ಗೌರಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲು ಕುಶಾಲನಗರ ಪುರಸಭೆ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ವಿಶೇಷವಾಗಿ ಕೆರೆ ನಿರ್ಮಾಣ ಮಾಡಿದೆ.

ಕುಶಾಲನಗರ: ಗೌರಿ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲು ಕುಶಾಲನಗರ ಪುರಸಭೆ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ವಿಶೇಷವಾಗಿ ಕೆರೆ ನಿರ್ಮಾಣ ಮಾಡಿದೆ.

ಗೌರಿ ಗಣೇಶ ಹಬ್ಬದ ಅಂಗವಾಗಿ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಗಣಪತಿ ವಿಗ್ರಹಗಳನ್ನು ನದಿ ಅಥವಾ ಇತರ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನ್ಯಾಯಾಲಯದ ಆದೇಶದಂತೆ ನಿರ್ಬಂಧಿಸಲಾಗಿದೆ ಎಂದು ಪುರಸಭೆ ಮುಖ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕುಶಾಲನಗರ ಪುರಸಭೆ ಗಣಪತಿ ವಿಸರ್ಜನೆ ಮಾಡುವ ಸಂಬಂಧ ತಾತ್ಕಾಲಿಕ ಕೆರೆ ನಿರ್ಮಾಣ ಮಾಡಿದ್ದು ಕೆರೆಯಲ್ಲಿ ನೀರು ತುಂಬಿಸಲು ಮತ್ತು ಅದನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಕೆರೆಯ ಸುತ್ತಮುತ್ತ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದು ವಿಗ್ರಹವನ್ನು ಈ ಕೆರೆಯಲ್ಲಿ ವಿಸರ್ಜಿಸುವಂತೆ ಕೋರಿದ್ದಾರೆ. ನದಿ ಅಥವಾ ಇತರೆ ಜಲಮೂಲಗಳಲ್ಲಿ ವಿಸರ್ಜನೆ ಮಾಡಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.