ಕನ್ನಡಪ್ರಭ ವಾರ್ತೆ ವಿಜಯಪುರ ಭಾರತ ಸರ್ಕಾರದ ಉಕ್ಕು ಸಚಿವಾಲಯವು ವಿಜಯಪುರದ ಜೆಡಿಎಸ್ ನಾಯಕಿ ಡಾ.ಸುನಿತಾ ದೇವಾನಂದ ಚವ್ಹಾಣ ರವರನ್ನು ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಭಾರತ ಸರ್ಕಾರದ ಉಕ್ಕು ಸಚಿವಾಲಯವು ವಿಜಯಪುರದ ಜೆಡಿಎಸ್ ನಾಯಕಿ ಡಾ.ಸುನಿತಾ ದೇವಾನಂದ ಚವ್ಹಾಣ ರವರನ್ನು ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿದೆ.ಇವರ ಅಧಿಕಾರವಧಿಯು ಮುಂದಿನ ಮೂರು ವರ್ಷಗಳ ವರೆಗೆ ಅಥವಾ ಸಚಿವಾಲಯದ ಮುಂದಿನ ಆದೇಶದ ವರೆಗೆ ಇರಲಿದೆ. ಸುನಿತಾ ಚವ್ಹಾಣ ರವರನ್ನು ಹಿಂದಿ ಸಲಹಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಸಚಿವಾಲಯದ ಜಂಟಿ ನಿರ್ದೇಶಕ ಸುದರ್ಶನ ಮೆಂಡಿರಟ್ಟ ಅವರು ಆದೇಶಿಸಿದ್ದಾರೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿದ ಕಾರ್ಯಕರ್ತೆಯನ್ನು ಗುರುತಿಸಿ ಇಂತಹ ಉನ್ನತ ಸಮಿತಿಗೆ ನೇಮಿಸಿರುವುದು ಅತ್ಯಂತ ಸಂತಸದ ವಿಚಾರವಾಗಿದ್ದು, ಇದಕ್ಕೆ ಕಾರಣಿಕರ್ತರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಹಿರಿಯರಿಗೆ ಡಾ.ಸುನಿತಾ ಚವ್ಹಾಣ ಧನ್ಯವಾದಗಳನ್ನು ಅರ್ಪಿಸಿದ್ದಾರೆ.