ಕುಶಾಲನಗರ: ಕಾವೇರಿಗೆ 151ನೇ ಮಹಾರತಿ
KannadaprabhaNewsNetwork | Published : Oct 31 2023, 01:15 AM IST
ಕುಶಾಲನಗರ: ಕಾವೇರಿಗೆ 151ನೇ ಮಹಾರತಿ
ಸಾರಾಂಶ
ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ ನೆರವೇರಿಸಿ ಅಷ್ಟೋತ್ತರಗಳ ನಂತರ ಕಾವೇರಿಗೆ ಮಹಾ ಆರತಿ ಬೆಳಗಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ ಜೀವನದಿ ಕಾವೇರಿಗೆ ಹುಣ್ಣಿಮೆಯ ಅಂಗವಾಗಿ 151ನೇ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯಿತು. ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ ನೆರವೇರಿಸಿ ಅಷ್ಟೋತ್ತರಗಳ ನಂತರ ಕಾವೇರಿಗೆ ಮಹಾ ಆರತಿ ಬೆಳಗಲಾಯಿತು. ನಂತರ ಇತ್ತೀಚೆಗೆ ಮೃತಪಟ್ಟ ಕಾವೇರಿ ರಿವರ್ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ಕೆ.ಆರ್. ಶಿವಾನಂದನ್ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು. ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಪ್ರಮುಖರಾದ ಮಂಡೆಪoಡ ಬೋಸ್ ಮೊಣ್ಣಪ್ಪ, ಕೆಂಚಪ್ಪ ಮತ್ತಿತರರು ಇದ್ದರು. ----------- ಚಿತ್ರ ಮಹಾ ಆರತಿ ಸಂದರ್ಭ