ಮಂಡ್ಯ ನಗರದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭಾ ಕಾರ್ಯಯಕ್ರಮವನ್ನು ಕೆಎಎಸ್ ಅಧಿಕಾರಿ ಯೋಗಾನಂದ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ತಿಮ್ಮದಾಸ್ ಗ್ರೂಪ್ ಮಾಲೀಕರಾದ ಸಿ.ಟಿ.ಶಂಕರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾರಾಜ ಕಲಾ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ 23ರಂದು ಕುರುಕ್ಷೇತ್ರ ನಾಟಕ ಪ್ರದರ್ಶನ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೆಎಚ್‌ಬಿ ಮಹಾರಾಜನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹರೀಶ್ ಬಾಣಸವಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭಾ ಕಾರ್ಯಯಕ್ರಮವನ್ನು ಕೆಎಎಸ್ ಅಧಿಕಾರಿ ಯೋಗಾನಂದ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ತಿಮ್ಮದಾಸ್ ಗ್ರೂಪ್ ಮಾಲೀಕರಾದ ಸಿ.ಟಿ.ಶಂಕರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದರು.

ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಅವರಿಗೆ ರೈತ ಮಿತ್ರ, ಮಮತ ನಸಿಂಗ್ ಹೋಂ ಮಾಲೀಕ ಡಾ.ಎಚ್.ಸಿ.ಆನಂದ್ ಅವರಿಗೆ ವೈದ್ಯ ರತ್ನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡರಿಗೆ ಪುಸ್ತಕ ರತ್ನ ಹಾಗೂ ಜನಪದ ಗಾಯಕ ಮತ್ತು ಕೀರ್ತನಕಾರ ಶಿವಾರ ಉಮೇಶ್ ಅವರಿಗೆ ಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಇದೇ ವೇಳೆ ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕ.ರಾ.ಸ.ನೌ.ಸಂಘದ ಉಪಾಧ್ಯಕ್ಷ ಶಂಭುಗೌಡ, ಕೆಎಸ್‌ಒಯು ಸಹಾಯಕ ಕುಲಸಚಿವ ಸಿ.ಕೆ.ಪುಟ್ಟಸ್ವಾಮಿ, ಖಾದಿ ಗ್ರಾಮೋದ್ಯೋಗಿ ಮಂಡಳಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸುಧಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ. ನಂದೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮನುಜಶ್ರೀ, ಸಾಯಿ ಎಲೆಕ್ಟ್ರಾನಿಕ್ ಮಾಲೀಕ ಡಿ.ಪಿ.ಸ್ವಾಮಿ, ಬಿಜೆಪಿ ಮುಖಂಡ ವಸಂತ್ ಕುಮಾರ್, ರಂಗಭೂಮಿ ನಿರ್ದೇಶಕ ಅಂಕರಾಜು ಅವರು ಅಭಿನಂದಿತರನ್ನು ಅಭಿನಂದಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಅಭಿನಂದನಾ ನುಡಿಗಳಾಡುವರು. ಜಿಪಂ ಮಾಜಿ ಸದಸ್ಯ ಎನ್.ಶಿವಣ್ಣ ಚಂದಗಾಲು ಅಭಿನಂದಿತರನ್ನು ಕುರಿತು ಮಾತನಾಡುವರು ಎಂದು ವಿವರಿಸಿದರು.

ಅತಿಥಿಗಳಾಗಿ ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಮನ್‌ಮುಲ್ ಅಧ್ಯಕ್ಷ ಶಿವಪ್ಪ ಉಮ್ಮಡಹಳ್ಳಿ, ನಿರ್ದೇಶಕ ಬಿ.ಆರ್.ರಾಮಚಂದ್ರು, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಸ್.ಮಂಜುನಾಥ್, ನಾಗೇಶ್ ಭಾಗವಹಿಸುವರು ಎಂಸಿರು.

