ಜನಪದರಿಂದ ಸೃಷ್ಟಿಸಲ್ಪಟ್ಟ ಕಲೆಗಳು ಕೇವಲ ಮನರಂಜನೆಯ ಸರಕಲ್ಲ, ನಮ್ಮ ಸಂಸ್ಕೃತಿಯ ಜೀವಾಳವಾಗಿವೆ. ಮನರಂಜನೆ ನೀಡುವುದರ ಜೊತೆಗೆ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತದೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ: ಜನಪದರಿಂದ ಸೃಷ್ಟಿಸಲ್ಪಟ್ಟ ಕಲೆಗಳು ಕೇವಲ ಮನರಂಜನೆಯ ಸರಕಲ್ಲ, ನಮ್ಮ ಸಂಸ್ಕೃತಿಯ ಜೀವಾಳವಾಗಿವೆ. ಮನರಂಜನೆ ನೀಡುವುದರ ಜೊತೆಗೆ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತದೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳೀಯ ಅನುಗ್ರಹ ಕಾಲೇಜು ಸಂಭಾಗಣದಲ್ಲಿ ಆಯೋಜಿಸಿದ್ದ ದಿ.ಹಂಚೆಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿಗಳ ಜ್ಞಾಪಕಾರ್ಥ ಜನಪದ ಕಲೆಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಇಂತಹ ವೇದಿಕೆಗಳು ಸದ್ಬಳಕೆಯಾಗುತ್ತದೆ. ಹಿರಿಯರ ಹೆಸರುಗಳನ್ನು ಶಾಶ್ವತವಾಗಿ ಉಳಿಯುವಂತೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದಷ್ಟು ದೇಣಿಗೆ ನೀಡುತ್ತಾರೆ. ಅದರಲ್ಲಿ ಬರುವ ಬಡ್ಡಿ ಹಣದಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದಾಗ ಹಿರಿಯರ ಹೆಸರು ಅಜರಾಮರವಾಗಿ ಉಳಿಯುತ್ತದೆ ಎಂದು ತಿಳಿಸಿದರು.ಕಸಾಪ ತಾಲೂಕು ಅಧ್ಯಕ್ಷ ಕೆ ಎಸ್ ನಾಗೇಶ್ ಮಾತನಾಡಿ, ವಿಧ್ಯಾರ್ಥಿಗಳು ಜನಪದ ಕಲೆಯ ತರಹ ತೆರೆದುಕೊಳ್ಳಬೇಕು. ಆ ಮೂಲಕ ತಮ್ಮ ತಮ್ಮ ಪ್ರತಿಭೆಗಳನ್ನು ಜಗತ್ತಿಗೆ ತೋರಿಸಬೇಕು ಎಂದು ಕರೆ ನೀಡಿದರು.ದತ್ತಿ ದಾನಿಗಳಾದ ಪ್ಯಾನ್ಸಿ ಮುತ್ತಣ್ಣ ಮಾತನಾಡಿದರು. ವಿದ್ಯಾರ್ಥಿಗಳು ಜನಪದ ಹಾಡು ಹೇಳುವ ಮೂಲಕ ಎಲ್ಲರ ಗಮನ ಸೆಳೆದರು. ಕಾಲೇಜು ಪ್ರಾಂಶುಪಾಲೆ ಡಾ. ಬಿ.ಡಿ.ಚೈತ್ರ, ಕಸಾಪ ಕಾರ್ಯದರ್ಶಿ ಶೈಲ ಪ್ರೇಮಕುಮಾರ್, ಕೋಶಾಧಿಕಾರಿ ಉಮೇಶ್, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ ಎನ್ ಮೂರ್ತಿ, ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಪರಮೇಶ್ ಮತ್ತಿತರರು ಇದ್ದರು. ಉಪನ್ಯಾಸಕಿ ಲೀಲಾ ಕುಮಾರಿ ತೊಡಿಕಾನ ನಿರೂಪಿಸಿದರು.