ಕುಶಾಲನಗರ ವ್ಯವಸಾಯೋತ್ಪನ್ನ ಸಹಕಾರ ಸಂಘ ಚುನಾವಣೆ

| Published : Nov 01 2025, 03:00 AM IST

ಕುಶಾಲನಗರ ವ್ಯವಸಾಯೋತ್ಪನ್ನ ಸಹಕಾರ ಸಂಘ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆದು ನೂತನ ಆಡಳಿತ ಮಂಡಳಿಗೆ 8 ಮಂದಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆದು ನೂತನ ಆಡಳಿತ ಮಂಡಳಿಗೆ 8 ಮಂದಿ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ.

ಕುಶಾಲನಗರ ವಿಭಾಗ, ಹೆಬ್ಬಾಲೆ ವಿಭಾಗ, ನಂಜರಾಯಪಟ್ಟಣ ವಿಭಾಗ, ಸಾಮಾನ್ಯ ವಿಭಾಗ, ಮಹಿಳಾ ವಿಭಾಗ, ಪರಿಶಿಷ್ಟ ಜಾತಿ ಸೇರಿದಂತೆ ಒಟ್ಟು 8 ಸ್ಥಾನಗಳಿಗೆ ಚುನಾವಣೆ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ನಂತರ ಮತ ಎಣಿಕೆ ಕಾರ್ಯ ಸಹಕಾರ ಸಂಘದ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿ ಸಮ್ಮುಖದಲ್ಲಿ ನಡೆಯಿತು. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಕೈ ಮೇಲಾಗಿದೆ.ಹೆಬ್ಬಾಲೆ ಸಾಮಾನ್ಯ ಕ್ಷೇತ್ರದಿಂದ ಎಚ್.ಬಿ. ಚಂದ್ರಪ್ಪ, ಹಿಂದುಳಿದ ವರ್ಗ ಪ್ರವರ್ಗ ‘ಎ’ ಕ್ಷೇತ್ರದಿಂದ ಎಚ್.ಎನ್. ಮಹದೇವ, ಮಹಿಳಾ ಮೀಸಲು ಕ್ಷೇತ್ರದಿಂದ ಎಚ್.ಟಿ. ಚಂದ್ರಕಲಾ ಆಯ್ಕೆಗೊಂಡರು.

ಕುಶಾಲನಗರ ಬ್ಲಾಕ್ ಸಾಮಾನ್ಯ ಕ್ಷೇತ್ರದಿಂದ ಬಿ‌.ಸಿ. ಮಲ್ಲಿಕಾರ್ಜುನ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ನಂದಕುಮಾರ್, ಮಹಿಳಾ ಮೀಸಲು ಕ್ಷೇತ್ರದಿಂದ ಬೊಳ್ಳಚಂಡ ಪಾರ್ವತಿ ಮುತ್ತಣ್ಣ ಅಯ್ಕೆಗೊಂಡರು.ಕುಶಾಲನಗರ ‘ಎ’ ತರಗತಿ ಬ್ಲಾಕ್‌ನಿಂದ ಎಚ್.ಜೆ‌. ಶರತ್, ನಂಜರಾಯಪಟ್ಟಣ ‘ಎ’ ತರಗತಿ ಬ್ಲಾಕ್‌ನಿಂದ ಕೆ.ಎಂ. ಪ್ರಸನ್ನ ಅವರು ಅಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ಕುಶಾಲನಗರ ತಾಲೂಕು ತಹಸೀಲ್ದಾರ್‌ ಕಿರಣ್ ಗೌರಯ್ಯ ತಿಳಿಸಿದ್ದಾರೆ.ಚುನಾವಣಾ ಕಣದಲ್ಲಿ ಮೂರು ಕ್ಷೇತ್ರಗಳಿಂದ ಒಟ್ಟು 20 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಆಡಳಿತ ಮಂಡಳಿಯ ಒಟ್ಟು ನಿರ್ದೇಶಕರ ಸಂಖ್ಯೆ 12. ಇದರಲ್ಲಿ ಸುಂಟಿಕೊಪ್ಪ ಕ್ಷೇತ್ರದಿಂದ 4 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದರು.

ಸಹಾಯಕ ಚುನಾವಣಾಧಿಕಾರಿಗಳಾಗಿ ಸಂದೀಪ್, ಸಂಘದ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಕಾರ್ಯ ನಿರ್ವಹಿಸಿದರು.