ಕುಪ್ಪಳ್ಳಿ ಪರಿಸರ ರಾಷ್ಟ್ರಕವಿ ಕುವೆಂಪು ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಲೋಹಿತ್ ಕುಮಾರ್

| Published : Aug 10 2025, 01:30 AM IST

ಕುಪ್ಪಳ್ಳಿ ಪರಿಸರ ರಾಷ್ಟ್ರಕವಿ ಕುವೆಂಪು ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಲೋಹಿತ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಕುಪ್ಪಳ್ಳಿ ಪರಿಸರ ರಾಷ್ಟ್ರಕವಿ ಕುವೆಂಪುರವರ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಎಂದು ಮುದುಗೆರೆ ಶಿಕ್ಷಕ ಲೋಹಿತ್ ಕುಮಾರ್ಹೇಳಿದ್ದಾರೆ.

ತರೀಕೆರೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕುಪ್ಪಳ್ಳಿ ಪರಿಸರ ರಾಷ್ಟ್ರಕವಿ ಕುವೆಂಪುರವರ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಎಂದು ಮುದುಗೆರೆ ಶಿಕ್ಷಕ ಲೋಹಿತ್ ಕುಮಾರ್

ಹೇಳಿದ್ದಾರೆ.ತರೀಕೆರೆ ತಾಲೂಕು ಕನ್ನಡ ಸಾಹಿತ್ಯಪರಿಷತ್‌ ನಿಂದ ತರೀಕೆರೆ ಪಟ್ಟಣ ಕನಕ ನೌಕರರ ಸಂಘ ಅಧ್ಯಕ್ಷ ಸಿ.ಎಸ್. ಬಸವರಾಜು ಮತ್ತು ಉಮಾ ಅವರ ಮನೆಯಂಗಳದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ-2025 ಕಾರ್ಯಕ್ರಮದಲ್ಲಿ ಕುಪ್ಪಳ್ಳಿ ಕವಿಶೈಲ ಪರಿಸರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ರಾಷ್ಟ್ರಕವಿ ಕುವೆಂಪುರವರು ಕನ್ನಡದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಶೇ.50 ರಷ್ಟು ವಂಶವಾಹಿ ಶೇ. 50 ರಷ್ಟು ಪರಿಸರ ವ್ಯಕ್ತಿತ್ವಕ್ಕೆ ಕಾರಣ. ಕೊಪ್ಪ ತಾಲೂಕು ಹೀರೆಕೊಡುಗೆಯಲ್ಲಿ ಅವರು ಜನಿಸಿದರು. ಊರಿನ ಸುತ್ತಲಿನ ಪರಿಸರ ಕುರಿತು ಕವನ ರಚಿಸಿದರು. ಅವರ ಮನಸ್ಸು ಪ್ರಕೃತಿಯೊಂದಿಗೆ ಬೆರೆಯಲು ತುಡಿಯುತ್ತಿತ್ತು, ಮಲೆಗಳಲ್ಲಿ ಮದು ಮಗಳು, ಕೃತಿಗಳು ಅವರ ರಚನಾ ಶೈಲಿಗೆ ದ್ಯೋತಕ. ಕವಿಶೈಲ ಹೆಸರು ಬರಲು ಕುವೆಂಪು ಕಾರಣವಾಗಿದ್ದಾರೆ ಎಂದು ಹೇಳಿದರು. ಪ್ರೌಢಾವಸ್ಥೆಯಲ್ಲೆ ಕವಿತ್ವವನ್ನು ಗುರುತಿಸಿಕೊಂಡವರು, ಟಿ. ಎಸ್. ವೆಂಕಣ್ಣಯ್ಯ ಅವರ ಗುರುಗಳು. ಕವಿಶೈಲದ ಸ್ಥಳ ಎಂತವರನ್ನೂ ಕವಿತ್ವದೆಡೆಗೆ ಪ್ರೇರೇಪಿಸುತ್ತದೆ. ಕುಪ್ಪಳ್ಳಿಯಂತಹ ಪರಿಸರ ಸಹ ಮಂತ್ರಮುಗ್ಧರನ್ನಾಗಿಸುತ್ತದೆ. ಮಕ್ಕಳಿಗೆ ಮಂತ್ರಮಾಂಗಲ್ಯ ನೇರವೇರಿಸಿ ಪ್ರೋತ್ಸಾಹಿಸಿದ ಕುವೆಂಪುಗೆ ಕನ್ನಡ ಮೇಲಿನ ಕಾಳಜಿ, ಪ್ರೀತಿ ತೋರಿಸುತ್ತದೆ.