ಸ್ವಾತಂತ್ರ್ಯೋತ್ಸವ ಅಂಗವಾಗಿ ಕುಶಾಲನಗರ ಬಡಾವಣೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಮೂಲಕ ಧ್ವಜಾರೋಹಣ ನೆರವೇರಿಸಿ ಬಡಾವಣೆ ನಾಗರಿಕ ನಿವಾಸಿಗಳು ಸಂಭ್ರಮಿಸಿದರು.
ಕುಶಾಲನಗರ: ಸ್ವಾತಂತ್ರ್ಯೋತ್ಸವ ಅಂಗವಾಗಿ ಕುಶಾಲನಗರ ಬಡಾವಣೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಮೂಲಕ ಧ್ವಜಾರೋಹಣ ನೆರವೇರಿಸಿ ಬಡಾವಣೆ ನಾಗರಿಕ ನಿವಾಸಿಗಳು ಸಂಭ್ರಮಿಸಿದರು. ಪಟ್ಟಣದ ರಸೂಲ್ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಿದ ಬಡಾವಣೆ ನಿವಾಸಿಗಳು ತಮ್ಮ ಬಡಾವಣೆಯಲ್ಲಿ ದಿನನಿತ್ಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವ ಕುಶಾಲನಗರ ಪುರಸಭೆ ಪೌರ ಕಾರ್ಮಿಕರಾದ ವೆಂಕಟೇಶ, ಬಸವರಾಜು ರಾಜೇಂದ್ರ ಅವರ ಮೂಲಕ ಧ್ವಜಾರೋಹಣ ನೆರವೇರಿಸಿದ ನಂತರ ಗೌರವಿಸಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್ ಎಂ.ಎನ್. ಮಾತನಾಡಿದರು. ಬಡಾವಣೆಯ ನಾಗರಿಕರ ವತಿಯಿಂದ ವಾಟರ್ ಮ್ಯಾನ್ ಭರತ್, ಕೆಇಬಿ ನೌಕರ ವಾಸಿಂ ಅವರನ್ನು ಗೌರವಿಸಲಾಯಿತು.ಬಡಾವಣೆಯ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಆದಾ ರಿಜ ಅವರನ್ನು ಬಡಾವಣೆಯ ಪ್ರಮುಖರಾದ ಅಮ್ಜದ್ ಹುಸೇನ್, ರಿದ ಹುಸೇನ್ ದಂಪತಿ ಸನ್ಮಾನಿಸಿದರು. ಮಕ್ಕಳು ದೇಶಭಕ್ತಿ ಗೀತೆ ಹಾಡಿದರು. ಪುರಸಭೆ ಮಾಜಿ ಸದಸ್ಯ ಶೇಖ್ ಕಲೀಮುಲ್ಲಾ, ಅಜ್ಮಲ್, ಬಡಾವಣೆ ನಿವಾಸಿಗಳು, ಮಕ್ಕಳು ಇದ್ದರು.