ಕುಶಾಲನಗರ: ಸರಕು ಸಾಗಾಣಿಕೆ ವಾಹನಗಳ ಮುಷ್ಕರ ಯಶಸ್ವಿ

| Published : Jan 19 2024, 01:45 AM IST

ಸಾರಾಂಶ

ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘ, ಮಿನಿ ಲಾರಿ ಮಾಲೀಕರ ಸಂಘ ಮತ್ತು ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ನೇತೃತ್ವದಲ್ಲಿ ಮುಷ್ಕರ ಯಶಸ್ವಿಯಾಗಿ ನಡೆಯಿತು. ಕುಶಾಲನಗರ ಮೂಲಕ ಹಾದು ಹೋಗುತ್ತಿದ್ದ ಎಲ್ಲ ಸರಕು ಸಾಗಾಣಿಕೆ ವಾಹನಗಳನ್ನು ಸ್ಥಗಿತಗೊಳಿಸಿ ಪಟ್ಟಣದ ಜಾತ್ರಾ ಮೈದಾನದಲ್ಲಿ ನಿಲ್ಲಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕುಶಾಲನಗರಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಆರಂಭಗೊಂಡ ಸರಕು ಸಾಗಾಣಿಕೆ ವಾಹನಗಳ ಮುಷ್ಕರ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಲಾರಿಗಳು ಮತ್ತು ಸರಕು ಸಾಗಾಣಿಕೆ ವಾಹನಗಳು ಸಂಪೂರ್ಣ ಸಂಚಾರ ಸ್ಥಗಿತಗೊಳಿಸಿದ್ದವು.

ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘ, ಮಿನಿ ಲಾರಿ ಮಾಲೀಕರ ಸಂಘ ಮತ್ತು ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ನೇತೃತ್ವದಲ್ಲಿ ಮುಷ್ಕರ ಯಶಸ್ವಿಯಾಗಿ ನಡೆಯಿತು.

ಕುಶಾಲನಗರ ಮೂಲಕ ಹಾದು ಹೋಗುತ್ತಿದ್ದ ಎಲ್ಲ ಸರಕು ಸಾಗಾಣಿಕೆ ವಾಹನಗಳನ್ನು ಸ್ಥಗಿತಗೊಳಿಸಿ ಪಟ್ಟಣದ ಜಾತ್ರಾ ಮೈದಾನದಲ್ಲಿ ನಿಲ್ಲಿಸಲಾಗಿತ್ತು.

ಸ್ಥಳೀಯ ಸಂಘಟನೆಗಳ ಪ್ರಮುಖರು ಮುಷ್ಕರದಲ್ಲಿ ಪಾಲ್ಗೊಂಡ ಸರಕು ಸಾಗಾಣಿಕೆ ವಾಹನಗಳ ಚಾಲಕರು ಮತ್ತು ಮಾಲೀಕರು, ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟ ಉಪಚಾರ ಮಾಡಿದರು.

ನಂತರ ಮುಷ್ಕರದ ಬಗ್ಗೆ ಮಾಹಿತಿ ನೀಡಿದ ಸಂಘಟನೆಗಳ ಪ್ರಮುಖರು ವಾಹನಗಳನ್ನು ಕಳುಹಿಸಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಕೋರಿದರು. ಮುಷ್ಕರದ ಹಿನ್ನೆಲೆಯಲ್ಲಿ ಕುಶಾಲನಗರದ ಬಹುತೇಕ ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ ಸರಕು ಸಾಗಾಟ ಸಂಪೂರ್ಣ ಬಂದ್ ಆಗಿತ್ತು.

ಈ ಸಂದರ್ಭ ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘ, ಮಿನಿ ಲಾರಿ ಮಾಲೀಕರ ಸಂಘ ಮತ್ತು ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಸಂಘಟನೆಗಳ ಪ್ರಮುಖರಾದ ಡಿ.ಕೆ.ಗಣೇಶ್, ಜಿ.ಎ. ಲೋಕೇಶ್, ದೊಡ್ಡಣ್ಣ, ಜಯಣ್ಣ, ರಫೀಕ್, ಸಂದೀಪ್ ಮತ್ತಿತರರು ಇದ್ದರು.ಕುಶಾಲನಗರ ಜಾತ್ರಾ ಮೈದಾನದಲ್ಲಿ ಸ್ಥಗಿತಗೊಳಿಸಿದ ಸರಕು ಸಾಗಾಣಿಕೆ ವಾಹನಗಳು ಮತ್ತು ಚಾಲಕರ ಚಿತ್ರ