು ಸಾಕುತ್ತಿದ್ದರು. ನಂತರದ ದಿನಗಳಲ್ಲಿ ಈ ಭೂಮಿಯನ್ನು ಪಶು ವೈದ್ಯ ಇಲಾಖೆಗೆ ಸ್ಥಳಾಂತರಿಸಲಾಗಿದ್ದು ಮಲ್ಯ ಒಡೆತನದ ಕಂಪನಿ ಬೀಜದ ಕುದುರೆಗಳನ್ನು ಉತ್ಪಾದನೆ ಮಾಡಲು ಟೆಂಡರ್ ಪಡೆದಿತ್ತು. 30 ವರ್ಷದ ನಂತರ ಟೆಂಡರ್ ಮುಗಿದ ನಂತರ ಮತ್ತೊಂದು ಟೆಂಡರ್ ಕರೆಯಲಾಗಿತ್ತು. ಈ ಜಾಗತಿಕ ಟೆಂಡರ್ ನಲ್ಲಿ ಭಾಗವಹಿಸಿದ ಪೂನಾವಾಲಾ ಕಂಪನಿಗೆ ಟೆಂಡರ್ ನೀಡುವ ಬದಲು ಈ ಸ್ಥಳಕ್ಕೆ ಬೆಂಗಳೂರಿನಲ್ಲಿರುವ ಟರ್ಕಿ ಕ್ಲಬ್ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಜಾಗದ ವ್ಯಕ್ತಿಯಾಗುತ್ತದೆ ಎಂದು ಸರ್ಕಾರ ಟೆಂಡರ್ ವಜಾ ಮಾಡಿದೆ.
ನಂತರ ದಿನಗಳಲ್ಲಿ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಸೇರಿದಂತೆ ಕೆಲವು ಸಚಿವರು ಈ ಸ್ಥಳದಲ್ಲಿ ಇಂಟರ್ಗ್ರೇಟೆಡ್ ಟೌನ್ಶಿಪ್ ಮಾಡಲು ಮುಂದಾಗಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ಸ್ಥಳೀಯ ಹಲವಾರು ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳು ಆಕ್ರೋಶಗೊಂಡು ಕುಣಿಗಲ್ ಪಟ್ಟಣದಲ್ಲಿ ಇಂದು ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆಗೊಳ್ಳಲಿರುವ ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು ಹೋರಾಟಗಾರರು ಸಾಹಿತಿಗಳು ಮತ್ತು ಚಿತ್ರನಟರು ಪಟ್ಟಣದ ಮುಖ್ಯಬೀದಿ ಸ್ಟಡ್ ಫಾರಂ ಕೆಎಸ್ಆರ್‌ಟಿಸಿ ವೃತ್ತ ಮುಖಾಂತರ ಗ್ರಾಮದೇವತೆ ವೃತ ಹುಚ್ಚ ಮಾಸ್ತಿ ಗೌಡ ವೃತದ ಮುಖಾಂತರ ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲು ತಯಾರಿ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಕನ್ನಡಪರ ಹುಟ್ಟು ಹೋರಾಟಗಾರರಾದ ವಾಟಳ್ ನಾಗರಾಜ್, ನಟ ಚೇತನ್, ಸೇರಿದಂತೆ ಹಲವಾರು ಮಠಾಧೀಶರು ಸಾಹಿತಿಗಳು, ಪರಿಸರವಾದಿಗಳು, ಇತಿಹಾಸ ತಜ್ಞರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ,ಕುಣಿಗಲ್ ಪಟ್ಟಣದ ವಕೀಲರ ಸಂಘ, ಒಕ್ಕಲಿಗರ ಸಂಘ, ಸವಿತಾ ಸಮಾಜ, ಸೇರಿದಂತೆ ಹಲವಾರು ಕೋಮು ಸಮುದಾಯಗಳು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ ಜಿ.ಕೆ. ನಾಗಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಮೇಲೆ ಅಭಿಮಾನ ತೋರುವುದು ಕೇವಲ ಮತ ಪಡೆಯಲು ಆದರೆ ಟಿಪ್ಪು ಸ್ಥಾಪಿತ ಫಾರಂ ಅನ್ನು ಬಲಿ ಕೊಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಡಿ. ಕೃಷ್ಣಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜೇಶ್ ಗೌಡ, ಜೆಡಿಎಸ್ ಮುಖಂಡ ಜಗದೀಶ್ ಡಿ. ನಾಗರಾಜಯ್ಯ, ಮುಖ್ಯಮಂತ್ರಿ ಚಂದ್ರು, ಆಪ್ ಪಕ್ಷದ ಮುಖಂಡ ಜಯರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಭಾಗವಹಿಸುವರು.
ಬಾಕ್ಸ್..........
ಪೂರ್ವಭಾವಿ ಮೆರವಣಿಗೆಕುಣಿಗಲ್ ಕುದುರೆ ಫಾರಂ ಉಡುವಿಗಾಗಿ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ಸದಸ್ಯರು ಸೇರಿದಂತೆ ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು ಕುಣಿಗಲ್ ಪಟ್ಟಣದ ಮುಖ್ಯಬೀದಿಗಳಲ್ಲಿ ಮಂಗಳವಾರ ಸಂಜೆ ಮೆರವಣಿಗೆ ಜಾಥಾ ನಡೆಸಿದರು.
ವಕೀಲರ ಸಂಘದ ಕಲಾಪ ಬಹಿಷ್ಕಾರಕುಣಿಗಲ್ ಪಟ್ಟಣದ ವಕೀಲರ ಸಂಘದಲ್ಲಿ ಸಭೆ ನಡೆಸಿ ಕುಣಿಗಲ್ ಸ್ಟಡ್ ಫಾರಂ ಉಳಿವಿಗಾಗಿ ನಮ್ಮ ಬೆಂಬಲವಿದೆ ಅದಕ್ಕಾಗಿ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಾರ್ಯಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ,