ಸಾರಾಂಶ
ಶ್ರೀ ನಾರಾಯಣಗುರುಗಳ ಸಮಾನತೆಯ ಮತ್ತು ಸಾಮರಸ್ಯದ ಸಂದೇಶ ಸಾರುವ, ಉಡುಪಿಯ ಶ್ರೀ ನಾರಾಯಣಗುರು ಯುವ ವೇದಿಕೆ ಮುತುವರ್ಜಿಯಲ್ಲಿ ಇಲ್ಲಿನ ಬಲಾಯಿಪಾದೆ- ಕುತ್ಪಾಡಿ ಗರಡಿ ಪರಿಸರದಲ್ಲಿ 108 ಶ್ರೀ ಗಂಧದ ಮರಗಳ ನಡುವೆ ವಿನ್ಯಾಸಗೊಳಿಸಲಾಗಿರುವ ಶ್ರೀ ಗುರು ಉದ್ಯಾನವನಕ್ಕೆ ಭಾನುವಾರ ಶಿಲಾನ್ಯಾಸ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ನಾರಾಯಣಗುರುಗಳ ಸಮಾನತೆಯ ಮತ್ತು ಸಾಮರಸ್ಯದ ಸಂದೇಶ ಸಾರುವ, ಉಡುಪಿಯ ಶ್ರೀ ನಾರಾಯಣಗುರು ಯುವ ವೇದಿಕೆ ಮುತುವರ್ಜಿಯಲ್ಲಿ ಇಲ್ಲಿನ ಬಲಾಯಿಪಾದೆ- ಕುತ್ಪಾಡಿ ಗರಡಿ ಪರಿಸರದಲ್ಲಿ 108 ಶ್ರೀ ಗಂಧದ ಮರಗಳ ನಡುವೆ ವಿನ್ಯಾಸಗೊಳಿಸಲಾಗಿರುವ ಶ್ರೀ ಗುರು ಉದ್ಯಾನವನಕ್ಕೆ ಭಾನುವಾರ ಶಿಲಾನ್ಯಾಸ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಯಾನವನ ನಿರ್ಮಾಣಕ್ಕೆ ಚಾಲನೆ ನೀಡಿದರು. ಶ್ರೀ ಗುರುಗಳು ಪ್ರತಿಪಾದಿಸಿದಂತೆ ಈ ಸಮಾಜದಲ್ಲಿ ತಾರತಮ್ಯ ದೂರವಾಗಲಿ ಎಂದರಲ್ಲದೇ, ಗುರುಗಳ ಸಂದೇಶ ಸದಾ ನೆನಪಿಸುವ ಇಂತಹ ಉದ್ಯಾವನ ನಿರ್ಮಾಣ ಮಾಡುವ ವೇದಿಕೆಯ ಕೆಲಸ ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಶ್ರೀ ಗುರುಗಳ ಉದ್ಯಾನವನ ನಿರ್ಮಾಣ ಒಂದು ಪುಣ್ಯದ ಕೆಲಸ. ಈ ಐತಿಹಾಸಿಕ ಯೋಜನೆ ಶೀಘ್ರ ಸಂಪೂರ್ಣಗೊಳ್ಳಲು, ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ್ ಹೇರೂರು, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಯುವವಾಹಿನಿ ಅಧ್ಯಕ್ಷ ದಯಾನಂದ ಕರ್ಕೇರ, ಕಡೆಕಾರ್ ಗ್ರಾಪಂ ಅಧ್ಯಕ್ಷ ಜಯಕರ ಸೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಮಿಥುನ್ ಅಮೀನ್ ಸ್ವಾಗತಿಸಿದರು. ಸದಾಶಿವ ಅಮೀನ್ ವಂದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))