ತರೀಕೆರೆ ಕನಕ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಬಸವರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಕನ್ನಡ ನಮ್ಮ ಹೃದಯದ ಭಾಷೆ, ನಾಡು, ನುಡಿ, ಸಂಸ್ಕೃತಿ, ನೆಲ, ಜಲ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರಾವಣ ಮಾಸದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯುತ್ತಿದೆ. ಇಂತಹ ಒಂದು ಕಾರ್ಯಕ್ರಮ ನಮ್ಮ ಮನೆಯಂಗಳದಲ್ಲಿ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಶಾಲೆ, ಕಾಲೇಜು, ಮನೆಯಂಗಳದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಮತ್ತು ಭಾಷೆ ಅಭಿಮಾನ ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ದತ್ತಿ ಉಪನ್ಯಾಸ, ವಿಚಾರ ಸಂಕಿರಣ, ಶ್ರಾವಣ ಸಾಹಿತ್ಯ ಸಂಭ್ರಮ ಇಂತಥ ಹಲವು ಸಾಹಿತ್ಯಕ ವಿಷಯಗಳನ್ನು ಕುರಿತು ತಜ್ಞರನ್ನು ಆಹ್ವಾನಿಸಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶ್ರಾವಣ ಮಾಸದ ಪ್ರತಿನಿತ್ಯ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಹಬ್ಬದೋಪಾದಿಯಲ್ಲಿ ನಡೆಯುತ್ತಿದೆ. ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಸರ್ಕಾರಿ ನೌಕರರ ಸಂಘ ಮಾಜಿ ಅಧ್ಯಕ್ಷ ಮುರುಗೇಶಪ್ಪ ಮಾತನಾಡಿ, ಕನ್ನಡದ ಸಮೃದ್ಧತೆ ಶ್ರೀಮಂತಿಕೆ ಜಗತ್ತಿ ನಲ್ಲಿಯೇ ಶ್ರೇಷ್ಠವಾದದ್ದು, ನಮ್ಮ ಕನ್ನಡ, ಹಳೆಗನ್ನಡ, ಗನ್ನಡ, ಹೊಸಗನ್ನಡದಲ್ಲಿ ಸಮೃದ್ಧವಾಗಿ ಬೆಳೆದಿದೆ. ಪುಸ್ತಕಗಳನ್ನು ಓದಿದರೆ ಜ್ಞಾಪಕದಲ್ಲಿ ಉಳಿಯುತ್ತದೆ ಎಂದು ಹೇಳಿದರು.ನಗರ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಅಧ್ಯಕ್ಷ ಟಿ.ಸಿ.ದರ್ಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಟಿ. ಎನ್. ಜಗದೀಶ್, ಸುನೀತಾ ಕಿರಣ್, ಧರಣೇಶ್, ಅಡಿಟರ್ ಟಿ. ಸಿ. ಜಗದೀಶ್ , ಬಿ. ಎನ್. ನಾಗರಾಜು, ಎಸ್.ಟಿ.ತಿಪ್ಪೇಶಪ್ಪ, ಮಂಜುನಾಥ್ ಡಿ.ಟಿ.ಎಸ್.ನಾಗರಾಜು, .ಶೃತಿ, ಕುಡ್ಲೂರು ಚೇತನ್, ಕುಡ್ಲೂರು ರುದ್ರಯ್ಯ, ಖಜಾನೆ ರಾಘವೇಂದ್ರ, ಉಮಾ, ಭಾಗ್ಯ, ಶೋಭಾ, ನವೀನ್, ಟಿ. ಆರ್. ಉಮೇಶ್, ಭಾಗ್ಯ, ಚಂದನ್ ಎಸ್. ಟಿ. ರಶ್ಮಿಕಾ ಬಸವರಾಜು, ಜೀವನ್ ಬಸವರಾಜು ಇತರರು ಭಾಗವಹಿಸಿದ್ದರು.

-------------------ಫೋಟೋ ಇದೆಃ)9ಕೆಟಿಆರ್.ಕೆ.05ಃ ತರೀಕೆರೆಯಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷರು ರವಿ ದಳವಾಯಿ,.ಕನಕ ನೌಕರರ ಸಂಘ ಅಧ್ಯಕ್ಷರು ಸಿ.ಎಸ್.ಬಸವರಾಜು ಮುದುಗೆರೆ ಶಿಕ್ಷಕರಾದ ಲೋಹಿತ್ ಕುಮಾರ್,, ನಗರ ಘಟಕ ಕಸಾಪ ಅಧ್ಯಕ್ಷರು ಟಿ.ಸಿ.ದರ್ಶನ್ ಮತ್ತಿತರರು ಇದ್ದಾರೆ. -----------------------