ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ತಾ. ಸೇರ್ಪಡೆ ಒತ್ತಾಯ

| Published : Aug 09 2025, 02:03 AM IST

ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ತಾ. ಸೇರ್ಪಡೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ತುಮಕೂರು ಜಿಲ್ಲೆ ವಿಂಗಡಣೆ ಮಾಡುವ ಸಂದರ್ಭ ಬಂದರೆ ನಮ್ಮ ತಾಲೂಕಿನ ಜನರ ಹಿತದೃಷ್ಟಿಯಿಂದ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ದಕ್ಷಿಣಕ್ಕೆ ಕುಣಿಗಲ್ ತಾಲೂಕನ್ನು ಸೇರಿಸಲು ಪರಿಗಣಿಸಬೇಕು

ಕನ್ನಡಪ್ರಭ ವಾರ್ತೆ, ಪೀಣ್ಯದಾಸರಹಳ್ಳಿ‌:

ಕುಣಿಗಲ್ ತಾಲೂಕು ವ್ಯಾವಹಾರಿಕ, ಔದ್ಯೋಗಿಕ, ಶೈಕ್ಷಣಿಕ , ಸಾಮಾಜಿಕ, ಸಾಂಸ್ಕೃತಿಕ ಸಂಬಂಧಗಳು ಬೆಂಗಳೂರಿನೊಂದಿಗೆ ಬೆಸೆದುಕೊಂಡಿರುವುದರಿಂದ ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆ ಮಾಡಬೇಕಾಗಿದೆ ಎಂದು ಕುಣಿಗಲ್ ತಾಲೂಕು ಸಮಾನ ಮನಸ್ಕರ ಸಮಾಲೋಚನಾ ಸಭೆಯಲ್ಲಿ ಸಂಚಾಲಕ ಕೆ.ಜಿ. ಕುಮಾರ್ ಒತ್ತಾಯಿಸಿದರು.ಕುಣಿಗಲ್ ತಾಲೂಕು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆ ಮಾಡುವ ಕುರಿತು ಹೆಗ್ಗನಹಳ್ಳಿ ಸಮೀಪದ ಕೆಂಪೇಗೌಡ ನಗರದ ಎಂ. ಪ್ರಕಾಶಮೂರ್ತಿಯವರ ನಿವಾಸದಲ್ಲಿ ನಡೆದ ಸಾಧಕ ಬಾಧಕ ಚರ್ಚೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ತುಮಕೂರು ಜಿಲ್ಲೆ ವಿಂಗಡಣೆ ಮಾಡುವ ಸಂದರ್ಭ ಬಂದರೆ ನಮ್ಮ ತಾಲೂಕಿನ ಜನರ ಹಿತದೃಷ್ಟಿಯಿಂದ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಬೆಂಗಳೂರು ದಕ್ಷಿಣಕ್ಕೆ ಕುಣಿಗಲ್ ತಾಲೂಕನ್ನು ಸೇರಿಸಲು ಪರಿಗಣಿಸಬೇಕು ಎಂದರು.

ಸಮಾಲೋಚನಾ ಸಭೆಯಲ್ಲಿ ಮುಖಂಡ ಆಡಿಟರ್ ನಾಗರಾಜ್, ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ಡಾ.ಅಪ್ಪಾಜಿಗೌಡ, ಅನುಸೂಯಮ್ಮ ಕಳಸೇಗೌಡ, ಅನಂತರಾಮು, ಜನಪದ ಗಾಯಕ ಕುಣಿಗಲ್ ರಾಮಚಂದ್ರ, ಡಾ.ರಂಗರೇವಯ್ಯ, ಹುತ್ರಿದುರ್ಗ ರಂಗಸ್ವಾಮಿ, ಹೆಚ್.ವಿ. ರಾಜಗೋಪಾಲ್, ಗೋವಿಂದರಾಜು ಪಟೇಲ್, ಕೆ. ಕೃಷ್ಣಪ್ಪ, ನರಸಿಗೌಡ, ಹುತ್ರಿದುರ್ಗ ಬೆಟ್ಟೇಗೌಡ, ದೊಡ್ಡ ಶಾನೇಗೌಡ, ಪತ್ರಕರ್ತ ಲೋಕೇಶ್, ನಾಗರಾಜು, ಶಿವರಾಮ್ ಜಿ.ಎಸ್, ನಂಜುಂಡೇಗೌಡ ಕೆ. ಸೇರಿ ತಾಲೂಕಿನ ಅನೇಕ ಬೆಂಗಳೂರು ನಿವಾಸಿಗಳು ಭಾಗವಹಿಸಿದ್ದರು.