ನಾಟಕ ಪ್ರದರ್ಶನ ಸಂಬಂಧ ಮೇ 21 ರಂದು ಸಾತನೂರು, ಕಾರಸವಾಡಿ, ಕೆರಗೋಡು, ಹೊಡಾಘಟ್ಟ, ಕೀಲಾರ ಹಾಗೂ ಹೊಸಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಪ್ರಚಾರ ಹಮ್ಮಿಕೊಳ್ಳಲಾಗಿದೆ. ಕಲಾ ಪ್ರೋತ್ಸಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ಪ್ರದರ್ಶನ ವೀಕ್ಷಿಸಿ ನಾಟಕ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್‍ಯದರ್ಶಿ ಅಶೋಕ್, ಖಜಾಂಚಿ ಜಿ.ಪಿ.ಶಶಿಧರ್, ಪದಾಧಿಕಾರಿಗಳಾದ ಮಹಾದೇವಸ್ವಾಮಿ ಹಾಗೂ ಕೃಷ್ಣೇಗೌಡ ಹಾಜರಿದ್ದರು.

ಮೇ 22 ರಿಂದ ವಿನೂತನ ನಾಟಕೋತ್ಸವ: ಚ.ನಾರಾಯಣಸ್ವಾಮಿ

ಶ್ರೀರಂಗಪಟ್ಟಣ:ಸ್ಥಳೀಯ ಪ್ರತಿಭೆಗಳ ಬೆಳೆಸಿ ರಂಗ ಸಂಸ್ಕೃತಿ ಉಳಿಸುವ ಸದುದ್ದೇಶದಿಂದ ಮೇ 22ರಿಂದ ವಿನೂತನ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಮ್ಯ ಸಂಸ್ಥೆ ಸಂಸ್ಥಾಪಕ ಚ.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಂಗಭೂಮಿ ಕೇವಲ ಮನರಂಜನೆ ಮಾಧ್ಯಮವಲ್ಲ. ಅದು ಸಮಾಜದ ಕನ್ನಡಿಯಾಗಿದೆ. ಸಮಾಜಮುಖಿಯಾಗಿ ನಾವುಗಳು ಬದುಕಬೇಕಾದರೆ ಪ್ರಜ್ಞಾವಂತಿಕೆ ಅಗತ್ಯ ಎಂದರು.ಜೀವನಕ್ಕೆ ಉತ್ತಮ ಸಂದೇಶ ನೀಡುವ ನಮ್ಮ ಗಮ್ಯ ರಂಗಭೂಮಿ ಕಲಾಯಜ್ಞವನ್ನು ಕಳೆದ 8 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರದರ್ಶಿಸುತ್ತಾ ಬಂದಿದ್ದೇವೆ. ನಾಟಕ ನೋಡಲು ಉಚಿತ ಪ್ರವೇಶವಿದ್ದು, ಮೇ 22ರ ಶುಕ್ರವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರದರ್ಶನವಿದೆ ಎಂದರು.

ಮೇ 22ಕ್ಕೆ ‘ಪಿಪ್ಪಿಗೊಂದು ಪಪ್ಪಿ’ ಮಕ್ಕಳ ನಾಟಕ, ಮೇ 23ಕ್ಕೆ ರಾಜಶೇಖರ್ ಕೆ.ಶೆಟ್ಟಹಳ್ಳಿ ವಿರಚಿತ ‘ನಾವೆಲ್ಲರೂ ಕೂಡಿಬಾಳೋಣ’ ಹಾಸ್ಯ ನಾಟಕ, ಮೇ 24 ರಂದು ‘ಮಧುರ ಮಂಡೋದರಿ’ ಏಕವ್ಯಕ್ತಿ ನಾಟಕ, ಮೇ 25ರಂದು ಸಳೀಯ ಕಲಾವಿದರಿಂದ ‘ಉರಿಕಂಡಾಯ’ ನಾಟಕ ಪ್ರಸ್ತುತಿಯ ನಾಟಕಗಳಿವೆ. ಹೆಚ್ಚಿನ ಕಲಾಭಿಮಾನಿಗಲು ಪ್ರೋತ್ಸಾಹ ನೀಡಬೇಕೆಂದು ಮನವಿಮಾಡಿದರು. ಈ ವೇಳೆ ಗಮ್ಯದ ರಂಗ ನಿರ್ದೇಶಕ ಆದಿತ್ಯ ಭಾರತ್ವಜ್ ಉಪಸ್ಥಿತಿಯಲ್ಲಿದ್ದರು.