ಕುಷ್ಟಗಿ ಪಿಕಾರ್ಡ್‌ ಚುನಾವಣೆ ಅಂತ್ಯ, 13 ಅಭ್ಯರ್ಥಿಗಳು ಆಯ್ಕೆ

| Published : Jan 28 2025, 12:45 AM IST

ಕುಷ್ಟಗಿ ಪಿಕಾರ್ಡ್‌ ಚುನಾವಣೆ ಅಂತ್ಯ, 13 ಅಭ್ಯರ್ಥಿಗಳು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಚುನಾವಣೆಯ ಮತ ಎಣಿಕೆಯು ಸೋಮವಾರ ಸಂಪೂರ್ಣಗೊಂಡಿತು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಚುನಾವಣೆಯ ಮತ ಎಣಿಕೆಯು ಸೋಮವಾರ ಸಂಪೂರ್ಣಗೊಂಡಿತು.

ಬ್ಯಾಂಕಿನ ಚುನಾವಣೆಯು ಜ. 5ರಂದು ನಡೆದ ಹಿನ್ನೆಲೆ ಕೆಲವರು ಮತ ಎಣಿಕೆಯ ಕುರಿತು ಹೈಕೋರ್ಟ್ ಮೊರೆ ಹೋಗಿದ್ದರಿಂದ ಮತ ಎಣಿಕೆಯ ಕಾರ್ಯ ನಿಲ್ಲಿಸಲಾಗಿತ್ತು. ಎಲ್ಲ ವಿಚಾರಣೆ ನಡೆದ ಬಳಿಕ ಹೈಕೋರ್ಟ್ ಮತ ಎಣಿಕೆ ಮಾಡುವಂತೆ ಆದೇಶ ಮಾಡಿರುವ ಹಿನ್ನೆಲೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಮತ ಎಣಿಕೆಯ ಕಾರ್ಯ ತಹಸೀಲ್ದಾರ ಅಶೋಕ ಶಿಗ್ಗಾಂವಿ ನೇತೃತ್ವದಲ್ಲಿ ಭರದಿಂದ ನಡೆಯಿತು.

ಒಟ್ಟು 13 ಕ್ಷೇತ್ರಗಳ ಪೈಕಿ 26 ಜನ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಮೂವರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಉಳಿದ ಹತ್ತು ಸ್ಥಾನಗಳಿಗೆ ಜ. 5 ರಂದು ಪಟ್ಟಣದ ವಿದ್ಯಾನಗರದ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆದಿತ್ತು. ಆದರೆ ಎಂಟು ಕ್ಷೇತ್ರದ ಮತ ಎಣಿಕೆ ಮಾಡಬಾರದು ಎಂದು ಕೋರ್ಟ್‌ನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಅಂದು ಎರಡು ಸ್ಥಾನಗಳಿಗೆ ಮಾತ್ರ ಮತ ಎಣಿಕೆ ಕಾರ್ಯ ನಡೆಯಿತು.

ಉಳಿದ ಎಂಟು ಜನ ಅಭ್ಯರ್ಥಿಗಳ ಪೈಕಿ 19 ಜನ ಚುನಾವಣೆಯನ್ನು ಎದುರಿಸಿದ್ದು ಇವರ ಮತ ಎಣಿಕೆಯ ಕಾರ್ಯ ಸೋಮವಾರ ನಡೆದಿದ್ದು ಇದರಲ್ಲಿ ಎಂಟು ಜನ ಅಭ್ಯರ್ಥಿಗಳು ಆಯ್ಕೆಯಾದರು.ಆಯ್ಕೆಯಾದ ಅಭ್ಯರ್ಥಿಗಳು:

ಹಿರೇಮನ್ನಾಪೂರ ಕ್ಷೇತ್ರದ ಶೇಖರಗೌಡ ಮಾಲಿಪಾಟೀಲ, ಕುಷ್ಟಗಿ ಕ್ಷೇತ್ರ ಭರಮಗೌಡ ಮಾಲಿಪಾಟೀಲ. ಜುಮಲಾಪೂರ ಕ್ಷೇತ್ರ ಬಸನಗೌಡ ದಿಡ್ಡಿಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಹಗೀರಗುಡದೂರು ಕ್ಷೇತ್ರದ ಶ್ಯಾಮರಾವ ಕುಲಕರ್ಣಿ, ಹನುಮಸಾಗರ ಕ್ಷೇತ್ರದ ಸೋಮವ್ವ ರಾಠೋಡ ಜ.5ರಂದು ಆಯ್ಕೆಯಾಗಿದ್ದರು.ಜ.27ರಂದು ಆಯ್ಕೆಯಾದವರು:

ತುಗ್ಗಲದೋಣಿ ಕ್ಷೇತ್ರಕ್ಕೆ ಶಿವಯ್ಯ ಗಡಾದರ, ಹೂಲಗೇರಾ ಕ್ಷೇತ್ರಕ್ಕೆ ಮಹಾಂತೇಶ ಕರಡಿ, ಕಲಾಲಬಂಡಿ ಕ್ಷೇತ್ರಕ್ಕೆ ಮಹಾಲಿಂಗಪ್ಪ ದೋಟಿಹಾಳ, ತಳುವಗೇರಾ ಕ್ಷೇತ್ರಕ್ಕೆ ಬಾಲಪ್ಪ ಸಾಬಣ್ಣ, ಬಿಜಕಲ್ ಕ್ಷೇತ್ರಕ್ಕೆ ಗೋಪಾಲರಾವ್ ಕುಲಕರ್ಣಿ, ತಾವರಗೇರಾ ಕ್ಷೇತ್ರಕ್ಕೆ ಈರಮ್ಮ ಚೌಡಿ, ಮೆಣೆದಾಳ ಕ್ಷೇತ್ರಕ್ಕೆ ಶಾಂತವ್ವ ಮುಳ್ಳೂರು, ಕುಷ್ಟಗಿ ತಾಲೂಕು ವ್ಯಾಪ್ತಿ (ಸಾಲಗಾರರಲ್ಲದ ಕ್ಷೇತ್ರಕ್ಕೆ) ಅಮರೇಶ ಕಲಕಬಂಡಿ ಆಯ್ಕೆಯಾದರು.

ಕುಷ್ಟಗಿ ಪಿಕಾರ್ಡ್‌ ಬ್ಯಾಂಕಿಗೆ ಜ.15ರಂದು ಚುನಾವಣೆ ನಡೆದಿತ್ತು. ಮೂವರು ಅವಿರೋಧವಾಗಿ, ಇಬ್ಬರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಎಂಟು ಜನರ ಫಲಿತಾಂಶ ಸೋಮವಾರ ನಡೆದ ಮತ ಎಣಿಕೆಯ ಪ್ರಕ್ರಿಯೆಯಲ್ಲಿ ಬಂದಿದೆ ಎಂದು ರಿಟರ್ನಿಂಗ್ ಆಫೀಸರ್ ಬಸಪ್ಪ ಬಾಗಲಿ ತಿಳಿಸಿದ್ದಾರೆ.