ಕುಶಾಲನಗರ: ಸ್ವಚ್ಛತಾ ಕಾರ್ಯಕ್ರಮ

| Published : Oct 08 2025, 01:01 AM IST

ಸಾರಾಂಶ

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಲಯನ್ಸ್‌ ಕುಶಾಲನಗರ ಸಹಯೋಗದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಲಯನ್ಸ್ ಕುಶಾಲನಗರ ಸಹಯೋಗದೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಸುಬೇದಾರ್ ಮೇಜರ್ ಎಸ್ಆರ್ ಮಾದಪ್ಪ, ಉಪಾಧ್ಯಕ್ಷರಾದ ಸುಬೇದಾರ್ ಎಳ್ತಂಡ ರಂಜಿತ್ ನೇತೃತ್ವದಲ್ಲಿ ಪಟ್ಟಣದ ಆಂಜನೇಯ ದೇವಾಲಯದಿಂದ ಮುಳುಸೋಗೆ ಬಸವೇಶ್ವರ ದೇವಾಲಯ ತನಕ ಸ್ವಚ್ಛತಾ ಕಾರ್ಯ ನಡೆಯಿತು. ರಸ್ತೆಯ ಎರಡು ಭಾಗಗಳಲ್ಲಿ ಹರಡಲಾಗಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿ ಪುರಸಭೆಯ ವಾಹನದಲ್ಲಿ ಸಾಗಿಸಲಾಯಿತು. ಈ ಸಂದರ್ಭ ಸೈನಿಕರ ಸಂಘದ ಕಾರ್ಯದರ್ಶಿ ಹಾನರರಿ ಕ್ಯಾಪ್ಟನ್ ಸುರೇಶ್, ಖಜಾಂಚಿ ನರೇಶ್ ಕುಮಾರ್ ಮತ್ತು ಸದಸ್ಯರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಮುಖರಾದ ಸುಲೋಚನಾ, ಕೆ ಬಿ ಗಣೇಶ್, ಎಂ ಎಸ್ ಗಣೇಶ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಾರಾಯಣ ಹರೀಶ್ ಗಣಪತಿ ಟಿ ಕೆ ರಾಜಶೇಖರ್, ಕವಿತಾ ಹರೀಶ್, ಕರ್ನಾಟಕ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಂ ಬಿ ಮೊಣ್ಣಪ್ಪ ಮತ್ತಿತರರು ಇದ್ದರು.