ಕುವೆಂಪುನಗರ ಧಗ್ರಾಯೋ ವತಿಯಿಂದ ಮಹಿಳಾ ವಿಚಾರಗೋಷ್ಠಿ

| Published : Dec 23 2024, 01:03 AM IST

ಕುವೆಂಪುನಗರ ಧಗ್ರಾಯೋ ವತಿಯಿಂದ ಮಹಿಳಾ ವಿಚಾರಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಯೋಜನೆಗಳು, ಸದಸ್ಯರಲ್ಲಿ ವ್ಯವಹಾರ ಜ್ಞಾನ, ಸಂಘಗಳಿಂದ ಆಗುವ ಉಪಯೋಗಗಳು,

ಕನ್ನಡಪ್ರಭ ವಾರ್ತೆ ಮೈಸೂರು

ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕುವೆಂಪುನಗರ ಶಾಖೆಯು ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಏರ್ಪಡಿಸಿತ್ತು.

ರಂಗಕರ್ಮಿ ಸರೋಜಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ,ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ವಿಷಯದ ಕುರಿತು ಮಾತನಾಡಿದರು

ಜಿಲ್ಲಾ ಹಿರಿಯ ನಿರ್ದೇಶಕ ವಿಜಯ್ ಕುಮಾರ್ ನಾಗನಾಳ ಮಾತನಾಡಿ, ಯೋಜನೆಗಳು, ಸದಸ್ಯರಲ್ಲಿ ವ್ಯವಹಾರ ಜ್ಞಾನ, ಸಂಘಗಳಿಂದ ಆಗುವ ಉಪಯೋಗಗಳು, ಶಿಸ್ತು, ಮಕ್ಕಳ ಶಿಕ್ಷಣದಲ್ಲಿ ತಂದೆ ತಾಯಿಯರ ವಹಿಸಬೇಕಾದ ಜವಾಬ್ದಾರಿಗಳು, ಉಳಿತಾಯ, ಸ್ವಉದ್ಯೋಗ, ಡಿ. ವೀರೇಂದ್ರ ಹೆಗ್ಗಡೆ ದಂಪತಿಗಳ ಪರಿಕಲ್ಪನೆ ಕುರಿತು ಮಾಹಿತಿ ನೀಡಿದರು.

ಮೈಸೂರು ಪ್ರಾದೇಶಿಕ ವಿಭಾಗದ ಮಹಿಳಾ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಮೂಕಾಂಬಿಕಾ ಪ್ರಾಸ್ತಾವಿಕ ಭಾಷಣ ಮಾಡಿ, ಜ್ಞಾನ ವಿಕಾಸ ಕಾರ್ಯಕ್ರಮ, ಮಹಿಳಾ ಸಬಲೀಕರಣ, ಮಾಶಾಸನ, ನಿರ್ಗತಿಕರಿಗೆ ವಾತ್ಯಲ್ಯ ಮನೆ ರಚನೆಯ ಬಗ್ಗೆ ಮಾಹಿತಿ ನೀಡಿದರು.

ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆ, ಜಾನಪದ ನೃತ್ಯ ಮತ್ತು ಕೋಲಾಟ, ಜ್ಞಾನ ವಿಕಾಸ ಮಾದರಿ ನಾರಿ ಗುರುತಿಸುವಿಕೆ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಧ್ಯಕ್ಷೆ ವಿದ್ಯಾಶ್ರೀ, ಯೋಜನಾಧಿಕಾರಿ ಶಕುಂತಲಾ, ಎಂ.ಎಸ್. ಗೀತಾ, ಶಾಲಾ ಮುಖ್ಯ ಶಿಕ್ಷಕರಾದ ಮಹಾದೇವ, ನಿರ್ಮಲಾ, ಸೇವಾಪ್ರತಿನಿಧಿಗಳು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ, ಜ್ಞಾನ ವಿಕಾಸ ಸಮನ್ವಯಧಿಕಾರಿ ಮತ್ತು ಸದಸ್ಯರು ಭಾಗವಹಿಸಿದ್ದರು.