ಕುಶಾಲನಗರ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

| Published : Feb 07 2024, 01:50 AM IST

ಸಾರಾಂಶ

ಕುಶಾಲನಗರದ ಶೋರೂಮ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಲ್ಲಿ ಶೋರೂಮ್ ನ ಮಾಲೀಕ ಶ್ರೀನಿಧಿ, ಟೈಲರಿಂಗ್ ಮಿಷಿನ ಕತ್ತರಿಯಿಂದ ಸಾಜಿದ್ ಎಂಬಾತನಿಗೆ ಚುಚ್ಚಿದ ಪರಿಣಾಮ ಆತ ಮೃತಪಟ್ಟಿದ್ದ. ಶ್ರೀನಿಧಿಗೆ ಬೆಂಬಲವಾಗಿ ನಿಂತು ಕೊಲೆಗೆ ಪ್ರೋತ್ಸಾಹಿಸಿದ ಆತನ ಸ್ನೇಹಿತ ಆಲಿಂ ಮೇಲೆ ಕೂಡ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕುಶಾಲನಗರದಲ್ಲಿ ಸೋಮವಾರ ನಡೆದ ಕೊಲೆ ಸಂಬಂಧ ಶೋರೂಮ್ ಮಾಲಿಕ ಶ್ರೀನಿಧಿ ಹಾಗೂ ಆತನ ಸ್ನೇಹಿತ ಆಲಿಂ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಶಾಲನಗರದ ಶೋರೂಮ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಲ್ಲಿ ಶೋರೂಮ್ ನ ಮಾಲೀಕ ಶ್ರೀನಿಧಿ, ಟೈಲರಿಂಗ್ ಮಿಷಿನ ಕತ್ತರಿಯಿಂದ ಸಾಜಿದ್ ಎಂಬಾತನಿಗೆ ಚುಚ್ಚಿದ ಪರಿಣಾಮ ಆತ ಮೃತಪಟ್ಟಿದ್ದ. ಶ್ರೀನಿಧಿಗೆ ಬೆಂಬಲವಾಗಿ ನಿಂತು ಕೊಲೆಗೆ ಪ್ರೋತ್ಸಾಹಿಸಿದ ಆತನ ಸ್ನೇಹಿತ ಆಲಿಂ ಮೇಲೆ ಕೂಡ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಉಪ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ರಾಜನ್ ಬೇಟಿ ನೀಡಿ ಪರಿಶೀಲಿಸಿ ತನಿಖಾಧಿಕಾರಿಗಳಿಗೆ ಸಲಹೆ ಸೂಚನೆಯನ್ನು ನೀಡಿದರು. 50 ಲಕ್ಷ ರು. ಪರಿಹಾರಕ್ಕೆ ಆಗ್ರಹ:

ಕುಶಾಲನಗರದಲ್ಲಿ ಕೊಲೆಯಾದ ಶಾಜಿದ್ ಕುಟುಂಬಕ್ಕೆ 50 ಲಕ್ಷ ರು. ಪರಿಹಾರ ನೀಡುವಂತೆ ಎಸ್.ಡಿ. ಪಿ.ಐ. ರಾಜ್ಯಾದ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದರು. ಮೃತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಹಾಗೂ ಅಂಗಡಿಯ ಪರವಾನಗಿ ರದ್ದುಪಡಿಸಿ ಶೋರೂಮ್ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳಿದರು. ಅಂಗಡಿಗೆ ಆಗಮಿಸುವ ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವ ಬದಲು ಈ ರೀತಿ ಕ್ಷುಲ್ಲಕ ವಿಚಾರಕ್ಕೆ ಇರಿದು ಜೀವ ತೆಗೆದಿರುವುದು ಘೋರ ಕೃತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಯುವಕನ ಅಂತ್ಯ ಸಂಸ್ಕಾರ :

ಕುಶಾಲನಗರದಲ್ಲಿ ದ್ವಿ ಚಕ್ರ ವಾಹನ ಶೋರೂಂನಲ್ಲಿ ಕ್ಷುಲ್ಲಕ ಕಾರಣದಿಂದ ಇರಿತಕೊಳಕ್ಕಾಗಿ ಪ್ರಾಣ ಕಳೆದುಕೊಂಡ ಯುವಕನ ಮೃತದೇಹಕ್ಕೆ ಗಣಪತಿ ಬೀದಿಯ ಸ್ವಗೃಹದಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಿ ಮಡಿಕೇರಿಯ ಖಬರ ಸ್ಥಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮೃತ ಸಾಜಿದ್ ಸೇರಿದಂತೆ ನಾಲ್ಕು ಗಂಡು ಮಕ್ಕಳನ್ನು ಹೊಂದಿರುವ ತಂದೆ ಶೌಕತ್ ಹಾಗೂ ತಾಯಿ ಉನ್ಯೆಸ ಕುಟುಂಬಸ್ಥರ ಆಕ್ರಂದನದ ನಡುವೆ ನಡೆದ ವಿಧಿ ವಿಧಾನ ಸಂದರ್ಭ ಪೋಲಿಸರು ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಡಿ.ವೈ.ಎಸ್ ಪಿ ಮನೊಜ್ ಕುಮಾರ್ ಸ್ಥಳದಲ್ಲಿ ಹಾಜರಿದ್ದರು.