ಕುವೆಂಪು ಸಾರಸ್ವತ ಲೋಕದ ಮೊದಲ ಶೂದ್ರ ಮಹಾಕವಿ

| Published : Jan 06 2025, 01:01 AM IST

ಸಾರಾಂಶ

ರಾಮನಗರ: ಅವಿದ್ಯೆ, ಮೂಢನಂಬಿಕೆ ಹಾಗೂ ರೋಗಗ್ರಸ್ತ ವಾತಾವರಣದಲ್ಲಿ ಶಿಕ್ಷಣ ಪಡೆದು, ಸಾರಸ್ವತ ಲೋಕದ ಮೊದಲ ಶೂದ್ರ ಮಹಾಕವಿಯಾಗಿ ಹೊರಹೊಮ್ಮಿದ ಕುವೆಂಪು ಅವರು ವರ್ತಮಾನದ ಬೆಳಕಾಗಿದ್ದಾರೆ ಎಂದು ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಬಣ್ಣಿಸಿದರು.

ರಾಮನಗರ: ಅವಿದ್ಯೆ, ಮೂಢನಂಬಿಕೆ ಹಾಗೂ ರೋಗಗ್ರಸ್ತ ವಾತಾವರಣದಲ್ಲಿ ಶಿಕ್ಷಣ ಪಡೆದು, ಸಾರಸ್ವತ ಲೋಕದ ಮೊದಲ ಶೂದ್ರ ಮಹಾಕವಿಯಾಗಿ ಹೊರಹೊಮ್ಮಿದ ಕುವೆಂಪು ಅವರು ವರ್ತಮಾನದ ಬೆಳಕಾಗಿದ್ದಾರೆ ಎಂದು ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಬಣ್ಣಿಸಿದರು.

ತಾಲೂಕಿನ ಬಿಡದಿಯ ತ್ಯಾಗರಾಜು‌ ಸೆಂಟ್ರಲ್ ಶಾಲೆ ಆವರಣದಲ್ಲಿ ಬಿಡದಿಯ ನಾಡಪ್ರಭು ಶ್ರೀ ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಹಾಗೂ ತ್ಯಾಗರಾಜ ಶಾಲೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡಿನ ಅಸ್ಮಿತೆಯನ್ನು ಕುವೆಂಪು ಅವರು ನಮಗೆ‌ ಕಲಿಸಿದರು. ಶ್ರೀಸಾಮನ್ಯ, ಮಹಿಳೆಯರು, ಯುವಕರು ಹಾಗೂ ಶೋಷಿತರ ಬದುಕಿನ ಕುರಿತು ವಿಶೇಷ ಕಾಳಜಿ ಹೊಂದಿದ್ದರು. ಶ್ರೀಸಾಮಾನ್ಯರೆ ಭಗವದ್ ಮಾನ್ಯಂ ಎಂಬುದನ್ನು ಜಗತ್ತಿಗೆ ಸಾರಿದರಲ್ಲದೇ, ಸರ್ವ ಸಮಭಾವದ ಜಗತ್ತಿಗಾಗಿ ಅವರ ಮನ ಸದಾಕಾಲವೂ ತುಡಿಯುತ್ತಿತ್ತು ಎಂದರು.

ವಿಶ್ವ ಒಕ್ಕಲಿಗ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಕುವೆಂಪು ಅವರ ಬಗ್ಗೆ ಯುವ ಸಮಯದ ಇತ್ತೀಚೆಗೆ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಪ್ರಚಾರ ಮಾಡಿದ್ದರೆ ಕುವೆಂಪು ಅವರಿಗೆ ನೋಬಲ್ ಪ್ರಶಸ್ತಿ ಬರುತಿತ್ತು ಎಂದು ಅಭಿಪ್ರಾಯಪಟ್ಟರು.

