ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕನ್ನಡಪ್ರಭ’ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ), ಹಿರಿಯ ಪತ್ರಕರ್ತರಾದ ಅನಂತ ಚಿನಿವಾರ್, ಜಾನ್ ಮಥಾಯಿಸ್, ರವಿಪ್ರಕಾಶ್ ಸೇರಿದಂತೆ 31 ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ ಪ್ರಕಟಿಸಲಾಗಿದೆ.ಗಿರೀಶ್ ರಾವ್ ಹತ್ವಾರ್ (ಗೊಮ್ಮಟ ಮಾಧ್ಯಮ ಪ್ರಶಸ್ತಿ), ಬಿ.ವಿ. ಗೋಪಿನಾಥ್ (ಡಿವಿಜಿ ಪ್ರಶಸ್ತಿ), ರವಿಪ್ರಕಾಶ್ (ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ), ಮೀನಾ ಮೈಸೂರು (ಎಸ್.ವಿ. ಜಯಶೀಲರಾವ್ ಪ್ರಶಸ್ತಿ), ಅನಂತ ಚಿನಿವಾರ್ (ಸಿ.ಆರ್.ಕೃಷ್ಣರಾವ್ ಪ್ರಶಸ್ತಿ), ಜಾನ್ ಮಥಾಯಿಸ್ (ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ), ಮಾವಳ್ಳಿ ಶಂಕರ್ (ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ), ಅಡಿವೇಂದ್ರ ಇನಾಂದಾರ (ಪಾಟೀಲ್ ಪುಟ್ಟಪ್ಪ (ಪಾಪು) ಪ್ರಶಸ್ತಿ), ಮಂಜುಳಾ ಕಿರುಗಾವಲು (ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ), ಡಿ.ಜಿ. ಮೋಮಿನ್ (ಬದರಿನಾಥ ಹೊಂಬಾಳೆ ಪ್ರಶಸ್ತಿ), ದಿನೇಶ್ ಗೌಡಗೆರೆ (ಕಿಡಿಶೇಷಪ್ಪ ಪ್ರಶಸ್ತಿ), ಎಚ್.ಸಿ. ದಿನೇಶ್ ಕುಮಾರ್ (ರವಿ ಬೆಳಗೆರೆ ಪ್ರಶಸ್ತಿ), ಭವಾನಿ ಲಕ್ಷ್ಮೀನಾರಾಯಣ (ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ), ಬಿ.ಎಸ್. ಜಯರಾಂ (ಎಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ), ಟಿ.ವಿ. ರಾಜೇಶ್ವರ (ರಾಜಶೇಖರ ಕೋಟಿ ಪ್ರಶಸ್ತಿ).
ಎಚ್.ಬಿ. ದಿನೇಶ್ (ಪಿ.ರಾಮಯ್ಯ ಪ್ರಶಸ್ತಿ), ಪ್ರದೀಪ್ ಅಣ್ಣಾಜಿ ಕುಲಕರ್ಣಿ (ಮಾ. ರಾಮಮೂರ್ತಿ ಪ್ರಶಸ್ತಿ), ಕೆ. ಸುರೇಶ್ (ಮಹದೇವ ಪ್ರಕಾಶ್ ಪ್ರಶಸ್ತಿ), ಶ್ರೀಕಾಂತ್ ಭಟ್ (ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ), ಜಿ. ವಾದಿರಾಜ್ ಕಮರೂರು (ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ), ಕಣ್ಣಪ್ಪ ಉಷಾಮಹಿ (ಎಂ. ನಾಗೇಂದ್ರ ರಾವ್ ಪ್ರಶಸ್ತಿ), ಬಿ.ಕೆ. ರಮ್ಯಶ್ರೀ (ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ), ಹರ್ಷವರ್ಧನ್ ಬ್ಯಾಡನೂರು (ಅಪ್ಪಾಜಿಗೌಡ (ಸಿನಿ) ಪ್ರಶಸ್ತಿ), ಎಸ್.ಆರ್. ನಂದಿಹಳ್ಳಿ (ಮೂಡಣ, ಹಾವೇರಿ ಪ್ರಶಸ್ತಿ), ಕೆ.ಎಚ್. ರುದ್ರಯ್ಯ, ಕೆ. ಕಿರಣ್, ಬಿ. ಉಮೇಶ್ ನಾಯಕ್, ಅಕ್ರಮ್ ಅಬ್ದುಲ್ ಹಕ್, ಇಬ್ರಾಹಿಂ ಅಡ್ಕಸ್ಥಳ, ಬಿಳಿಗಿರಿ ಶ್ರೀನಿವಾಸ್, ಎಚ್.ಪಿ. ರವಿಕುಮಾರ್ (ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.ಚಿಕ್ಕಮಗಳೂರಿನಲ್ಲಿ ಜು. 25ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=
