ಕುಶಾಲನಗರ: ಇಬ್ಬರು ಅಧಿಕಾರಿಗಳ ಮನೆಗಳಿಗೆ ಲೋಕಾಯುಕ್ತ ದಾಳಿ

| Published : Mar 28 2024, 12:48 AM IST

ಸಾರಾಂಶ

ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಎಂಜಿನಿಯರ್ ಫಯಾಜ್ ಅಹಮದ್ ಅವರ ಮನೆಗೆ ಬೆಳಗ್ಗೆ 5.30ಕ್ಕೆ ಪವನ್ ಕುಮಾರ್ ಅವರ ನೇತೃತ್ವದ ತಂಡ ಮತ್ತು ಪಟ್ಟಣದ ಹೌಸಿಂಗ್ ಬೋರ್ಡ್ ಬಳಿ ಬಡಾವಣೆಯಲ್ಲಿರುವ ಜಯಣ್ಣ ಅವರ ಮನೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಏಕಕಾಲದಲ್ಲಿ ಇಬ್ಬರು ಅಧಿಕಾರಿಗಳ ನಿವಾಸಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಇಂಜಿನಿಯರ್ ಫಯಾಜ್ ಅಹಮದ್ ಮತ್ತು ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿ ಜಯಣ್ಣ ಎಂಬವರ ಮನೆಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಎಂಜಿನಿಯರ್ ಫಯಾಜ್ ಅಹಮದ್ ಅವರ ಮನೆಗೆ ಬೆಳಗ್ಗೆ 5.30ಕ್ಕೆ ಪವನ್ ಕುಮಾರ್ ಅವರ ನೇತೃತ್ವದ ತಂಡ ಮತ್ತು ಪಟ್ಟಣದ ಹೌಸಿಂಗ್ ಬೋರ್ಡ್ ಬಳಿ ಬಡಾವಣೆಯಲ್ಲಿರುವ ಜಯಣ್ಣ ಅವರ ಮನೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಕಾರ್ಯನಿರ್ವಾಣಾಧಿಕಾರಿ ಜಯಣ್ಣ ಕಳೆದ ಕೆಲವು ವರ್ಷಗಳಿಂದ ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕುಶಾಲನಗರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕಚೇರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಅಲ್ಲಿ ಕೂಡ ಕಚೇರಿ ಮತ್ತು ಅಲ್ಲಿನ ನಿವಾಸಕ್ಕೆ ದಾಳಿ ಮಾಡಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಫಯಾಜ್ ಅಹಮದ್ ಅವರಿಗೆ ಸಂಬಂಧಪಟ್ಟಂತೆ ಕುಶಾಲ್ ನಗರ ಸಮೀಪದ ಗಡಿಭಾಗದಲ್ಲಿರುವ ತೋಟದ ಮನೆ, ಮೈಸೂರಿನಲ್ಲಿರುವ ನಿವಾಸಗಳ ಮೇಲೆ ಕೂಡ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

-----------

ಕುಶಾಲನಗರ: ಮತದಾನ ಜಾಗೃತಿ ಕಾರ್ಯಕ್ರಮಮಡಿಕೇರಿ: ಚುನಾವಣೆಯ ಸ್ವೀಪ್ ಕಾರ್ಯಕ್ರಮದಡಿ ಪುರಸಭಾ ವ್ಯಾಪ್ತಿಯಲ್ಲಿ ಮತದಾನ ಮಾಡುವ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಕುಶಾಲನಗರ ಪುರಸಭೆ ವತಿಯಿಂದ ಬುಧವಾರ ಜಾಗೃತಿ ಕಾರ್ಯಕ್ರಮ ನಡೆಯತು. ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಕಾರ್ಯಕ್ರಮ ನಡೆಯಿತು ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.