ಕುವೆಂಪು ಅವರು 10 ಹಲವು ನಾಟಕಗಳನ್ನು ರಚನೆ ಮಾಡಿದ್ದಾರೆ. ಅದರಲ್ಲಿ ಸಮಾಜವನ್ನು ತಿದ್ದುವ ನಾಟಕಗಳನ್ನು ಸಹ ಬರೆದಿದ್ದಾರೆ. ಇತ್ತೀಚೆಗೆ ಮೌಢ್ಯದ ಕಡೆಗೆ ಹೆಚ್ಚು ಜನರು ಜಾರುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಮೌಢ್ಯದ ಕಡೆಗೆ ಹೆಚ್ಚು ಜಾರಿದರೆ ನೆಮ್ಮದಿಯಿಂದ ಬದಕು ಸಾಗಿಸಲು ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರ ಮತ್ತೊಂದು ಜನ್ಮವೆ ಕುವೆಂಪು ಅವರು. ಇತ್ತೀಚಿನ ದಿನಗಳಲ್ಲಿ ಎಲ್ಲರು ಬುದ್ದಿವಂತರಾಗುತ್ತಿದ್ದಾರೆ. ಆದರೆ ಹೃದಯವಂತರಾಗುತ್ತಿಲ್ಲ. ರೈತರಿಗೆ ಮಹತ್ವ ಕೊಟ್ಟು ಗೀತೆಯನ್ನೆ ರಚನೆ ಮಾಡಿದ್ದರು. ಆದರೆ ಇಂದು ಆ ಮಹತ್ವ ರೈತರಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಮಾತನಾಡಿ, ಕುವೆಂಪು ಅವರ ನಾಟಕಗಳು ಪ್ರಸ್ತುತ ಜಗತ್ತಿಗೆ ಕನ್ನಡಿ ಹಿಡಿದಂತಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಹಾಗೂ ತೆರೆಮರೆಯ ಸಾಮಾಜಿಕ ಸಂಕಷ್ಟಗಳನ್ನು ಸಮಾಜದೆದರು ತೆರೆದಿಟ್ಟು ದಿಟ್ಟತನದ ಬರಹಗಳಿಂದ ಪ್ರಾತಃಸ್ಮರಣೀಯರಾಗಿ ಉಳಿದಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಅವರು ಪಡೆಯದ ಪ್ರಶಸ್ತಿಗಳಿಲ್ಲ, ಬರೆಯದ ಸಾಹಿತ್ಯವಿಲ್ಲ. ಅವರು ಹಾಕಿಕೊಟ್ಟ ವೈಚಾರಿಕತೆಯ ಮೇಲ್ಪಂಕ್ತಿಯಲ್ಲಿ ಯುವಜನರು ಸಾಗಬೇಕು ‌ಎಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಡಾ. ವಿಜಯ್ ರಾಂಪುರ, ಚಿನ್ನದ ಪದಕ ಪಡೆದ ಬಾನಂದೂರು ಸಾಗರ್ ಮತ್ತು ಬಿಡದಿಯ ವಿಜಯಲಕ್ಷ್ಮಿ ಚವ್ಹಾಣ್ ಅವರನ್ನು ಸನ್ಮಾನಿಸಲಾಯಿತು.

ತ್ಯಾಗರಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂದೀಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ‌ ಬಿ.ಟಿ. ನಾಗೇಶ್, ಬಾನಂದೂರು ನಂಜುಂಡಿ, ನಾಡ ಪ್ರಭು ಶ್ರೀ ಕೆಂಪೇಗೌಡ ಒಕ್ಕಲಿಗರ ಟ್ರಸ್ಟ್ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷರಾದ ಸಂದೀಪ್, ರವಿರಾಜ್, ಕಾರ್ಯಧ್ಯಕ್ಷ ನಿತ್ಯಾನಂದ, ಖಜಾಂಚಿ ಪಾರ್ಥ ಸದಸ್ಯರಾದ ಷಣ್ಮುಗ, ಬಸವರಾಜು, ರಾಧಕೃಷ್ಣ, ಮಾದೇಶ್, ವೆಂಕಟೇಶ್, ಶಾಲೆಯ ಪ್ರಾಂಶುಪಾಲರಾದ ವಿದ್ಯಾಲಕ್ಷ್ಮಿ ಉಪಸ್ಥಿತರಿದ್ದರು.

------

5ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕಿನ ಬಿಡದಿಯ ತ್ಯಾಗರಾಜು‌ ಸೆಂಟ್ರಲ್ ಶಾಲೆ ಆವರಣದಲ್ಲಿ ನಡೆದ ರಾಷ್ಟ್ರ ಕವಿ ಕುವೆಂಪು ಅವರ 120ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಡಾ. ವಿಜಯ್ ರಾಂಪುರ, ಚಿನ್ನದ ಪದಕ ಪಡೆದ ಬಾನಂದೂರು ಸಾಗರ್ ಮತ್ತು ಬಿಡದಿಯ ವಿಜಯಲಕ್ಷ್ಮಿ ಚವ್ಹಾಣ್ ಅವರನ್ನು ಸನ್ಮಾನಿಸಲಾಯಿತು.